ವಿಟ್ಲ : ದೃಷ್ಟಿ ಸ್ಕೂಲ್ ಆಫ್ ಆರ್ಟ್ ವತಿಯಿಂದ ಪರಿಸರ ಸ್ನೇಹಿ ಗಣೇಶೋತ್ಸವದ ಪರಿಕಲ್ಪನೆಯೊಂದಿಗೆ ಮಕ್ಕಳಿಗಾಗಿ ವಿಶೇಷ ‘ಮಣ್ಣಿನ ಗಣಪ ಭವಿಷ್ಯದ ಹಸ್ತಗಳಿಂದ’ ಕಾರ್ಯಾಗಾರವನ್ನು ದಿನಾಂಕ 13 ಸೆಪ್ಟೆಂಬರ್ 2026ರಂದು ಬೆಳಿಗ್ಗೆ 9-00ರಿಂದ ಮಧ್ಯಾಹ್ನ 12-00ರವರೆಗೆ ವಿಟ್ಲದ ಶಾಲಾ ರಸ್ತೆಯಲ್ಲಿರುವ ಶ್ರೀ ವಿದ್ಯಾ ಟ್ಯೂಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ.
5ರಿಂದ 18 ವರ್ಷದೊಳಗಿನ ಮಕ್ಕಳು ಇದರಲ್ಲಿ ಭಾಗವಹಿಸಬಹುದು. ಭಾಗವಹಿಸುವ ಮಕ್ಕಳಿಗೆ ಮಣ್ಣು ಮತ್ತು ಅಗತ್ಯ ಸಾಮಗ್ರಿಗಳನ್ನು ಸಂಘಟಕರೇ ನೀಡಲಿದ್ದು, ಪರಿಣಿತರಿಂದ ತರಬೇತಿ ನೀಡಲಾಗುವುದು. ಮಕ್ಕಳು ತಾವೇ ತಯಾರಿಸಿದ ಗಣಪತಿ ಮೂರ್ತಿಯನ್ನು ಮನೆಗೆ ಕೊಂಡೊಯ್ದು ಪೂಜಿಸಬಹುದು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ನೀಡಲಾಗುವುದು. ಅಲ್ಲದೆ ಮನೆಯಲ್ಲಿ ಗಣಪತಿಯನ್ನು ಆಕರ್ಷಕವಾಗಿ ಅಲಂಕರಿಸಿ ಮೂರ್ತಿಯೊಂದಿಗೆ ಮಗುವಿನ ಫೋಟೋ ಕಳುಹಿಸಿದವರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.
ಈ ಕಾರ್ಯಾಗಾರದ ಪ್ರವೇಶ ಶುಲ್ಕ ಕೇವಲ ರೂ.300/- (ಸಾಮಗ್ರಿಗಳು ಸೇರಿ), ಮೊದಲ 10 ನೋಂದಣಿಗೆ ಹಾಗೂ ಒಂದೇ ಮನೆಯ ಇಬ್ಬರು ಮಕ್ಕಳಿಗೆ ವಿಶೇಷ ರಿಯಾಯಿತಿ ಇದೆ. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ 8310814115 6361183939ನ್ನು ಸಂಪರ್ಕಿಸಬಹುದು.


