Subscribe to Updates

    Get the latest creative news from FooBar about art, design and business.

    What's Hot

    ಮೈಸೂರಿನ ಪರಿವರ್ತನ ರಂಗ ಸಮಾಜ ಪ್ರಸ್ತುತಪಡಿಸುವ ‘ಒಥೆಲೊ’ | ಆಗಸ್ಟ್ 16

    August 12, 2026

    ಡಾ. ಮಾಲತಿ ಶೆಟ್ಟಿ ಮಾಣೂರು ಇವರಿಗೆ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪ್ರದಾನ

    August 12, 2026

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ 43ನೇ ಸಾಹಿತ್ಯ ಪಯಣ ಹೆಜ್ಜೆ

    August 12, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪಾತಾಳ ಸ್ಮೃತಿ ಗೌರವ ಪ್ರದಾನ ಮತ್ತು ಪಾತಾಳರ ನೆನಪು ಕೃತಿ ಅನಾವರಣ
    Awards

    ಪಾತಾಳ ಸ್ಮೃತಿ ಗೌರವ ಪ್ರದಾನ ಮತ್ತು ಪಾತಾಳರ ನೆನಪು ಕೃತಿ ಅನಾವರಣ

    August 12, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಪ್ಪಿನಂಗಡಿ : ಯಕ್ಷಗಾನ ಕ್ಷೇತ್ರದ ಕಲಾ ದಿಗ್ಗಜ ಪಾತಾಳ ವೆಂಕಟರಮಣ ಭಟ್ ಸಂಸ್ಥಾಪಿತ ಪಾತಾಳ ಯಕ್ಷ ಪ್ರತಿಷ್ಠಾನದ ವತಿಯಿಂದ ಕೊಡ ಮಾಡುವ ‘ಪಾತಾಳ ಸ್ಮೃತಿ ಗೌರವ’ವನ್ನು ಯಕ್ಷಗಾನ ಸಹಿತ ವಿವಿಧ ಕ್ಷೇತ್ರಗಳಿಗೆ ಕೊಡುಗೆ ನೀಡುತ್ತಾ ಬಂದಿರುವ ಸಾಮಾಜಿಕ ಮುಂದಾಳು ಅರುಣ್ ಕುಮಾರ್ ಪುತ್ತಿಲ ಇವರಿಗೆ ದಿನಾಂಕ 06 ಆಗಸ್ಟ್ 2026ರಂದು ಪಾತಾಳ ಮನೆಯಲ್ಲಿ ಪ್ರದಾನ ಮಾಡಲಾಯಿತು.

    ಕನ್ನಡ ಸಾಹಿತ್ಯ ಪರಿಷತ್‌ನ ಪೂರ್ವ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಭಿನಂದನಾ ಮಾತುಗಳನ್ನಾಡಿದ ಸಾಹಿತಿ ಮುಳಿಯ ಶಂಕರ್ ಭಟ್, ಕಲಾವಿದನಿಗೆ ಸಲ್ಲುವ ಗೌರವವನ್ನು ಕಲಾರಾಧಕ-ಕಲಾಸೇವಕ-ಸಮಾಜಹಿತ ಚಿಂತಕನಿಗೆ ನೀಡುವ ಮೂಲಕ ಕಲಾ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದ ಸ್ಪಂದನದ ಸಂಕೇತವಾಗಿ ಪಾತಾಳ ಸ್ಮೃತಿ ಗೌರವ ಪ್ರಶಸ್ತಿಯು ಪುತ್ತಿಲರನ್ನು ಅರಸಿ ಬಂದಿದೆ” ಎಂದರು.

    ‘ಪಾತಾಳರ ನೆನಪು’ ಕೃತಿಯನ್ನು ಬಿಡುಗಡೆ ಮಾಡಿದ ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ ಮಾತನಾಡಿ “ಪಾತಾಳ ಅವರ ಜೀವನ ಶೈಲಿ, ಅವರು ಸನಾತನ ಸಂಸ್ಕೃತಿ ಮತ್ತು ಆಚರಣೆಗೆ ನೀಡುತ್ತಿದ್ದ ಒತ್ತು ಅನುಕರಣೀಯವಾಗಿದೆ” ಎಂದರು.

