ಮಂಗಳೂರು : ಮಂಗಳೂರಿನ ನಾಟ್ಯಾರಾಧನಾ ಕಲಾಕೇಂದ್ರದ ಮೂವತ್ತನೆಯ ವರ್ಷಾಚರಣೆಯ ಪ್ರಯುಕ್ತ ನಡೆಸುತ್ತಿರುವ ನೃತ್ಯಾಮೃತ ಸರಣಿ ಕಾರ್ಯಕ್ರಮಗಳ ಅಂಗವಾಗಿ ನಡೆದ ‘ನೃತ್ಯ ಚಿಗುರು’ 10 ವರುಷಗಳ ಒಳಗಿನ ಪುಟಾಣಿ ಪ್ರತಿಭೆಗಳ ಏಕವ್ಯಕ್ತಿ ನೃತ್ಯ ಪ್ರದರ್ಶನ ಕಾರ್ಯಕ್ರಮವು ದಿನಾಂಕ 30-05-2024ರಂದು ಮಂಗಳೂರಿನ ಕೆನರಾ ಸಿ.ಬಿ.ಎಸ್.ಸಿ. ಶಾಲೆಯ ಭುವನೇಂದ್ರ ಸಭಾಸದನದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಮಹಿಳಾ ವಿಭಾಗದ ಅಧ್ಯಕ್ಷೆ ವೀಣಾ ಕೆ. ರಾವ್ ಇವರು ಮಾತನಾಡಿ “ಭರತನಾಟ್ಯದಂತಹ ಶಾಸ್ತ್ರೀಯ ಕಲೆಗಳನ್ನು ಎಳೆವೆಯಿಂದಲೇ ಕಲಿತರೆ ಮಕ್ಕಳಿಗೆ ಪುರಾಣ ಕಥೆಗಳ ಜತೆಗೆ ಜೀವನದ ಹಲವು ಮುಖಗಳು ತಿಳಿಯುತ್ತವೆ. ದೈಹಿಕ ಕ್ಷಮತೆಯೊಂದಿಗೆ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ” ಎಂದು ನುಡಿದರು. ಸಂಸ್ಥೆಯ ನಿರ್ದೇಶಕಿ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಅವರ ನೃತ್ಯ ಕಲೆಯಲ್ಲಿನ ಪರಿಶ್ರಮ ಮತ್ತು ಸಂಸ್ಥೆಯ ತ್ರಿಂಶೋತ್ಸವ ಸಂದರ್ಭದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ವಹಿಸಿದ್ದು, ನೃತ್ಯ ವಿದ್ಯಾಲಯ ಕದ್ರಿಯ ನಿರ್ದೇಶಕ ವಿದ್ವಾನ್ ಯು.ಕೆ. ಪ್ರವೀಣ್, ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ರಮಾನಂದ ಪಾಂಗಳ್, ಕಲಾಪೋಷಕಿ ಶ್ರೀಮತಿ ಕೇಸರಿ ಪೂಂಜ, ಸನಾತನ ನಾಟ್ಯಾಲಯದ ಗುರು ವಿದುಷಿ ಶಾರದಾಮಣಿ ಶೇಖರ್, ಕಲಾಸಿರಿ ಸಂಗೀತ ಮತ್ತು ನೃತ್ಯ ಅಕಾಡೆಮಿಯ ನಿರ್ದೇಶಕಿ ವಿದುಷಿ ಮಯೂರಿ ಎಸ್. ಕಾವೂರು, ನಾಟ್ಯಾರಾಧನಾ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿನಿ ವಿದುಷಿ ಮೈತ್ರಿ ಭಟ್ ಮವ್ವಾರ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದರು.
ಪುಟಾಣಿಗಳಾದ ಭಾವಿಕಾ ಮಯ್ಯ (ನಾಗಭೂಷಣ ಮಯ್ಯ ಮತ್ತು ವಿಜಯ ಲಕ್ಷ್ಮೀ ಮಯ್ಯ ಇವರ ಸುಪುತ್ರಿ, ಗುರು ವಿದುಷಿ ಸುಮಂಗಲಾ ರತ್ನಾಕರ ರಾವ್ ಶಿಷ್ಯೆ), ಮನಸ್ವಿ ಉಪ್ಪಿನೆ (ಪ್ರಶಾಂತ್ ಯು.ಎಸ್. ಮತ್ತು ಮಮತಾ ಉಪ್ಪಿನೆ ಇವರ ಸುಪುತ್ರಿ, ಗುರು ವಿದುಷಿ ಸ್ವಾತಿ ಭಟ್ ಪಿ. ಶಿಷ್ಯೆ), ತೃಪ್ತಿ ಸುವರ್ಣ (ಶ್ರೀ ಸುರೇಶ್ ಸುವರ್ಣ ಮತ್ತು ಶ್ರೀಮತಿ ಸವಿತಾ ಸುವರ್ಣ ಇವರ ಸುಪುತ್ರಿ, ಗುರು ವಿದುಷಿ ಡಾ. ಶ್ರೀವಿದ್ಯಾ ಮುರಳೀಧರ್ ಶಿಷ್ಯೆ), ಅದ್ವಿಕಾ ಭಟ್ (ಡಾ. ಶ್ರೀಕೃಷ್ಣ ಜಿ.