ಪಡುಬೆಳ್ಳೆ : ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಗಳು ಪಡುಬೆಳ್ಳೆ ಇದರ ವತಿಯಿಂದ ಕೃತಿ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 20 ಜೂನ್ 2026ರಂದು ಪೂರ್ವಾಹ್ನ 10-30 ಗಂಟೆಗೆ ಶಾಲಾ ಸಭಾಭವನದಲ್ಲಿ ಆಯೋಜಿಸಲಾಗಿದೆ. ಪ್ರೊ. ಎಸ್.ಎಸ್.ಡಿ. ಪೂಜಾರಿ ಇವರು ರಚಿಸಿರುವ ಬಯೋಗ್ರಾಫಿಕಲ್ ಸ್ಕೆಚ್ ಆಫ್ ಮುದ್ದು ಮೂಡುಬೆಳ್ಳೆ ಕೃತಿ ಲೋಕಾರ್ಪಣೆಗೊಳ್ಳಲಿದೆ.
ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶಿವಾಜಿ ಎಸ್. ಸುವರ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಸಾಹಿತ್ಯ ವಿಮರ್ಶಕರಾದ ಡಾ. ಬಿ. ಜನಾರ್ದನ ಭಟ್ ಬೆಳ್ಮಣ್ಣು ಇವರು ಕೃತಿ ಬಿಡುಗಡೆ ಮಾಡಲಿದ್ದಾರೆ.

