ಮಂಗಳೂರು: ಕೋಡಿಕಲ್‌ನ ವಿಪ್ರ ವೇದಿಕೆಯು ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರ ಹಾಗೂ ಉಪನ್ಯಾಸ ಕಾರ್ಯಕ್ರಮ ದಿನಾಂಕ 09-07-2023ರಂದು ವಿಶು ಕುಮಾರ್ ಜೋಯಿಸರ ಸಭಾಗೃಹದಲ್ಲಿ ನಡೆಯಿತು. “ಸಂಸ್ಕಾರ, ಸಂಸ್ಕೃತಿ ಮತ್ತು ಸಂಸ್ಕೃತ” ಎಂಬ ವಿಷಯದ ಅತಿಥಿಯಾಗಿ ಆಗಮಿಸಿದ ಶಕ್ತಿ ರೆಸಿಡೆನ್ಸಿಯಲ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ವಿದ್ವಾನ್ ರವಿಶಂಕರ್ ಹೆಗಡೆ ದೊಡ್ನಳ್ಳಿ ಮಾತನಾಡುತ್ತಾ ಈ ಮೂರು ಶಬ್ದಗಳೊಂದಿಗೆ ನಮ್ಮ ಸನಾತನ ಸಂಸ್ಕೃತಿ ಇನ್ನೂ ನಮ್ಮೆಲ್ಲರ ರಕ್ತದಲ್ಲಿ ಇದೆ. ಆದರೆ ಇಂದು ನಾವುಗಳು ಅದನ್ನು ಗುರುತಿಸಲು ಮರೆತಿದ್ದೇವೆ. ಯುವ ಜನತೆಯಲ್ಲಿ ಜ್ಞಾನ ಸಂಪತ್ತಿಗೆ ಕೊರತೆ ಇಲ್ಲ. ಆದರೆ ಸಂಸ್ಕಾರದಿಂದ ಒಳಗೊಂಡ ಜ್ಞಾನವಿದ್ದಾಗ ಆತ ದೇಶಕ್ಕೆ ಒಂದು ಆಸ್ತಿಯಾಗಲು ಸಾಧ್ಯ. ಸಂಸ್ಕೃತ ಭಾಷೆ ಭಾರತೀಯ ಸಂಸ್ಕೃತಿಯ ಪರಂಪರೆಯ ಸಂಕೇತ. ಇದು ನಮ್ಮ ಪುರಾತನ ಗ್ರಂಥಗಳನ್ನು ರಕ್ಷಿಸುವ ಮತ್ತು ಪೋಷಿಸುವ ಮಾರ್ಗವನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಪ್ರ ವೇದಿಕೆಯ ಅಧ್ಯಕ್ಷ ಶ್ರೀಧರ ಹೊಳ್ಳ ಸ್ವಾಗತಿಸಿ, ಕಾರ್ಯದರ್ಶಿ ದುರ್ಗಾದಾಸ್ ಕಟೀಲು ವಂದಿಸಿದರು. ಕೋಶಾಧಿಕಾರಿ ಕಿಶೋರ್ ಕೃಷ್ಣ, ಗೌರವಾಧ್ಯಕ್ಷ ನ್ಯಾಯವಾದಿ ಜಯರಾಮ್ ಪದಕಣ್ಣಾಯ, ನಿಕಟಪೂರ್ವ ಅಧ್ಯಕ್ಷೆ ವಿದ್ಯಾ ರಾವ್, ಸೃಷ್ಟಿ ಗಿರೀಶ್ ರಾವ್, ಅವಿನಾಶ್, ಹರಿಪ್ರಸಾದ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸ್ಫೂರ್ತಿ ಹಾಗೂ ಗೋಕುಲ ಕೃಷ್ಣ ಅವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.