ಮಂಗಳೂರು : ನಮ್ಮ ಕುಡ್ಲದವರು ಪ್ರಸ್ತುತ ಪಡಿಸುವ ವಿದ್ಯಾರ್ಥಿಗಳಿಗೆ ‘ನೃತ್ಯ ಭಜನೆ -2023’ ಸೀಸನ್ -2 ಮೊದಲ ಸುತ್ತಿನ ಸ್ಪರ್ಧೆ ದಿನಾಂಕ :01-07-2023 ಹಾಗೂ 02-07-2023ರಂದು ಮಂಗಳೂರಿನ ಡೊಂಗರಕೇರಿ, ಕೆನರಾ ಗರ್ಲ್ಸ್ ಹೈಸ್ಕೂಲ್, ಸುಧೀಂದ್ರ ಅಡಿಟೋರಿಯಂನಲ್ಲಿ ನಡೆಯಲಿದೆ.
ಸ್ಪರ್ಧಾ ನಿಯಮಗಳು:
* ನೃತ್ಯ ಮಾಡುತ್ತಾ ಭಜನೆ ಮಾಡಬೇಕು – ಭಾಷೆಗೆ ನಿರ್ಬಂಧವಿಲ್ಲ.
* ಶಾಲಾ-ಕಾಲೇಜಿನ ಹಾಗೂ ಸಂಘ ಸಂಸ್ಥೆಗಳ ತಂಡಗಳಿಗೆ ಅವಕಾಶ. (ವಿದ್ಯಾರ್ಥಿಗಳೇ ಆಗಿರಬೇಕು)
*18 ವರ್ಷದೊಳಗಿನವರಿಗೆ ಮಾತ್ರ ಅವಕಾಶ. (ಡಿಸೆಂಬರ್ 2023ರಲ್ಲಿ ವಯೋಮಿತಿ 18 ವರ್ಷ ದಾಟಿರಬಾರದು)
* ಧ್ವನಿ ಮುದ್ರಿತ ಸಂಗೀತಕ್ಕೆ ಅವಕಾಶವಿಲ್ಲ.
* ಮೊದಲ ಸುತ್ತಿನಲ್ಲಿ 10 ನಿಮಿಷಗಳ ಕಾಲಾವಕಾಶ.
* ತಂಡದಲ್ಲಿ ಕನಿಷ್ಠ 8, ಗರಿಷ್ಠ 12 ಮಂದಿ ಇರಬೇಕು.
* ಹಿಮ್ಮೇಳ, ಮುಮ್ಮೇಳ ಸೇರಿ ಗರಿಷ್ಠ 17 ಮಂದಿ ಇರಬಹುದು.
* ಯಾವುದೇ ವಾದ್ಯ – ವಾದನ ಪರಿಕರಗಳನ್ನು ಬಳಸಬಹುದು.
* ಬಾಲಕ, ಬಾಲಕಿಯರಿಗೆ ಪ್ರತ್ಯೇಕ ವಿಭಾಗವಿರುವುದಿಲ್ಲ.
* ಆಧಾರ್ ಹಾಗೂ ಶಾಲಾ – ಕಾಲೇಜಿನ ಐಡಿ ಕಡ್ಡಾಯ.
ತೀರ್ಪುಗಾರರು ಪರಿಗಣಿಸುವ ಅಂಶಗಳು : ಉಚ್ಛಾರ, ರಾಗ ಸಂಯೋಜನೆ, ತಾಳ, ಭಂಗಿ, ಸಮೂಹ ಸಂವಹನ, ಶಿಸ್ತು, ನಾವೀನ್ಯತೆ/ಹೊಸತನ, ಪ್ರಸ್ತುತಿ, ಪರಿಕರ ಬಳಕೆ, ಉಡುಗೆ ತೊಡುಗೆ, ನೃತ್ಯ ಶೈಲಿ. ಈ ಎಲ್ಲಾ ವಿಚಾರಗಳನ್ನು ಒಳಗೊಂಡು ‘ಒಟ್ಟು ಅಂದ’ವನ್ನು ಪರಿಗಣಿಸಿ, ಅಂಕಗಳನ್ನು ನೀಡಲಾಗುವುದು. ತೀರ್ಪುಗಾರರ ತೀರ್ಮಾನವೇ ಅಂತಿಮ. ದಾಖಲಾತಿಗಾಗಿ ಶೀಘ್ರವೇ 9482896309ನ್ನು ಸಂಪರ್ಕಿಸಿರಿ.