Subscribe to Updates

    Get the latest creative news from FooBar about art, design and business.

    What's Hot

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ

    May 28, 2025

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಟ್ಟ ಮಕ್ಕಳ ಯಕ್ಷಗಾನ ರಂಗಪ್ರವೇಶ – ಗೆಜ್ಜೆ ಕಟ್ಟಿ ಕುಣಿದ ಪುಟಾಣಿಗಳು
    Yakshagana

    ಪುಟ್ಟ ಮಕ್ಕಳ ಯಕ್ಷಗಾನ ರಂಗಪ್ರವೇಶ – ಗೆಜ್ಜೆ ಕಟ್ಟಿ ಕುಣಿದ ಪುಟಾಣಿಗಳು

    May 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಬೆಳ್ತಂಗಡಿ ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಗರದ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಸಹಯೋಗದೊಂದಿಗೆ ರಿಷಿ ಕಲಾ ಕೇಂದ್ರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳ ಯಕ್ಷಗಾನ ರಂಗ ಪ್ರವೇಶ ‘ರಿಷಿ ಹೆಜ್ಜೆ – ಗೆಜ್ಜೆ ಸಂಭ್ರಮ 2023’ ಕಾರ್ಯಕ್ರಮ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ದಿನಾಂಕ 14-05-2023 ಭಾನುವಾರ ನಡೆಯಿತು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಶ್ರೀ ಸುರೇಂದ್ರ ರಾವ್ “ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನದ ಹೆಜ್ಜೆ-ಗೆಜ್ಜೆ ಸಂಭ್ರಮದಲ್ಲಿ ಮುಂದೆ ಉಜ್ವಲ ಭವಿಷ್ಯವುಳ್ಳ ಮಕ್ಕಳು ಯಕ್ಷಗಾನದಲ್ಲಿ ರಂಗ ಪ್ರವೇಶ ಮಾಡುತ್ತಿದ್ದಾರೆ. ಯಕ್ಷಗಾನ ಇಂದು ದ.ಕ. ಜಿಲ್ಲೆಯಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದೆ. ಇದಕ್ಕೆ ಶ್ರೀ ಕ್ಷೇತ್ರ ಕಟೀಲು ಹಾಗೂ ಯಕ್ಷಗಾನ ಪ್ರೋತ್ಸಾಹಕರು ಕಾರಣ” ಎಂದರು.

    ಆಶೀರ್ವಚನ ನೀಡಿದ ಕಟೀಲು ದೇವಸ್ಥಾನದ ಅರ್ಚಕ ಸದಾನಂದ ವೆಂಕಟೇಶ ಅಸ್ರಣ್ಣರವರು “ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಸಂಗೀತ, ನೃತ್ಯ, ವಾದನ, ವಾಚಿಕ ಕಲೆಗಳಲ್ಲಿ ನಿಪುಣರಾಗಬೇಕೆಂದಿದ್ದಲ್ಲಿ ಯಕ್ಷಗಾನದಲ್ಲಿ ತೊಡಗಿಕೊಳ್ಳಬೇಕು. ಭರತನಾಟ್ಯ, ನಾಟಕ ಕಲೆಗಳಿಗಿಂತಲೂ ಶ್ರೇಷ್ಠವಾದ ಕಾರಣ ಯಕ್ಷಗಾನವನ್ನು ಗಂಡು ಕಲೆ ಎಂದು ಗುರುತಿಸಲಾಯಿತು. ನಮ್ಮನ್ನು ನಾವು ವೃದ್ಧಿಸಿಕೊಳ್ಳುವ ಕಲೆಯೇ ಯಕ್ಷಗಾನ. ನಮ್ಮ ಸಂಸ್ಕೃತಿ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಪುರಾಣ ಪ್ರಸಂಗಗಳನ್ನು ಪ್ರದರ್ಶಿಸಲಾಯಿತು. ಇಂದು ಯಕ್ಷಗಾನ ಅತ್ಯವಶ್ಯಕವಾದ ಕಲೆ. ಅಂತಹ ಯಕ್ಷಗಾನವನ್ನು ಉಚಿತವಾಗಿ ಮಕ್ಕಳಿಗೆ ಹೇಳಿಕೊಟ್ಟಿದ್ದಾರೆ. ರಂಗಪ್ರವೇಶ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಒದಗಲಿ” ಎಂದು ಪ್ರಾರ್ಥಿಸಿದರು.

    ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರತಿಷ್ಠಾನದ ಗೌರವಾಧ್ಯಕ್ಷ ಶ್ರೀಧರ ಮಣಿಯಾಣಿ “ಹಿಂದಿನಿಂದಲೇ ಯಕ್ಷಗಾನ ಅತ್ಯುನ್ನತ ಸ್ಥಾನವನ್ನು ಪಡೆದುಕೊಂಡಿದೆ. ಆದ್ದರಿಂದ ಇಂದಿನ ಪೀಳಿಗೆಗೆ ಯಕ್ಷಗಾನದಲ್ಲಿ ಅಭಿರುಚಿ ಮೂಡಿಸುವ ಅವಶ್ಯಕತೆಯಿದೆ” ಎಂದರು.

