ಬೆಂಗಳೂರು : ಪ್ರವರ ಥಿಯೇಟರ್ ಬೆಂಗಳೂರು ಇದರ ಸಹಕಾರದೊಂದಿಗೆ ಅಂತರಂಗ ಬಹಿರಂಗ ತಂಡ ಪ್ರಸ್ತುತ ಪಡಿಸುವ ‘Mr. ರಾವ್ & ಅಸೋಸಿಯೇಟ್ಸ್’ ನಾಟಕ ಪ್ರದರ್ಶನವನ್ನು ದಿನಾಂಕ 15 ಮಾರ್ಚ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಮುಚ್ಛಯದಲ್ಲಿ ಆಯೋಜಿಲಾಗಿದೆ. ಈ ನಾಟಕವನ್ನು ಭೀಷ್ಮ ರಾಮಯ್ಯ ರಚಿಸಿದ್ದು, ಬಾಷ್ ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕ್ಕಿಂಗ್‌ಗಾಗಿ 86605 47776 ಸಂಖ್ಯೆಯನ್ನು ಸಂಪರ್ಕಿಸಬಹುದು.
ಈ ನಾಟಕವು ತಂದೆ ತಾಯಿಗಳು ಅಂದ್ರೆ ಮಕ್ಕಳಿಗೆ ಜವಾಬ್ದಾರಿ ಆಗಬೇಕೆ ವಿನಹ, ಹಣ ಆಸ್ತಿ ಕೊಡೊ ತಿಜೋರಿಗಳಲ್ಲ ಎಂಬ ಪ್ರಸ್ತುತ ಸಮಾಜದ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಆಧುನಿಕ ಜಗತ್ತು ಮನುಷ್ಯನಲ್ಲಿ ಸೂಕ್ಷ್ಮ ಸಂವೇದನೆಯನ್ನು ನಶಿವುವಂತೆ ಮಾಡಿದೆ. ಮನುಷ್ಯ ಮನುಷ್ಯನ ನಡುವೆ ಸಂಬಂಧಗಳನ್ನು ಅಳಿಸುತ್ತಿವೆ. ಗಟ್ಟಿಯಾಗಿ ಇರಬೇಕಾದ ರಕ್ತ ಸಂಬಂಧಗಳನ್ನು ಜೊಳ್ಳು ಮಾಡುತ್ತಿವೆ. ಒಂಟಿಯಾಗಿ ಬದುಕುತ್ತಿದ್ದ ಮನುಷ್ಯನು ಸಂಬಂಧಗಳನ್ನು ಕಟ್ಟಿಕೊಂಡಿದ್ದೆ ಮುಪ್ಪಿಗೆ ಆತುಕೊಳ್ಳಲು. ಈ ಸಂಬಂಧಗಳನ್ನೇ ದಿಕ್ಕರಿಸಿ ಈ ಆತುವಿಕೆಯನ್ನು ಕತ್ತರಿಸಿ ಹೋಗುವಾಗ ಹಿರಿಯರಿಗಾಗುವ ಒಳಬೇಗುದಿಯನ್ನು ಹಲವು ತಿಳಿ ಹಾಸ್ಯಗಳ ಮುಖೇನ ಮಾರ್ಮಿಕವಾಗಿ ಈ ನಾಟಕದ ಕಥಾ ವಸ್ತು ಅಭಿವ್ಯಕ್ತಿಸುತ್ತದೆ.