    ವಿದ್ವಾನ್ ಮೇಲುಕೋಟೆ ಉಮಾಕಾಂತ್ ಭಟ್ ಮಾತನಾಡಿ, “ಸ್ವಹಿತ, ಸ್ವಕುಟುಂಬ ಹಿತ, ಸಮಾಜ ಹಿತ ಇದಕ್ಕಾಗಿ ನಿತ್ಯಾನುಷ್ಠಾನ ಪೂಜಾ ಕಾರ್ಯಗಳನ್ನು ತಪ್ಪದೆ ನಡೆಸಿಕೊಂಡು ಬರುತ್ತಿದ್ದ ಪಾತಾಳರಿಗೆ ಅವರ ಆಧ್ಯಾತ್ಮದ ಗುರುಗಳು ದಿವ್ಯ ಪ್ರಜಾ ಎಂಬ ಹೆಸರನ್ನು ನೀಡಿದ್ದರು. ನಾವಿಂದು ಪಾತಾಳರ ಸ್ಮರಣೆ ಮಾಡುವುದೆಂದರೆ ಅವರಂತೆ ದಿವ್ಯ ಪ್ರಜೆಗಳಾಗುವ ಸಂಕಲ್ಪ ತೊಡಬೇಕು” ಎಂದರು.

    ಪಾತಾಳ ವೆಂಕಟರಮಣ ಭಟ್ ಅವರೊಂದಿಗೆ ಅವರ ಮನೆಯ, ತೋಟದ ಕೆಲಸದಾಳುಗಳಾಗಿ, ಕೊನೆ ದಿನಗಳಲ್ಲಿ ಅವರ ಶುಶ್ರೂಷಕರಾಗಿ ಸೇವೆ ಸಲ್ಲಿಸುತ್ತಿದ್ದ ಏಳು ಮಂದಿಯನ್ನು ಪಾತಾಳ ವೆಂಕಟರಮಣ ಭಟ್ ಅವರ ಮಕ್ಕಳು ಗೌರವಪೂರ್ವಕ ಸನ್ಮಾನ ಮಾಡಿದಾಗ ಇಡೀ ಸಭಾಂಗಣ ತುಂಬು ಮನದ ಕರತಾಂಡನದ ಸಂಭ್ರಮವನ್ನು ವ್ಯಕ್ತಪಡಿಸಿತು.

    ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ, ಗಣ್ಯರಾದ ಡಾ. ವಸಂತ ಕುಮಾರ ತಾಳ್ತಜೆ, ವೇದವ್ಯಾಸ ರಾಮಕುಂಜ, ಕೇಶವ ಭಟ್ ಪಲ್ಲದಕೋಡಿ, ಸುಜೀರ್ ಗಣಪತಿ ನಾಯಕ್, ನರಸಿಂಹ ಭಟ್ ಮೂಡಾಜೆ, ಕಂಗ್ವೆ ವಿಶ್ವನಾಥ ಶೆಟ್ಟಿ, ಡಾ. ಎಂ.ಎನ್. ಭಟ್, ಪ್ರಶಾಂತ್ ಗಾಣಿಗ ಶಿವಾಜಿನಗರ, ಕೈಲಾರ್ ರಾಜಗೋಪಾಲ ಭಟ್, ಲೋಕೇಶ್ ಬೆತ್ತೋಡಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಮೊದಲು ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಶ್ರೀಕೃಷ್ಣ ಪರಂಧಾಮ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಮಹಾಲಿಂಗೇಶ್ವರ ಭಟ್ ಬಿಲ್ಲಂಪದವು ನಿರೂಪಿಸಿ, ಅಂಬಾ ಪ್ರಸಾದ್ ಪಾತಾಳ ಸ್ವಾಗತಿಸಿ, ಶ್ರೀರಾಮ ಭಟ್ ಪಾತಾಳ ವಂದಿಸಿದರು.

    award baikady Book release felicitation Literature Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಪುಸ್ತಕ ವಿಮರ್ಶೆ | ಅಡಿಗರ ಕಾವ್ಯದ ಪ್ರಸ್ತುತತೆ
    Next Article ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ 43ನೇ ಸಾಹಿತ್ಯ ಪಯಣ ಹೆಜ್ಜೆ
    roovari

    Add Comment Cancel Reply


    Related Posts

    ಮೈಸೂರಿನ ಪರಿವರ್ತನ ರಂಗ ಸಮಾಜ ಪ್ರಸ್ತುತಪಡಿಸುವ ‘ಒಥೆಲೊ’ | ಆಗಸ್ಟ್ 16

    August 12, 2026

    ಡಾ. ಮಾಲತಿ ಶೆಟ್ಟಿ ಮಾಣೂರು ಇವರಿಗೆ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪ್ರದಾನ

    August 12, 2026

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ 43ನೇ ಸಾಹಿತ್ಯ ಪಯಣ ಹೆಜ್ಜೆ

    August 12, 2026

    ಪುಸ್ತಕ ವಿಮರ್ಶೆ | ಅಡಿಗರ ಕಾವ್ಯದ ಪ್ರಸ್ತುತತೆ

    August 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.