ಕಾರ್ಕಳ : ಯುವ ಕತೆಗಾರ, ಕನ್ನಡ ನಾಡಿನ ಪ್ರತಿಷ್ಠಿತ ಟೊಟೋ ಪ್ರಶಸ್ತಿ ಪುರಸ್ಕೃತ ಬರಹಗಾರ ಕಾರ್ಕಳದ ಪ್ರಸಾದ್ ಶೆಣೈ ಆರ್.ಕೆ. ಇವರ ಮೂರನೇ ಕೃತಿ ‘ನೇರಳೆ ಐಸ್ ಕ್ರೀಂ’ ಕಥಾ ಸಂಕಲನದ ಬಿಡುಗಡೆ ಕಾರ್ಯಕ್ರಮವು ದಿನಾಂಕ 30 ಮಾರ್ಚ್ 2025ರಂದು ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರು ಕೃತಿ ಅನಾವರಣಗೊಳಿಸಿ ಲೇಖಕರಿಗೆ ಶುಭ ಹಾರೈಸಿದರು.
ಕಾದಂಬರಿಗಾರ್ತಿ ಸಹನಾ ವಿಜಯ್ ಕುಮಾರ್, ವಿಮರ್ಶಕ ಬಸವರಾಜ್ ಸರಬದ, ಸಾಹಿತಿ ಡಾ. ಬೈರಮಂಗಲ ರಾಮೇಗೌಡ, ವೀರಲೋಕದ ಪ್ರತಿಷ್ಠಾನದ ವೀರಕಪುತ್ರ ಶ್ರೀನಿವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ವೀರಲೋಕ ಪ್ರಕಾಶನದ ಸಾಹಿತ್ಯ ಯುಗಾದಿ ಕಾರ್ಯಕ್ರಮದಲ್ಲಿ ಹತ್ತು ಲೇಖಕರ ಕೃತಿಗಳನ್ನು ವಿಭಿನ್ನವಾಗಿ ಅನಾವರಣಗೊಳಿಸಲಾಯಿತು. ತಾಳಮದ್ದಲೆ ಮೂಲಕ ಲೇಖಕರ ಹಾಗೂ ಪುಸ್ತಕಗಳ ಪರಿಚಯವನ್ನು ವಿಭಿನ್ನವಾಗಿ ಮಾಡಲಾಯಿತು. ಪ್ರಸಾದ್ ಶೆಣೈಯವರ ‘ನೇರಳೆ ಐಸ್ ಕ್ರೀಂ’ ಕೃತಿಯಲ್ಲಿ ಪ್ರಜಾವಾಣಿ ಮತ್ತು ಟೋಟೋ ಪುರಸ್ಕಾರ ಪಡೆದ ಕತೆಗಳಿವೆ.
‘ನೇರಳೆ ಐಸ್ ಕ್ರೀಂ’ ಕೃತಿಯನ್ನು ಕೊಂಡುಕೊಳ್ಳುವ ವಿವಿಧ ವಿಧಾನಗಳು
1. ವೀರಲೋಕದ 7022122121, 8861212172 ಈ ಸಂಖ್ಯೆಗೆ WhatsApp /call ಮಾಡಿ ಮನೆಗೇ ತರಿಸಿಕೊಳ್ಳಬಹುದು.
2. ವೀರಲೋಕ ಆನ್ ಲೈನ್ ನಲ್ಲಿ ಖರೀದಿಸಲು ಲಿಂಕ್: https://veeralokabooks.com/book/nerale-icecream
3. ಟೋಟಲ್ ಕನ್ನಡದಲ್ಲಿ ಖರೀದಿಸಲು ಲಿಂಕ್
https://www.totalkannada.com/products/bf183608-bf45-46ed-9b80-89e96b0d408b.html?product-name=Nerale%20Ice%20Cream%20Kategalu&ref=autosugg
4. ಜೀರುಂಡೆ ಬುಕ್ಸ್ ನಲ್ಲಿ ಖರೀದಿಸಲು ಲಿಂಕ್
https://beetlebookshop.com/products/nerale-icecream?sfnsn=wiwspwa
5. ಹರಿವು ಬುಕ್ಸ್ ನಲ್ಲಿ ಖರೀದಿಸಲು
https://discoveringbrands.com/brand/harivubooks/nerale-ice-cream-collection-of-stories-prasad-shenoy-r-k-kannada-book
ಬೆಂಗಳೂರಿನ ವಿವಿಧ ಪುಸ್ತಕ ಮಳಿಗೆಗಳಲ್ಲೂ ಲಭ್ಯ. ಓದಿ.ಅಭಿಪ್ರಾಯ ತಿಳಿಸಿ.