ಮೈಸೂರು : ಮೈಸೂರು ವಿಜ್ಞಾನ ನಾಟಕೋತ್ಸವ ಟ್ರಸ್ಟ್ (ರಿ.) ಇದರ ವತಿಯಿಂದ ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ ಮತ್ತು ಸ್ವಾಮಿ ವಿವೇಕಾನಂದ ಯೂಥ್ ಮೂವ್ ಮೆಂಟ್ ಇವರ ಸಹಯೋಗದಲ್ಲಿ 9ನೇ ವರ್ಷದ ಅವತರಣಿಕೆ ‘ಮೈಸೂರು ವಿಜ್ಞಾನ ನಾಟಕೋತ್ಸವ 2026’ವನ್ನು ದಿನಾಂಕ 24 ಅಕ್ಟೋಬರ್ 2026 ಪ್ರತಿದಿನ ಸಂಜೆ 5-00 ಗಂಟೆಗೆ ಮೈಸೂರಿನ ಜೆ.ಸಿ.ಎ.ಸಿ. ವೇದಿಕೆ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸಂಜೆ 5-00 ಗಂಟೆಗೆ ಮೈಸೂರು ಕ್ವಿಜ್ ಕ್ಲಬ್ ವತಿಯಿಂದ ‘ಮಹಿಳಾ ವಿಜ್ಞಾನಿಗಳು’ ಕ್ವಿಜ್, ಬಿ.ಎಸ್. ಕೃಷ್ಣಮೂರ್ತಿ ಇವರಿಂದ ‘ಗಣಿತ ಕುಣಿತ’ ಪುಸ್ತಕ ಪ್ರದರ್ಶನ, ಬೆಂಗಳೂರಿನ ರಾಷ್ಟ್ರೀಯ ಜೀವವಿಜ್ಞಾನಗಳ ಕೇಂದ್ರ ಮತ್ತು ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆಯಿಂದ ವಿಜ್ಞಾನ ಪ್ರದರ್ಶಿಕೆ ಹಾಗೂ ಮೈಸೂರಿನ ಕಲಾ ಸುರುಚಿ ಇವರಿಂದ ಶ್ರೀ ವಿದ್ಯಾ ಕಾಮತ್ ಇವರ ನಿರ್ದೇಶನದಲ್ಲಿ ‘ಆಗಸದ ಮೌನ’ ನಾಟಕ ಪ್ರದರ್ಶನ ನಡೆಯಲಿದೆ.

