ಬೆಂಗಳೂರು : ವೀರಲೋಕ ಪ್ರತಿಷ್ಠಾನವು ಅತ್ಯಂತ ವಿನೂತನವಾದ ‘ಕಥಾ ಸಂಕ್ರಾಂತಿ -2024’ ಶೀರ್ಷಿಕೆಯಡಿ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಕನ್ನಡ ಕಥೆಗಾರರ ಪಾಲಿಗೆ ಇದೊಂದು ಅತ್ಯಪೂರ್ವ ಅವಕಾಶ. ಈ ಕಥಾ ಸ್ಪರ್ಧೆಯ ಸಂಪಾದಕತ್ವವನ್ನು ಹಿರಿಯ ಕಥೆಗಾರರಾದ ಶ್ರೀ ಕೇಶವ ಮಳಗಿ ಅವರು ವಹಿಸಿಕೊಂಡಿದ್ದಾರೆ.
ಮೊದಲ ಬಹುಮಾನಕ್ಕೆ ಆಯ್ಕೆಯಾಗುವ ಕಥೆಗೆ ರೂ.55,000/-, ಎರಡನೆಯ ಬಹುಮಾನ ರೂ.30,000/-, ಮೂರನೆಯ ಬಹುಮಾನ ರೂ.20,000/- ಹಾಗೂ ತೀರ್ಪುಗಾರರ ಮೆಚ್ಚುಗೆ ಗಳಿಸುವ ಏಳು ಕಥೆಗಳಿಗೆ ತಲಾ 3 ಸಾವಿರ ರೂ. ಬಹುಮಾನ ನೀಡಲಾಗುವುದೆಂದು ವೀರಲೋಕ ಪ್ರತಿಷ್ಠಾನದ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು 2023ರವರೆಗೆ ತಮ್ಮ ಯಾವುದೇ ‘ಕಥಾ ಸಂಕಲನ’ವನ್ನು ಪ್ರಕಟಿಸಿರಬಾರದು. ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರೆ ಈವರೆಗೆ ನಿಮ್ಮ ಒಂದೂ ಕಥಾಸಂಕಲನ ಪ್ರಕಟವಾಗಿರಬಾರದು. ಬೇರೆ ಪ್ರಕಾರದ ಪುಸ್ತಕಗಳ ಪ್ರಕಟಣೆಗೆ ಈ ನಿಯಮ ಅನ್ವಯಿಸುವುದಿಲ್ಲ. ಕಥೆಗಳನ್ನು ಸೆಪ್ಟೆಂಬರ್ 5ರೊಳಗೆ ಕಳುಹಿಸಬೇಕು. ಕಥೆಗಳನ್ನು ಕಳುಹಿಸಬೇಕಾದ ಇ ಮೇಲ್ : [email protected] ಮಾಹಿತಿಗೆ ಮೊಬೈಲ್ : 70221 22121.