ದಾವಣಗೆರೆ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ, ವನಿತಾ ಸಾಹಿತ್ಯ ವೇದಿಕೆ ದಾವಣಗೆರೆ ಹಾಗೂ ಸಂಸ್ಕಾರ ಭಾರತೀ ಕರ್ನಾಟಕ ದಾವಣಗೆರೆ ಇವರ ಸಹಯೋಗದಲ್ಲಿ ಹಿರಿಯ ಸಾಹಿತಿ ಟಿ. ಗಿರಿಜಾರವರ 12ನೇ ವರ್ಷದ ಸಂಸ್ಮರಣೆ ದತ್ತಿ ಉಪನ್ಯಾಸ ಸಮಾರಂಭವನ್ನು ದಿನಾಂಕ 04 ಜುಲೈ 2026ರಂದು ಬೆಳಿಗ್ಗೆ 11-00 ಗಂಟೆಗೆ ದಾವಣಗೆರೆ ಪಿ. ಜೆ. ಬಡಾವಣೆ ವನಿತಾ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ನೀಲಗುಂದ ಸಿದ್ಧರಾಮಣ್ಣ ಚನ್ನಮ್ಮ ಸ್ಮರಣಾರ್ಥ ದತ್ತಿ, ಹೊನ್ನನಾಯಕಹಳ್ಳಿ ಶ್ರೀಮತಿ ಗೌರಮ್ಮ ಶ್ರೀ ದೊಡ್ಡಮಹದೇವಪ್ಳರ ಸಿದ್ಧಪ್ಪ ದತ್ತಿ ಹಾಗೂ ಶ್ರೀಮತಿ ನಾಗರತ್ನಮ್ಮ ನೇತ್ರದಾನಿ ಐನಳ್ಳಿ ಕೊಟ್ರಪ್ಪನವರ ದತ್ತಿ ನಡೆಯಲಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ ಇದರ ಅಧ್ಯಕ್ಷರಾದ ಬಿ. ವಾಮ ದೇವಪ್ಪ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ವನಿತಾ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಹೆಚ್.ಕೆ. ಸತ್ಯಭಾಮ ಮಂಜುನಾಥ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಬಾ. ಮ. ಬಸವರಾಜಯ್ಯ ಇವರು ‘ಹಿರಿಯ ಸಾಹಿತಿ ಟಿ. ಗಿರಿಜಾರವರ ಸಾಹಿತ್ಯಿಕ ಸಾಧನೆಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

