ಬೈಲೂರು: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಇಂಡಿಯಾ ಪೌಂಡೇಷನ್ ಫಾರ್ ಆರ್ಟ್ಸ್ ಬೆಂಗಳೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇವರ ಸಹಯೋಗದಲ್ಲಿ ದ್ವಿತೀಯ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಅಂಗವಾಗಿ ‘ಬಣ್ಣದ ಗರಿ’ ಕರಾವಳಿಯ ವೀರ ವನಿತೆಯರ ಕಥನದ ‘ಮಕ್ಕಳ ಯಕ್ಷೋತ್ಸವ’ ಕಾರ್ಯಕ್ರಮವು ದಿನಾಂಕ : 08 ಏಪ್ರಿಲ್ 2025ರ ಮಂಗಳವಾರ ಸಂಜೆ ಘಂಟೆ 6.00 ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇಲ್ಲಿ ನಡೆಯಲಿದೆ.
ಸ.ಹಿ.ಪ್ರಾ.ಶಾಲೆ ಬೈಲೂರು ಇಲ್ಲಿನ ಸಹಶಿಕ್ಷಕರಾದ ಆನಂದ ಕುಲಾಲ ಇವರ ನಿರ್ದೇಶನದ ಈ ಯೋಜನೆ ಹಾಗೂ ‘ಯಕ್ಷಸಿರಿ ಶಂಕರನಾರಾಯಣ’ ಇದರ ಸಂಚಾಲಕರಾದ ಕಿಶೋರ ಕುಮಾರ ಆರೂರು ಇವರ ನಿರ್ದೇಶನದ ಈ ‘ಮಕ್ಕಳ ಯಕ್ಷೋತ್ಸವ’ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಸ್ಪರ್ಧೆಗಳು, ಶಾಲಾ ಮಕ್ಕಳಿಂದ ಹೆಜ್ಜೆ ಗೆಜ್ಜೆ – ನೃತ್ಯೋತ್ಸವ, 4 ನೇ ತರಗತಿ ವಿದ್ಯಾರ್ಥಿಗಳಿಂದ “ನಂಗೇಲಿ ಕಥನ” ಯಕ್ಷ ನೃತ್ಯರೂಪಕ, 5 ನೇ ತರಗತಿ ವಿದ್ಯಾರ್ಥಿಗಳಿಂದ “ಕಮಲಾದೇವಿ ಕಥನ” ಯಕ್ಷಗಾನ ತಾಳಮದ್ದಳೆ, ಸಾಹಿತಿಗಳು ಮತ್ತು ಚಿಂತಕರಾದ ಪೂರ್ಣಿಮಾ ಭಟ್ ಕಮಲಶಿಲೆ ಇವರಿಂದ ಮಕ್ಕಳ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ ವಿಷಯದ ‘ಸಭಾ ಸಂಭ್ರಮ’ – ಚಿಂತನ ಚಾವಡಿ, 6 ನೇ ತರಗತಿ ವಿದ್ಯಾರ್ಥಿಗಳಿಂದ ‘ರಾಣಿ ಚೆನ್ನಾಬೈರಾದೇವಿ’ ಯಕ್ಷಗಾನ, 7 ನೇ ತರಗತಿ ವಿದ್ಯಾರ್ಥಿಗಳಿಂದ, ‘ರಾಣಿ ಅಬ್ಬಕ್ಕ’ ಯಕ್ಷಗಾನವು ಪ್ರದರ್ಶನಗೊಳ್ಳಲಿದೆ.