    ಮುಖ್ಯ ಅತಿಥಿಗಳಾಗಿದ್ದ ಬ್ಯಾಂಕ್ ಆಫ್ ಬರೋಡ ಸಹಾಯಕ ಜನರಲ್ ಮೆನೇಜರ್ ಜಯಪ್ರಕಾಶ್ ಸಿನ್ಹ, ಉರ್ವ ಪೊಲೀಸ್ ಠಾಣೆ ವೃತ್ತ ನಿರೀಕ್ಷಕಿ ಭಾರತಿ, ದ.ಕ. ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಇಂಜಿನಿಯ‌ರ್ ವೇಣುಗೋಪಾಲ ಎಚ್., ಗುತ್ತಿಗೆದಾರ ನಾರಾಯಣ ಪಿ., ಮೆಸ್ಕಾಂ ನಿವೃತ್ತ ಅಧಿಕಾರಿ ಪುರುಷೋತ್ತಮ ಮ೦ಜಲಕಟ್ಟೆ ಶುಭ ಹಾರೈಸಿದರು. ಪ್ರತಿಷ್ಠಾನದ ಸಂಸ್ಥಾಪಕ ದಿವಾಕರ್ ಪದ್ಮುಂಜ, ಅಧ್ಯಕ್ಷ ಅವಿನಾಶ್ ಕುಲಾಲ್ ಉಪಸ್ಥಿತರಿದ್ದರು. ಯಕ್ಷಗಾನ ಗುರು ವಿಶ್ವನಾಥ ಪದ್ಮುಂಜ ಅವರನ್ನು ರಿಷಿ ಕಲಾಕೇಂದ್ರದ ವಿದ್ಯಾರ್ಥಿಗಳ ಪೋಷಕರ ಪರವಾಗಿ ಸನ್ಮಾನಿಸಿಲಾಯಿತು.

    ಕಟೀಲು ದೇವಸ್ಥಾನದ ಅರ್ಚಕ ಸದಾನಂದ ವೆಂಕಟೇಶ ಅಸ್ರಣ್ಣ ಅವರು ಮಕ್ಕಳಿಗೆ ಯಕ್ಷಗಾನ ರಂಗ ಪ್ರವೇಶ ಹಿನ್ನೆಲೆಯಲ್ಲಿ ಗೆಜ್ಜೆ ನೀಡಿ ಆಶೀರ್ವದಿಸಿದರು. ಬಳಿಕ ತರಬೇತಿ ಪಡೆದ ಮಕ್ಕಳಿಂದ ಭವ್ಯಶ್ರೀ ಭಾಗವತಿಕೆಯಲ್ಲಿ ‘ದಕ್ಷಯಜ್ಞ’ ಯಕ್ಷಗಾನ ಪ್ರದರ್ಶನಗೊಂಡಿತು.

    ವಸುಧಾ ಉಮೇಶ್ ಸನ್ಮಾನ ಪತ್ರ ಹಾಗೂ ದೇವಿಕಾ ಸುಳ್ಯ ವರದಿ ವಾಚಿಸಿದರು. ಉಮೇಶ್‌ ಸ್ವಾಗತಿಸಿ, ಜ್ಯೋತಿ ಶೆಟ್ಟಿ ವಂದಿಸಿ, ಸ್ವರ್ಣ ಕಾರ್ಯಕ್ರಮ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleವಿದ್ವಾಂಸದ್ವಯರಿಗೆ ‘ಮುದ್ದಣ ಪುರಸ್ಕಾರ’ ಪ್ರದಾನ
    Next Article ಮೇ 21ರಿಂದ ತಾಳಮದ್ದಲೆ ಸಪ್ತಾಹ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ
    roovari

    Add Comment Cancel Reply


    Related Posts

    ರಂಗ ಚಿನ್ನಾರಿಯಿಂದ ಸಂಸ್ಕೃತಿ ಉಳಿಸುವ ಕೆಲಸ – ಎಡನೀರು ಶ್ರೀ ಗಳು

    May 28, 2025

    ಸಮಾರೋಪಗೊಂಡ ಪುತ್ರಕಾಮೇಷ್ಠಿ ತಾಳಮದ್ದಲೆ ಸಪ್ತಾಹ

    May 28, 2025

    ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ‘ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025’ | ಜೂನ್ 01

    May 28, 2025

    ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಯಕ್ಷಗಾನ ವಿಚಾರ ಸಂಕಿರಣ, ಯಕ್ಷಗಾನ ಪ್ರದರ್ಶನ

    May 27, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.