Subscribe to Updates

    Get the latest creative news from FooBar about art, design and business.

    What's Hot

    ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಹರಿಹರಪುರ ಶ್ರೀಧರ್ ಆಯ್ಕೆ

    November 4, 2026

    ‘ಕಾವ್ಯಾಂ ವ್ಹಾಳೊ -20’ ಕೊಂಕಣಿ ಕವಿಗೋಷ್ಠಿ

    November 4, 2026

    ಕವನ | ಬುದ್ಧ ಬಂದಾನಾ ನಡುಮನೆಗೆ

    November 4, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಹರಿಹರಪುರ ಶ್ರೀಧರ್ ಆಯ್ಕೆ
    Literature

    ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಹರಿಹರಪುರ ಶ್ರೀಧರ್ ಆಯ್ಕೆ

    November 4, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹಾಸನ : ಹಾಸನ ತಾಲೂಕು ಎರಡನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ, ಚಿಂತಕ, ವಾಗ್ಮಿ ಹರಿಹರಪುರ ಶ್ರೀಧರ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷರಾದ ಕೆ.ಸಿ. ಗೀತಾ ತಿಳಿಸಿದ್ದಾರೆ.

    ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಮಾರ್ಗದರ್ಶನದಲ್ಲಿ ಜಿಲ್ಲಾಧ್ಯಕ್ಷರಾದ ವಾಸು ಸಮುದ್ರವಳ್ಳಿ ಇವರ ಸಲಹೆ ಮೇರೆಗೆ ವೇದಿಕೆಯ ಗೌರವ ಸಲಹೆಗಾರ ನಾಗರಾಜ ಹೆತ್ತೂರು, ಜಿಲ್ಲಾ ಉಪಾಧ್ಯಕ್ಷೆ ಎಚ್.ಎಸ್. ಭಾನುಮತಿ, ತಾಲೂಕು ಅಧ್ಯಕ್ಷೆ ಕೆ.ಸಿ. ಗೀತಾ, ತಾಲೂಕು ಉಪಾಧ್ಯಕ್ಷ ವಿ. ಮೋಹನ್, ತಾಲೂಕು ಕಾರ್ಯದರ್ಶಿ ಸಿ.ಎನ್. ನೀಲಾವತಿ ಮುಂತಾದವರನ್ನೊಳಗೊಂಡ ಸಮಿತಿ ಹರಿಹರಪುರ ಶ್ರೀಧರ್ ಇವರ ಸಾಹಿತ್ಯಿಕ ಹಾಗೂ ಸಾಮಾಜಿಕ ಹಾಗೂ ಧಾರ್ಮಿಕ ಸಾಧನೆಯನ್ನು ಪರಿಗಣಿಸಿ ಹಾಸನ ತಾಲೂಕು ಎರಡನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಹಿರಿಯ ಸಾಹಿತಿ ಲಕ್ಷ್ಮೀದೇವಿ ದಾಸಪ್ಪ, ಜೆ.ಆರ್. ರವಿಕುಮಾರ್, ರಾಜೇಶ್ವರಿ ಹುಲ್ಲೇನಹಳ್ಳಿ, ಕೆ.ಟಿ. ಜಯಶ್ರೀ, ಎಚ್.ಬಿ. ಚೂಡಾಮಣಿ, ಹರಿಹರಪುರ ಶ್ರೀಧರ್ ಹೆಸರುಗಳು ಪ್ರಸ್ತಾಪವಾದರೂ ಹಿರಿತನ ಹಾಗೂ ಸಾಹಿತ್ಯ, ಸಂಘಟನೆ ಮುಂತಾದ ಕ್ಷೇತ್ರಗಳಲ್ಲಿನ ಸಾಧನೆಯನ್ನು ಪರಿಗಣಿಸಿ ಅಂತಿಮವಾಗಿ ಹರಿಹರಪುರ ಶ್ರೀಧರ್ ಇವರನ್ನು ಆಯ್ಕೆ ಮಾಡಿದ್ದು, ದಿನಾಂಕ 22 ನವೆಂಬರ್ 2026ರ ಭಾನುವಾರ ನಗರದ ಗಾಂಧಿ ಭವನದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ.

