Subscribe to Updates

    Get the latest creative news from FooBar about art, design and business.

    What's Hot

    ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಹರಿಹರಪುರ ಶ್ರೀಧರ್ ಆಯ್ಕೆ

    November 4, 2026

    ‘ಕಾವ್ಯಾಂ ವ್ಹಾಳೊ -20’ ಕೊಂಕಣಿ ಕವಿಗೋಷ್ಠಿ

    November 4, 2026

    ಕವನ | ಬುದ್ಧ ಬಂದಾನಾ ನಡುಮನೆಗೆ

    November 4, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕವನ | ಬುದ್ಧ ಬಂದಾನಾ ನಡುಮನೆಗೆ
    Literature

    ಕವನ | ಬುದ್ಧ ಬಂದಾನಾ ನಡುಮನೆಗೆ

    November 4, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಅದೋ ಅವನು ಬಂದಿದ್ದಾನೆ
    ವಿಶಾಲ ಅಂಗಳದ ಅಮೃತಶಿಲೆಯಲ್ಲಿ
    ಅವಿತು ಮೌನಿಯಾಗಿದ್ದಾನೆ
    ತ್ರಿಸರಣ ತ್ರಿಪಿಠಕಗಳ ಸದ್ದಿನಲಿ
    ಸುತ್ತ ಕತ್ತಲಿನ
    ಬೆಳಕಿಂಡಿಗಳ ಹುಡುಕಾಡುತ್ತಾ
    ದಣಿದ ಕಣ್ಣುಗಳ ಮುಚ್ಚಿದ್ದಾನೆ
    ಅವ ಬಂದಾನಾ ನಡುಮನೆಗೆ ?

    ರಥಬೀದಿಯ ಹೊಳಹು
    ಊರುಕೇರಿಗಳನು ಬೆಳಗಿಸಿದೆ
    ‘ಗಚ್ಛಾಮಿ’ಗಳ ಸಮೂಹ ನಾದ
    ‘ಸಮ್ಮಾ ಸಂಬುದ್ಧನ’ ಸ್ಮರಣೆ
    ಜಗದಗಲ ಸುಪ್ತ ನಾಡಿಗಳಲ್ಲಿ
    ಧ್ವನಿಸುತ್ತಿರುವಾಗ
    ಅವನ ಚಹರೆಯಲಿ ಸಿಕ್ಕುಗಳಿವೆ
    ಅವ ಬಂದಾನಾ ನಡುಮನೆಗೆ ?

    ಹಸಿವಿನ ಹಂದರದ ಕೂಗು
    ಸೂರಿಲ್ಲದ ಕೂಸುಗಳ ಬಯಲದನಿ
    ಉತ್ಸವಗಳ ಹಿತ್ತಲಿನಲಿ
    ಕೈಚಾಚಿದ ಅಸಹಾಯಕ ಜೀವಗಳು
    ಮುಟ್ಟಿದ ಪಾಪ ಅಪ್ಪಿದ
    ಅಪರಾಧಗಳಿಗೆ ಜೀವ ತೆತ್ತ
    ಅಮಾಯಕರ ಎದೆಯೊಳಗಿಂದ
    ಅವ ಬಂದಾನಾ ನಡುಮನೆಗೆ ?

    ಧೂಪ ದೀಪಾರಾಧನೆಗಳ
    ವಿಜೃಂಭಣೆಯ ಜಾತ್ರೆಗಳಾಚೆ
    ದೂರ ಬಯಲಿನಲೊಂದು
    ಒಂಟಿ ‘ಭೋದಿ’
    ಚಿಗುರು ಮುದಿಯೆಲೆಗಳ
    ಕಲರವದಲಿ ಮಿಂದು
    ತನ್ನ ಕಂದನಿಗಾಗಿ ಕೈಬೀಸುತ್ತಿದೆ
    ಬುದ್ಧ ಬಂದಾನಾ ನಡುಮನೆಗೆ ?

    Divakar N.
    1898 Ground floor
    3rd cross, Near Viveka Vidyalaya
    Srirampura 3rd stage, Mysore -570023

    baikady poem roovari
    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನಲ್ಲಿ ರಾಜ್ಯಮಟ್ಟದ ಸ್ಪರ್ಧೆಯ ಸಮಾರೋಪ ಸಮಾರಂಭ
    Next Article ‘ಕಾವ್ಯಾಂ ವ್ಹಾಳೊ -20’ ಕೊಂಕಣಿ ಕವಿಗೋಷ್ಠಿ
    roovari

    Add Comment Cancel Reply


    Related Posts

    ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಹರಿಹರಪುರ ಶ್ರೀಧರ್ ಆಯ್ಕೆ

    November 4, 2026

    ‘ಕಾವ್ಯಾಂ ವ್ಹಾಳೊ -20’ ಕೊಂಕಣಿ ಕವಿಗೋಷ್ಠಿ

    November 4, 2026

    ಪುತ್ತೂರಿನಲ್ಲಿ ರಾಜ್ಯಮಟ್ಟದ ಸ್ಪರ್ಧೆಯ ಸಮಾರೋಪ ಸಮಾರಂಭ

    November 4, 2026

    ಕನ್ನಡ ಗ್ರಾಮದಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ ಸಮಾರಂಭ | ನವೆಂಬರ್ 08

    November 4, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.