ಬೆಂಗಳೂರು : ‘ಥೇಮಾ’ ಥಿಯೇಟರ್ ಪ್ರಸ್ತುತ ಪಡಿಸುವ ‘ಪ್ರೈವಸೀ ಸೆಟಿಂಗ್ಸ್’ ಹೊಚ್ಚ ಹೊಸ ಕನ್ನಡ ನಾಟಕ ಪ್ರದರ್ಶನವನ್ನು ದಿನಾಂಕ 05 ನವೆಂಬರ್ 2026ರಂದು ಸಂಜೆ 4-30 ಮತ್ತು 7-00 ಗಂಟೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಶಿವಕುಮಾರ ಮಾವಲಿ ಇವರು ರಚಿಸಿರುವ ಡಾ. ಸುಷ್ಮಾ ಎಸ್. ವಿ. ವಿನ್ಯಾಸ ಮತ್ತು ನಿರ್ದೇಶನದ ಈ ನಾಟಕಕ್ಕೆ ರಾಘವೇಂದ್ರ ಬಿಜ್ಜಾ ಡಿ ಸಂಗೀತ ನೀಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 98440 18771 ಸಂಖ್ಯೆಯನ್ನು ಸಂಪರ್ಕಿಸಿರಿ.

