ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರಿಂದ ಬನ್ನೂರಿನ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ತಿಂಗಳ ಸರಣಿ ತಾಳಮದ್ದಲೆ ಪಾರ್ತಿಸುಬ್ಬ ವಿರಚಿತ ‘ಅಂಗದ ಸಂಧಾನ’ ಎಂಬ ಆಖ್ಯಾನದೊಂದಿಗೆ ದಿನಾಂಕ 25 ಸೆಪ್ಟೆಂಬರ್ 2026ನೇ ಶುಕ್ರವಾರ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಶಿವಪ್ರಸಾದ್ ನಾಕೂರು ಹಾಗೂ ಚೆಂಡೆ ಮದ್ದಲೆಗಳಲ್ಲಿ ಪಿ.ಟಿ. ಜಯರಾಮ ಭಟ್, ಶರಣ್ಯ ನೆತ್ತರಕೆರೆ, ಆದಿತ್ಯ ಕೃಷ್ಣ ದ್ವಾರಕಾ ಸಹಕರಿಸಿದರು. ಮುಮ್ಮೇಳದಲ್ಲಿ ಬಡೆಕ್ಕಿಲ ಚಂದ್ರಶೇಖರ ಭಟ್ (ಶ್ರೀ ರಾಮ), ಗುಡ್ಡಪ್ಪ ಬಲ್ಯ (ಪ್ರಹಸ್ತ), ದುಗ್ಗಪ್ಪ ನಡುಗಲ್ಲು (ಹನೂಮಂತ), ಕಿಶೋರಿ ದುಗ್ಗಪ್ಪ ನಡುಗಲ್ಲು (ಅಂಗದ), ಮಾಂಬಾಡಿ ವೇಣುಗೋಪಾಲ ಭಟ್ (ರಾವಣ), ಶಾರದಾ ಅರಸ್ (ಸುಗ್ರೀವ) ಸಹಕರಿಸಿದರು. ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಪಳ್ಳತ್ತೋಡಿ ಸುಬ್ರಹ್ಮಣ್ಯ ಭಟ್ ಪ್ರಾಯೋಜಿಸಿದರು. ಸಂಘದ ಕೋಶಾಧಿಕಾರಿ ದುಗ್ಗಪ್ಪ ನಡುಗಲ್ಲು ಸ್ವಾಗತಿಸಿ, ವಂದಿಸಿದರು.
