ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ (ರಿ.), ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಮತ್ತು ಪತ್ರಿಕಾ ಭವನ ಟ್ರಸ್ಟ್ (ರಿ.) ಇದರ ವತಿಯಿಂದ ‘ಪ್ರೆಸ್ ಕ್ಲಬ್ ದಿನಾಚರಣೆ’ ಕಾರ್ಯಕ್ರಮವನ್ನು ದಿನಾಂಕ 09 ಫೆಬ್ರವರಿ 2025ರಂದು ಬೆಳಗ್ಗೆ 10-00 ಗಂಟೆಗೆ ಪಾಲೆಮಾರ್ ಗಾರ್ಡನ್, ಮಂಗಳೂರು ಕ್ಲಬ್ ರೋಡ್, ಮೋರ್ಗನ್ಸ್ ಗೇಟ್ ಇಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ‘ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ’ ಮತ್ತು ಹಿರಿಯ ಪತ್ರಕರ್ತರಿಗೆ ‘ಪ್ರೆಸ್ ಕ್ಲಬ್ ಗೌರವ’ ಸನ್ಮಾನ ಮಾಡಲಾಗುವುದು.
ಈ ಕಾರ್ಯಕ್ರಮವನ್ನು ಮಾಜಿ ಮೇಯರ್ ದಿವಾಕರ್ ಕದ್ರಿ ಇವರು ಉದ್ಘಾಟನೆ ಮಾಡಲಿದ್ದು, ಮಂಗಳೂರು ಪ್ರೆಸ್ ಕ್ಲಬ್ ಇದರ ಅಧ್ಯಕ್ಷರಾದ ಪಿ.ಬಿ. ಹರೀಶ್ ರೈ ಇವರು ಅಧ್ಯಕ್ಷತೆ ವಹಿಸಲಿರುವರು. ಸಮಾಜ ಸೇವಕರಾದ ಗಣೇಶ್ ಕುಲಾಲ್ ಇವರಿಗೆ ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಇವರು ಪ್ರೆಸ್ ಕ್ಲಬ್ ಪ್ರಶಸ್ತಿ ನೀಡಿ ಸನ್ಮಾನಿಸಲಿದ್ದಾರೆ. ಪತ್ರಕರ್ತರಾದ ಮುಹಮ್ಮದ್ ಆರೀಫ್ ಪಡುಬಿದಿರೆ (ವಿಜಯ ಕರ್ನಾಟಕ), ಜಿತೇಂದ್ರ ಕುಂದೇಶ್ವರ (ವಿಶ್ವವಾಣಿ), ಭಾಸ್ಕರ ರೈ ಕಟ್ಟ (ಸುದ್ದಿ ಬಿಡುಗಡೆ), ರಘರಾಮ ನಾಯಕ್ (ಹೊಸದಿಗಂತ) ಮತ್ತು ಪತ್ರಿಕಾ ಛಾಯಾಗ್ರಾಹಕ ಸತೀಶ್ ಇರಾ (ಉದಯವಾಣಿ) ಇವರುಗಳಿಗೆ ಪ್ರೆಸ್ ಕ್ಲಬ್ ಗೌರವ ಸನ್ಮಾನ ನೀಡಲಾಗುವುದು. ಗೌರವ ಪುರಸ್ಕಾರ ರೂ.10,000/- ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿದೆ. ಇದೇ ಸಂದರ್ಭದಲ್ಲಿ ಸಭಾ ಕಾರ್ಯಕ್ರಮದ ಮೊದಲು ಹಾಗೂ ಬಳಿಕ ಮನರಂಜನಾ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.