ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ, ಧಮನಿ ಟ್ರಸ್ಟ್ (ರಿ.) ತೆಕ್ಕಟ್ಟೆ ಮತ್ತು ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಚಂದಕ್ಕಿ ಬಾರೇ ಕಥೆ ಹೇಳೆ’ ರಜಾ ರಂಗು 2025 ಬೇಸಿಗೆ ಶಿಬಿರವನ್ನು ದಿನಾಂಕ 11 ಏಪ್ರಿಲ್ 2025ರಿಂದ 04 ಮೇ 2025ರವರೆಗೆ ತೆಕ್ಕಟ್ಟೆ ಮಾದರಿ ಶಿಶುಮಂದಿರದ ನಿಸರ್ಗದಲ್ಲಿ ಆಯೋಜಿಸಲಾಗಿದೆ.
ಈ ಮಕ್ಕಳ ಬೇಸಿಗೆ ಶಿಬಿರವು 8 ವರ್ಷದಿಂದ 16 ವರ್ಷದ ಮಕ್ಕಳಿಗಾಗಿ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಮಾರ್ಗದರ್ಶನದಲ್ಲಿ ನೀನಾಸಂ, ರಂಗಾಯಣ ನಿರ್ದೇಶಕರುಗಳಿಂದ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 8073998079 ಮತ್ತು 9945947771 ಸಂಖ್ಯೆಯನ್ನು ಸಂಪರ್ಕಿಸಿರಿ. 3ರಿಂದ 7 ವರ್ಷದ ಮಕ್ಕಳಿಗೆ ‘ವಸಂತ’ ಬೇಸಿಗೆ ಶಿಬಿರವು ದಿನಾಂಕ 10 ಏಪ್ರಿಲ್ 2025ರಿಂದ 20 ಏಪ್ರಿಲ್ 2025ರವೆರೆಗೆ ಸೇವಾ ಸಂಗಮ ಮಾದರಿ ಶಿಶುಮಂದಿರದ ನಡೆಯಲಿದ್ದು, ಮಾಹಿತಿಗಾಗಿ 7026056430 ಮತ್ತು 8277719289 ಸಂಖ್ಯೆಯನ್ನು ಸಂಪರ್ಕಿಸಿರಿ.