ಉದ್ಯಾವರ : ನಿರಂತರ್ ಉದ್ಯಾವರ್ (ರಿ.) ಇವರ ವತಿಯಿಂದ 8ನೇ ವರ್ಷದ ಬಹುಭಾಷಾ ನಿರಂತರ್ ನಾಟಕೋತ್ಸವವನ್ನು ದಿನಾಂಕ 05ರಿಂದ 08 ಫೆಬ್ರವರಿ 2026ರವರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಉದ್ಯಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ.
ದಿನಾಂಕ 05 ಫೆಬ್ರವರಿ 2026ರಂದು ಸಂತೋಷ್ ನಾಯಕ್ ಪಟ್ಲ ಇವರ ರಂಗ ಪಠ್ಯ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ಇವರಿಂದ ‘ನೆಲ ನೀರ್ ದ ದುನಿಪು’, ದಿನಾಂಕ 06 ಫೆಬ್ರವರಿ 2026ರಂದು ಚಿದಂಬರ ರಾವ್ ಜಂಬೆ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಶಿವಮೊಗ್ಗದ ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸುವ ‘ನಮ್ಮೊಳಗೊಬ್ಬ ಗಾಂಧಿ’, ದಿನಾಂಕ 07 ಫೆಬ್ರವರಿ 2026ರಂದು ಡೆನಿಸ್ ಮೊಂತೇರ್ ನಿರ್ದೇಶನದಲ್ಲಿ ಮಂಗಳೂರಿನ ಅಸ್ತಿತ್ವ (ರಿ.) ತಂಡದಿಂದ ‘ಭಾಂಗಾರ್ ಮನಿಸ್’, ದಿನಾಂಕ 08 ಫೆಬ್ರವರಿ 2026ರಂದು ಅರುಣ್ ಲಾಲ್ ರಚನೆ, ರಂಗರೂಪ ಮತ್ತು ನಿರ್ದೇಶನದಲ್ಲಿ ಕೇರಳದ ಲಿಟಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್ ತಂಡದವರಿಂದ ‘ಕೂಹೂ’ ನಾಟಕಗಳು ಪ್ರದರ್ಶನಗೊಳ್ಳಲಿದೆ.