    ಹರಿಹರಪುರ ಶ್ರೀಧರ್ ಇವರು 1953 ಫೆಬ್ರುವರಿ 20ರಂದು ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರಿಹರಪುರದಲ್ಲಿ ಜನಿಸಿದರು. ತಂದೆ ನಾಗರಾಜಯ್ಯ, ತಾಯಿ ನರಸಮ್ಮ. ವೃತ್ತಿಯಲ್ಲಿ ವಿದ್ಯುತ್ ಇಲಾಖೆಯ ನಿವೃತ್ತ ಇಂಜೀನಿಯರ್ ಆದ ಶ್ರೀಧರ್ ಅವರು ಪ್ರವೃತ್ತಿಯಲ್ಲಿ ಸಮಾಜಿಕ ಸೇವೆ, ಸಾಹಿತ್ಯ ರಚನೆ, ಆಕಾಶವಾಣಿಯಲ್ಲಿ ಚಿಂತನ ವಾಚನ, ದಿನಪತ್ರಿಕೆಗಳಲ್ಲಿ ಅಂಕಣ ಬರಹ, ಕಾವ್ಯ ರಚನೆ ಮಾಡುತ್ತಾ ನೂರಾರು ಕವಿಗೋಷ್ಠಿ ಹಾಗೂ ಸಾಹಿತ್ಯ ಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಪ್ರಸಿದ್ಧ ಭಾಷಣಕಾರ ಹಾಗೂ ಚಿಂತಕರಾದ ಇವರು ‘ಜೀವನ ವೇದ’ ಎಂಬ ಗ್ರಂಥದ ಮೂಲಕ ಜನಸಾಮಾನ್ಯರಿಗಾಗಿ ವೇದಗಳ ಮಹತ್ವದ ಬಗ್ಗೆ ತಿಳಿಸಿದ್ದಾರೆ. ‘ತಿರುಳು’ ಭಾವಗೀತೆಗಳ ಸಂಕಲನ; ‘ಕುಸುಮಗಳು’ ಆಯ್ದ ವೇದ ಮಂತ್ರಗಳ ಸಾರ; ‘ಅಗ್ನಿಹೋತ್ರ’ ಕೈಪಿಡಿ; ನೂರಾರು ಕವಿತೆ ರಚಿಸಿರುವ ಇವರು ಅನೇಕ ಸಂಪಾದಿತ ಕವನ ಸಂಕಲನಗಳಲ್ಲಿ, ವಿಶೇಷ ಸಂಚಿಕೆಗಳಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಕಳೆದ 55 ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಾ ಸಂಘ, ವಿಶ್ವ ಹಿಂದೂ ಪರಿಷತ್ತು, ಸಂಸ್ಕಾರ ಭಾರತೀ, ಸೇವಾ ಭಾರತೀ, ಪತಂಜಲಿ ಯೋಗ, ವೇದಭಾರತೀ ಮುಂತಾದ ಸಂಘಟನೆಗಳ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ 15 ವರ್ಷಗಳಿಂದ ಪತಂಜಲಿ ಯೋಗ ಸಮಿತಿಯ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾಗಿ ‘ಎಲ್ಲರಿಗಾಗಿ ವೇದ’ ಎಂಬ ಉದ್ಧೇಶದಡಿಯಲ್ಲಿ ‘ವೇದಭಾರತೀ’ ಸ್ಥಾಪನೆ ಮಾಡಿ ಸಾಮಾಜಿಕ ಸಾಮರಸ್ಯಕ್ಕಾಗಿ ಕೆಲಸ ಮಾಡುತ್ತಾ ಹಾಗೂ ವೇದ ಸಂಸ್ಕೃತಿಯ ರಕ್ಷಣೆಗಾಗಿ ಮನೆಮನೆಗೆ ಅಗ್ನಿಹೋತ್ರ ಅಭಿಯಾನಕ್ಕಾಗಿ ಸ್ವಂತ ಕಟ್ಟಡ ‘ಈಶಾವಾಸ್ಯಮ್’ ಮೀಸಲಿಟ್ಟಿದ್ದಾರೆ. ಇವರ ಸಾಹಿತ್ಯ, ಸಂಘಟನೆ, ಸಾಮಾಜಿಕ ಹಾಗೂ ಧಾರ್ಮಿಕ ಸಾಧನೆಗಾಗಿ ಬೆಂಗಳೂರಿನ ಸಾಕ್ಷಿ ಟ್ರಸ್ಟ್ ‘ಶ್ರೀ ಟಿ.ವಿ. ಕಪಾಲಿಶಾಸ್ತ್ರೀ ಅವಾರ್ಡ್ 2025’; ಬಬ್ಬೂರುಕಮ್ಮೆ ಸೇವಾ ಸಮಿತಿ, ಕರ್ನಾಟಕ ಇವರು 2022ರಲ್ಲಿ ‘ಸಾಧಕ ರತ್ನ ಪ್ರಶಸ್ತಿ’; ಆತ್ರೇಯ ಟ್ರಸ್ಟ್ ಕರ್ನಾಟಕ ಇವರು 2025ರಲ್ಲಿ ‘ದಾಸ ಸಂಕೀರ್ತನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’; ಹಾಸನದ ಗುರು ರಾಘವೇಂದ್ರ ಟ್ರಸ್ಟ್ 2025ರಲ್ಲಿ ಅಗ್ನಿಹೋತ್ರಕ್ಕಾಗಿ ಗೌರವ ಸನ್ಮಾನ, ಶಿವಮೊಗ್ಗದ ಪತಂಜಲಿ ಯೋಗ ಸಂಸ್ಥೆ 2026ರಲ್ಲಿ ‘ಕನಕಶ್ರೀ ಚೇತನ ಪತಂಜಲಿ ರತ್ನ ಪ್ರಶಸ್ತಿ’ ನೀಡಿ ಗೌರವಿಸಿದೆ.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Article‘ಕಾವ್ಯಾಂ ವ್ಹಾಳೊ -20’ ಕೊಂಕಣಿ ಕವಿಗೋಷ್ಠಿ
    roovari

    Add Comment Cancel Reply


    Related Posts

    ‘ಕಾವ್ಯಾಂ ವ್ಹಾಳೊ -20’ ಕೊಂಕಣಿ ಕವಿಗೋಷ್ಠಿ

    November 4, 2026

    ಕವನ | ಬುದ್ಧ ಬಂದಾನಾ ನಡುಮನೆಗೆ

    November 4, 2026

    ಪುತ್ತೂರಿನಲ್ಲಿ ರಾಜ್ಯಮಟ್ಟದ ಸ್ಪರ್ಧೆಯ ಸಮಾರೋಪ ಸಮಾರಂಭ

    November 4, 2026

    ಕನ್ನಡ ಗ್ರಾಮದಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ ಸಮಾರಂಭ | ನವೆಂಬರ್ 08

    November 4, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.