ಎನ್. ಮತ್ತು ಡಾ. ಸಿಂಚನ ಭಟ್ ಇವರ ಸುಪುತ್ರಿ, ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಶಿಷ್ಯೆ), ಸಾಕ್ಷಿ ಆಚಾರ್ಯ (ಚಿತ್ರಪುರ ಶ್ರೀನಿವಾಸ ಆಚಾರ್ಯ ಮತ್ತು ಸೌಮ್ಯ ಇವರ ಸುಪುತ್ರಿ, ಗುರು ವಿದುಷಿ ಭಾರತಿ ಸುರೇಶ್ ಶಿಷ್ಯೆ), ರಿದ್ಧಿ ಎಚ್.ಶೆಟ್ಟಿ (ಹರೀಶ್ ಶೆಟ್ಟಿ ಮತ್ತು ಪೂರ್ಣಿಮ ಶೆಟ್ಟಿ ಇವರ ಸುಪುತ್ರಿ, ಗುರು ವಿದುಷಿ ಅನ್ನಪೂರ್ಣ ರಿತೇಶ್ ಶಿಷ್ಯೆ), ಮಾತಂಗಿ (ಗುರು ವಿದ್ವಾನ್ ಬಿ. ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ದೀಪಕ್ ಸುಪುತ್ರಿ ಹಾಗೂ ಶಿಷ್ಯೆ) ಮತ್ತು ವಿಶೇಷ ಆಹ್ವಾನಿತ ಬಾಲ ಪ್ರತಿಭೆ ಮಾಸ್ಟರ್ ಶಮಂತಕ ನಂಬೂದರಿ ಧಾರವಾಡ (ಡಾ. ಗೋಪಿಕೃಷ್ಣ ನಂಬೂದರಿ ಮತ್ತು ವಿದುಷಿ ಸವಿತಾ ಹೆಗಡೆ ಇವರು ಸುಪುತ್ರ, ಗುರು ವಿದ್ವಾನ್ ಅತುಲ್ ಬಾಲು ಚೆನ್ನೈ ಶಿಷ್ಯ) ಪ್ರಸ್ತುತ ಪಡಿಸಿದ ನೃತ್ಯಗಳು ಜನಮನ ಗೆದ್ದವು.
ಭಾವಿಕಾ ಮಯ್ಯ
ಮನಸ್ವಿ ಉಪ್ಪಿನೆ
ತೃಪ್ತಿ ಸುವರ್ಣ
ಅದ್ವಿಕಾ ಭಟ್
ಸಾಕ್ಷಿ ಆಚಾರ್ಯ
ರಿದ್ಧಿ ಎಚ್.ಶೆಟ್ಟಿ
ಮಾತಂಗಿ
ಮಾಸ್ಟರ್ ಶಮಂತಕ ನಂಬೂದರಿ
ಕಾರ್ಯಕ್ರಮದಲ್ಲಿ ನಾಟ್ಯಾರಾಧನಾ ಕಲಾ ಕೇಂದ್ರದ ಮುಕುಲ ತಂಡದವರು ಪ್ರಾರ್ಥಿಸಿದರು. ಗುರು ವಿದುಷಿ ಸುಮಂಗಲಾ ರತ್ನಾಕರ ರಾವ್ ಸ್ವಾಗತಿಸಿ, ವಿದುಷಿ ಡಾ. ಚೈತ್ರಶ್ರೀ ಗುರುರಾಜ್ ವಂದಿಸಿ, ಧರಿತ್ರಿ ಭಿಡೆ ಕಾರ್ಯಕ್ರಮ ನಿರೂಪಿಸಿದರು. ವಿದುಷಿ ಭವ, ಶ್ರೀಮತಿ ನಮಿತಾ ಕೋಟ್ಯಾನ್, ಐಸಿರಿ ಪಿ.ಕೆ., ಸಾಧ್ವಿ ರಾವ್, ಹಂಸಿನಿ ಭಿಡೆ, ಭಾರ್ಗವಿ ಮಯ್ಯ, ಶ್ರೇಷ್ಠ ರಾವ್, ಸನತ್ ಕುಮಾರ್ ಪುಟಾಣಿ ಕಲಾವಿದರನ್ನು ಸಭೆಗೆ ಪರಿಚಯಿಸಿದರು. ತ್ರಿಂಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಗಣೇಶ್ ಅಮೀನ್ ಸಂಕಮಾರ್, ಟ್ರಸ್ಟಿ ಶ್ರೀ ಬಿ. ರತ್ನಾಕರ ರಾವ್, ಸಂಘಟನಾ ಕಾರ್ಯದರ್ಶಿ ಶಶಿರಾಜ ರಾವ್ ಕಾವೂರು, ಉಪಾಧ್ಯಕ್ಷರಾದ ಬೈಕಾಡಿ ಶ್ರೀನಿವಾಸ ರಾವ್, ಶ್ರೀ ಸುಧಾಕರ ರಾವ್ ಪೇಜಾವರ್ ಉಪಸ್ಥಿತರಿದ್ದರು.
2 Comments
ಸಂಪೂರ್ಣ ವರದಿಗಾಗಿ ರೂವಾರಿ ಬಳಗ ಧನ್ಯವಾದಗಳು… ಚಂದದ ರಿಪೋರ್ಟ್
Beautiful coverage of this beautiful event. Thank you Roovari