ಬೆಂಗಳೂರು : ರಂಗದರ್ಶನ ಪ್ರದರ್ಶನ ಕಲಾಕೇಂದ್ರ ಬೆಂಗಳೂರು ಇದರ ವತಿಯಿಂದ ವರಕವಿ ದ.ರಾ. ಬೇಂದ್ರೆ ಕಾವ್ಯದ ರಂಗಾಭಿವ್ಯಕ್ತಿ ‘ನಾದಲೀಲೆ’ ಏಕವ್ಯಕ್ತಿ ರಂಗಪ್ರಯೋಗವನ್ನು ದಿನಾಂಕ 19 ಆಗಸ್ಟ್ 2026ರಂದು ಸಂಜೆ ಗಂಟೆ 6-30ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಡಾ. ಬೇಲೂರು ರಘುನಂದನ್ ಇವರ ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನದ ಈ ಏಕವ್ಯಕ್ತಿ ರಂಗಪ್ರಯೋಗವನ್ನು ಮೈಕೊ ಶಿವಶಂಕರ್ ಇವರು ಅಭಿನಯಿಸಲಿದ್ದಾರೆ.

