ಕುಂದಾಪುರ : ಪ್ರೇರಣಾ ಯುವ ವೇದಿಕೆ ಇದರ ವತಿಯಿಂದ ‘ಪ್ರೇರಣೋತ್ಸವ 2025’ ಶ್ರೀ ಮೆಕ್ಕೆಕಟ್ಟು ಮೇಳ ಮತ್ತು ಅತಿಥಿ ಕಲಾವಿದರಿಂದ ಮಾರಣಕಟ್ಟೆ ಹಬ್ಬದ್ ಆಟವನ್ನು ದಿನಾಂಕ 14 ಜನವರಿ 2025ರಂದು ಸಂಜೆ 7-00 ಗಂಟೆಗೆ ಮಾರಣಕಟ್ಟೆ ಗೆದ್ದಿಬೈಲಗೆ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಯಕ್ಷಗಾನ ಕಾರ್ಯಕ್ರಮದಲ್ಲಿ ‘ಪಾರಿಜಾತ’, ‘ಗದಾಯುದ್ಧ’ ಮತ್ತು ‘ರಕ್ತರಾತ್ರಿ’ ಎಂಬ ಪ್ರಸಂಗಗಳ ಪ್ರದರ್ಶನ ನಡೆಯಲಿದ್ದು, ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ.