ಮಾಣಿ : ಖ್ಯಾತ ಭರತನಾಟ್ಯ ದಂಪತಿ ಕಲಾದೀಪ – ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾರವರ ಸಂಪೂರ್ಣ ರಾಮಾಯಣ ನೃತ್ಯ ಸಪ್ತಾಹದ ಆರನೆಯ ದಿನದ ಪ್ರದರ್ಶನ ಮಾಣಿ ಪಾರ್ಪಜೆ ಹಿರಿಮನೆ ‘ಸರಸ್ವತಿ ನಿಲಯ’ದಲ್ಲಿ ದಿನಾಂಕ 31 ಮಾರ್ಚ್ 2026ರಂದು ನಡೆಯಿತು.
ನೃತ್ಯ ಕಾರ್ಯಕ್ರಮದ ಮೊದಲ ನಿರೂಪಣೆಯನ್ನು ವಿದುಷಿ ವಸುಧಾರವರು ಮಾಡುತ್ತಾ ಕಾರ್ಯಕ್ರಮದ ಉದ್ದೇಶ ಮತ್ತು ಸ್ವರೂಪದ ಬಗ್ಗೆ ಮಾಹಿತಿ ನೀಡಿದರು. ನಂತರ ಓಂಕಾರನಾದ – ಕುಮಾರಿ ಸನ್ನಿಧಿ, ಶಂಖನಾದ – ಶ್ರೀಮತಿ ಮೀನಾ ಎಸ್. ಭಟ್, ಪ್ರಾರ್ಥನೆ – ಕುಮಾರಿ ಧನ್ವಿತಾ, ಸಾನ್ವಿ, ನತಾಶಾ, ಜಾಹ್ನವಿ ಮತ್ತು ಕೃಪಾ ಇವರು ಮಾಡಿದರು. ಪಂಚಾಂಗ ಪಠಣ – ಕುಮಾರಿ ಮಹತಿ ಮಾಡಿ, ಅಭ್ಯಾಗತರ ಪರಿಚಯವನ್ನು ಕುಮಾರಿ ಸಮನ್ವಿತ ಲಕ್ಷ್ಮೀ ಹಾಗೂ ಕಲಾವಿದರ ಪರಿಚಯವನ್ನು ಕುಮಾರಿ ಧನ್ವಿತಾ ಮಾಡಿದರು.




ಅಭ್ಯಾಗತರಾದ ಶ್ರೀಮತಿ ನಯನಾ ಗಣರಾಜ್ ನೇರಳೆಕಟ್ಟೆ, ಶ್ರೀ ಮಹೇಶ್ವರ ಭಟ್ ಬಾರೆಪ್ಪಾಡಿ ಮತ್ತು ಶ್ರೀ ವೆಂಕಟರಮಣ ಭಟ್ ಮಕರಂದ ಇವರನ್ನು ಪಾರ್ಪಜೆ ಮನೆಯ ಶ್ರೀ ಶಿವರಾಮ ಭಟ್ ದಂಪತಿಗಳು, ಮಗ ಮತ್ತು ಸೊಸೆ ಗೌರವಿಸಿದರು. ಭರತನಾಟ್ಯ ಕಾರ್ಯಕ್ರಮ ಒಂದು ಗಂಟೆಯ ಕಾಲ ಜನರನ್ನು ಮಂತ್ರಮುಗ್ಧರಾಗುವಂತೆ ಮಾಡಿತು.



