ಮಂಗಳೂರು : ಚಿರಂತನ ಚಾರಿಟೇಬಲ್ ಟ್ರಸ್ಟ್, ಸಪ್ತಕ ಬೆಂಗಳೂರು ಮತ್ತು ರಾಮಕೃಷ್ಣ ಮಠ ಮಂಗಳೂರು ಜಂಟಿಯಾಗಿ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ ಪ್ರಸ್ತುತ ಪಡಿಸುವ ‘ಪಂಚಮದ ಇಂಚರ ವಿವೇಕ ಸ್ಮೃತಿ 2025’ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಬ್ಬ ಕಾರ್ಯಕ್ರಮವನ್ನು ದಿನಾಂಕ 12 ಜನವರಿ 2025ರಂದು ಮಧ್ಯಾಹ್ನ 2-30 ಗಂಟೆಗೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮನಂದಾಜಿ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ತಬಲಾ ವಿದ್ವಾಂಸ ಭಾವಚಿತ್ರ ಕಲಾವಿದ ಪಂಡಿತ್ ಯಶವಂತ್ ಜೆ. ಆಚಾರ್ಯ ಮತ್ತು ಕಲೆ ಮತ್ತು ಸಂಗೀತದ ಪೋಷಕ ಶ್ರೀ ಜಿ.ಎಸ್. ಹೆಗ್ಡೆ ಇವರುಗಳನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಮುಂಬೈಯ ಶ್ರೀ ಧನಂಜಯ್ ಹೆಗ್ಡೆ ಇವರ ಹಾಡುಗಾರಿಕೆಗೆ ಬೆಂಗಳೂರಿನ ಗುರುಮೂರ್ತಿ ವೈದ್ಯ ತಬಲಾದಲ್ಲಿ ಮತ್ತು ಉಡುಪಿಯ ಶ್ರೀ ಪ್ರಸಾದ್ ಕಾಮತ್ ಇವರು ಸಂವಾದಿನಿಯಲ್ಲಿ ಸಹಕರಿಸಲಿದ್ದಾರೆ. ವಿದುಷಿ ಮಂಜೂಷಾ ಕುಲಕರ್ಣಿ ಪಾಟೀಲ್ ಇವರ ಹಾಡುಗಾರಿಕೆಗೆ ಗೋವಾದ ಶ್ರೀ ಮಾಯಂಕ್ ಬೇಡೇಕರ್ ತಬಲಾದಲ್ಲಿ ಮತ್ತು ಮುಂಬೈ ಶ್ರೀ ಸಿದ್ಧೇಶ್ ಬಿಚೊಳ್ಕರ್ ಸಂವಾದಿನಿಯಲ್ಲಿ ಸಾಥ್ ನೀಡಲಿದ್ದಾರೆ. ಸಂಜೆ 6-15 ಗಂಟೆಗೆ ಪುಣೆಯ ಉಸ್ತಾದ್ ಶಾಹಿದ್ ಪರ್ವೇಜ್ ಇವರಿಂದ ಸಿತಾರ್ ವಾದನ ನಡೆಯಲಿದ್ದು, ಪಂಡಿತ್ ಮುಕೇಶ್ ಜಾದವ್ ಇವರು ತಬಲಾದಲ್ಲಿ ಸಹಕರಿಸಲಿದ್ದಾರೆ.