ಕೊಡಿಯಾಲಬೈಲ್ : ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ ಮಂಗಳೂರು ಇದರ 10ನೇ ವಾರ್ಷಿಕೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಹಿಳೆಯರಿಗೆ ಜಿಲ್ಲಾ ಮಟ್ಟದ ಸಾಮೂಹಿಕ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಆಗಸ್ಟ್ 13ರಂದು ಬೆಳಗ್ಗೆ 9ರಿಂದ ಕೊಡಿಯಾಲ್ ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ಸಮಯಾವಕಾಶ 3ರಿಂದ 5 ನಿಮಿಷ. ಕನ್ನಡ ಗೀತೆಗಳನ್ನು ಹಾಡಬೇಕು ಹಾಗೂ ತಂಡದಲ್ಲಿ 5ರಿಂದ 6 ಮಂದಿಗೆ ಮಾತ್ರ ಅವಕಾಶವಿದೆ. 25 ವರ್ಷ ಮೇಲ್ಪಟ್ಟವರು ಮಾತ್ರ ಭಾಗವಹಿಸಬಹುದು. ಆಧಾರ್ ಪ್ರತಿ ಕಡ್ಡಾಯವಾಗಿದೆ. ಆಗಸ್ಟ್ 8ರ ಸಂಜೆ 6 ಗಂಟೆಯ ಒಳಗೆ ನೋಂದಣಿ ಮಾಡಬೇಕು. ಮೊದಲು ಬಂದ 20 ತಂಡಗಳಿಗೆ ಮಾತ್ರ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 8123578912 ಸಂಪರ್ಕಿಸಬಹುದು.