ತೀರ್ಥಹಳ್ಳಿ : ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶಿವಮೊಗ್ಗ ಶಾಖೆ ಇದರ 35ನೇ ವಾರ್ಷಿಕೋತ್ಸವದ ಪ್ರಯುಕ್ತ ದಾಸವರೇಣ್ಯ ಪುರಂದರದಾಸರ ‘ಕೀರ್ತನೋತ್ಸವ’ ಕಾರ್ಯಕ್ರಮವನ್ನು ದಿನಾಂಕ 04 ನವೆಂಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ತೀರ್ಥಹಳ್ಳಿ ಆರಗ ಸಹಕಾರ ಸಂಘ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ವಿದ್ವಾನ್ ಫಣೀಂದ್ರ ಇವರ ಹಾಡುಗಾರಿಕೆಗೆ ಮೈಸೂರಿನ ವಿದ್ವಾನ್ ಶ್ರೀಕಾಂತ್ ಪಿಟೀಲು, ಕೋಲಾರದ ವಿದ್ವಾನ್ ಕೆ.ಕೆ. ಭಾನು ಪ್ರಕಾಶ್ ಮೃದಂಗ ಮತ್ತು ಮಾಸ್ಟರ್ ಚಿರಾಗ್ ಮೋರ್ಸಿಂಗ್ ನಲ್ಲಿ ಸಹಕರಿಸಲಿದ್ದಾರೆ. ವಿದ್ವಾನ್ ಹೊಸಹಳ್ಳಿ ಕೆ. ವೆಂಕಟರಾಂ, ವಿದ್ವಾನ್ ಹೊಸಹಳ್ಳಿ ಕೆ. ಸುಬ್ಬರಾವ್ ಮತ್ತು ವಿದ್ವಾನ್ ಹೊಸಹಳ್ಳಿ ವಿ. ರಘುರಾಂ ಇವರ ಪಿಟೀಲು ವಾದನಕ್ಕೆ ಬೆಂಗಳೂರಿನ ವಿದ್ವಾನ್ ಎ.ಎಸ್.ಎನ್. ಸ್ವಾಮಿ ಮೃದಂಗ ಮತ್ತು ವಿದ್ವಾನ್ ಕೆ.ಕೆ. ಭಾನುಪ್ರಕಾಶ್ ಸಾಥ್ ನೀಡಲಿದ್ದಾರೆ. ವಿದ್ವಾನ್ ಶೃಂಗೇರಿ ನಾಗರಾಜ್ ಇವರ ಶಿಷ್ಯ ವೃಂದದ ಹಾಡುಗಾರಿಕೆಗೆ ವಿದ್ವಾನ್ ಮತ್ತೂರು ಮಧುಮುರಳಿ ಪಿಟೀಲು ಮತ್ತು ವಿದ್ವಾನ್ ಕೇಶವ ಭಾರದ್ವಾಜ್ ಮೃದಂಗ ನುಡಿಸಲಿದ್ದಾರೆ.
ವಿದ್ವಾನ್ ಹುಮಾಯುನ್ ಹರ್ಲಾಪುರ್, ವಿದ್ವಾನ್ ನವ್ ಶದ್ ಹರ್ಲಾಪುರ್, ವಿದ್ವಾನ್ ನಿಶಾದ್ ಹರ್ಲಾಪುರ್ ಇವರ ಹಿಂದೂಸ್ತಾನಿ ಗಾಯನಕ್ಕೆ ಬೆಂಗಳೂರಿನ ವಿದ್ವಾನ್ ಆದರ್ಶ್ ಶಣೈ ತಬಲ, ಸಾಗರದ ವಿದ್ವಾನ್ ಪ್ರಜ್ವಲ್ ನಾಡಿಗ ಬೇಸ್ ತಬಲ ಮತ್ತು ಹೆನಾರ ವಿದ್ವಾನ್ ಸತೀಶ್ ಭಟ್ ಹಾರ್ಮೋನಿಯಂ ನುಡಿಸಲಿದ್ದಾರೆ. ಬೆಂಗಳೂರಿನ ವಿದ್ವಾನ್ ಮಾರುತಿ ಪ್ರಸಾದ್ ಇವರ ಹಾಡುಗಾರಿಕೆಗೆ ವಿದ್ವಾನ್ ಹೊಸತಳ್ಳಿ ರಘುರಾಂ ಪಿಟೀಲು, ವಿದ್ವಾನ್ ಎ.ಎಸ್.ಎನ್. ಸ್ವಾಮಿ ಮೃದಂಗ, ಬೆಂಗಳೂರಿನ ವಿದ್ವಾನ್ ರಾಜಶೇಖರ್ ಮೋರ್ಸಿಂಗ್ ಮತ್ತು ವಿದ್ವಾನ್ ಭಾನು ಪ್ರಕಾಶ್ ಖಂಜಿರ ಸಾಥ್ ನೀಡಲಿದ್ದಾರೆ. ಪೂಜ್ಯ ಶ್ರೀ ಶ್ರೀ ಸಾಯಿಕೀರ್ತಿನಾಥ ಸ್ವಾಮೀಜಿ ಹಾಗೂ ವಿದ್ವಾನ್ ಮಾರುತಿ ಪ್ರಸಾದ್ ಇವರಿಂದ ಹಾರ್ಮೋನಿಯಂ ಕೀಬೋರ್ಡ್ ಜುಗಲ್ ಬಂದಿಗೆ ವಿದ್ವಾನ್ ಎ.ಎಸ್.ಎಸ್. ಸ್ವಾಮಿ ಮೃದಂಗ, ವಿದ್ವಾನ್ ರಾಜಶೇಖರ್ ಮೋರ್ಸಿಂಗ್, ವಿದ್ವಾನ್ ಆದರ್ಶ್ ಶಣೈ ತಬಲ ಮತ್ತು ವಿದ್ವಾನ್ ಕೆ.ಕೆ. ಭಾನುಪ್ರಕಾಶ್ ಖಂಜಿರ ಸಾಥ್ ನೀಡಲಿದ್ದಾರೆ. ಬಳಿಕ ಸಂಗೀತಗಾರರಿಂದ ಸಾಮೂಹಿಕ ಗಾಯನ ಹಾಗೂ ಸತ್ಸಂಗ ನಡೆಯಲಿದೆ.

