ಪುತ್ತೂರು : ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಪುತ್ತೂರು, ಇದರ ಆಶ್ರಯದಲ್ಲಿ ಅಧಿಕ ಶ್ರಾವಣ ಮಾಸ ಪ್ರಯುಕ್ತ ‘ವಿಶೇಷ ತಾಳಮದ್ದಳೆ ಚತುರ್ಥಿ’ ಕೊನೆಯ ಕಾರ್ಯಕ್ರಮದ ಅಂಗವಾಗಿ ದಿನಾಂಕ 12-08-2023ರಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ, ‘ಮಯೂರಧ್ವಜ’ ಎಂಬ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ ಮತ್ತು ಶ್ರೀ ಸತೀಶ್ ಇರ್ದೆ, ಚೆಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್, ಶ್ರೀ ಮುರಳೀಧರ ಕಲ್ಲೂರಾಯ ಮತ್ತು ಶ್ರೀ ಆದಿತ್ಯ ನಾರಾಯಣ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಪೂಕಳ ಲಕ್ಷ್ಮೀ ನಾರಾಯಣ ಭಟ್ (ಶ್ರೀ ಕೃಷ್ಣ), ಶ್ರೀ ಭಾಸ್ಕರ ಬಾರ್ಯ (ಮಯೂರಧ್ವಜ), ಶ್ರೀ ಕುಂಬ್ಳೆ ಶ್ರೀಧರ್ ರಾವ್ (ಕುಮುದ್ವತಿ). ಶ್ರೀ ದುಗ್ಗಪ್ಪ ಎನ್. (ತಾಮ್ರಧ್ವಜ) ಸಹಕರಿಸಿದರು. ದೇವಳದ ಆಡಳಿತ ಮೊಕ್ತೇಸರ ಅಶೋಕ್ ಪ್ರಭು ಸ್ವಾಗತಿಸಿ, ಸಂಚಾಲಕ ಭಾಸ್ಕರ ಬಾರ್ಯ ವಂದಿಸಿದರು. ಶ್ರೀ ದೇವಳದ ಆಡಳಿತ ಸಮಿತಿಯ ಸದಸ್ಯರು, ಅರ್ಚಕರು ಕಲಾವಿದರಿಗೆ ಪ್ರಸಾದ ನೀಡಿ ಗೌರವಿಸಿದರು. ಸಂಘದ ಗೌರವ ಕಾರ್ಯದರ್ಶಿ ಶ್ರೀ ರಂಗನಾಥ ರಾವ್ ಸಹಕಾರ ಇತ್ತರು. ದೇವಳದಲ್ಲಿ ನಡೆದ ನಾಲ್ಕೂ ಕಾರ್ಯಕ್ರಮಗಳಿಗೆ ಪ್ರೋತ್ಸಾಹವಿತ್ತ ಅಶೋಕ್ ಪ್ರಭು ಅವರನ್ನು ಸಂಘದ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.