ಸುರತ್ಕಲ್ : ಗೋವಿಂದದಾಸ ಕಾಲೇಜಿನ ಗ್ರಂಥಾಲಯ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮ ದಿನಾಂಕ 28 ಆಗಸ್ಟ್ 2024 ರಂದು ಕಾಲೇಜಿನ ಗ್ರಂಥಾಲಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ದ್ವಿತೀಯ ಬಿ. ಎ. ವಿದ್ಯಾರ್ಥಿನಿ ಮುಂಜುಳಾ ಇವರು ಮಹೇಶ್ ಆರ್. ನಾಯಕ್ ಬರೆದಿರುವ ‘ಜಪಾನೀ ಪ್ಲೇಟ್’ ಎಂಬ ಕಥಾ ಸಂಕಲನವನ್ನು ಪರಿಚಯಿಸಿ “ಮಾನವೀಯ ಸಂಬಂಧಗಳ ಕುರಿತು ವಿವಿಧ ನೆಲೆಗಳಲ್ಲಿ ಕಥೆಗಳು ವ್ಯಾಖ್ಯಾನ ಮಾಡುತ್ತಿವೆ. ಆಧುನಿಕ ಬದುಕಿನ ವಿವಿಧ ಸ್ತರಗಳನ್ನು ಈ ಪುಸ್ತಕದ ಕಥೆಗಳು ನಿರೂಪಿಸುತ್ತವೆ.” ಎಂದರು.
ಮಂಜುಳಾ ಅವರಿಗೆ ಮಹೇಶ್ ಆರ್. ನಾಯಕ್ ಸ್ಮರಣಿಕೆ ನೀಡಿ ಗೌರವಿಸಿದರು ಬಳಿಕ ಮಾತನಾಡಿದ ಅವರು “ಪುಸ್ತಕ ಪ್ರೀತಿ ವಿದ್ಯಾರ್ಥಿಗಳಲ್ಲಿ ಪುಸ್ತಕ ಅಭಿರುಚಿ ಮೂಡಿಸುವ ವಿಶಿಷ್ಟ ಕಾರ್ಯಕ್ರಮವಾಗಿದೆ.” ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿ ಇವರು ಮಹೇಶ್ ಆರ್. ನಾಯಕ್ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕರಾದ ಪ್ರೊ. ಹರೀಶ್ ಆಚಾರ್ಯ, ಪ್ರಾಧ್ಯಾಪಕರುಗಳಾದ ಡಾ. ಕಾರ್ತಿಕ್, ಡಾ. ಆಶಾಲತಾ ಪಿ., ಡಾ. ಸಂತೋಷ ಆಳ್ವ, ಡಾ. ಭಾಗ್ಯಲಕ್ಷ್ಮೀ, ಅಕ್ಷತಾ, ಡಾ. ವಿಜಯಲಕ್ಷ್ಮೀ, ಕಿಟ್ಟುರಾಜು, ದಯಾ ಸುವರ್ಣ, ಡಾ. ಸುಧಾ ಯು. ಹಾಗೂ ಗ್ರಂಥಪಾಲಕಿ ಡಾ. ಸುಜಾತಾ ಬಿ. ಉಪಸ್ಥಿತರಿದ್ದರು. ದ್ವಿತೀಯ ಬಿ. ಎ. ವಿದ್ಯಾರ್ಥಿನಿ ಸಿಂಚನಾ ಸ್ವಾಗತಿಸಿದರು.