ಕಲಬುರಗಿ : ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘ (ರಿ.) ಕಲಬುರಗಿ ಇದರ 15ನೇ ವರ್ಷದ ರಂಗಸಂಭ್ರಮದ ಪ್ರಯುಕ್ತ ‘ರಂಗ ವೈಭವ’ ಕಾರ್ಯಕ್ರಮವನ್ನು ದಿನಾಂಕ 31 ಆಗಸ್ಟ್ 2024ರಂದು ಸಂಜೆ 6-00 ಗಂಟೆಗೆ ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ.
ವಿಶ್ವರಂಗದ ಅಧ್ಯಕ್ಷರಾದ ಶ್ರೀಮತಿ ನೀತಾ ಪಾಟೇಲ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ರಂಗಾಯಣದ ನೂತನ ನಿರ್ದೇಶಕರಾದ ಡಾ. ಸುಜಾತ ಜಂಗಮ ಶೆಟ್ಟಿ ಇವರು ಉದ್ಘಾಟನೆ ಮಾಡಲಿರುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ವಿಶ್ವರಂಗ ಗೌರವ ಪುರಸ್ಕಾರ’ ನೀಡಿ ಸನ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚಿಕ್ಕಮಗಳೂರಿನ ಎನ್.ಆರ್. ಪುರದ ರಾಗ ಮಯೂರಿ ಅಕಾಡೆಮಿಯ ಶ್ರೀ ಗಣನಾಥ ಚಂದ್ರಚೂಡ ಇವರಿಂದ ಭಕ್ತಿ ಪ್ರಧಾನ ನೃತ್ಯಗಳು ಹಾಗೂ ತಂಡದವರಿಂದ ಬಾಂಗ್ರಾ – ಪಂಜಾಬಿ, ಬಂಜಾರ – ಲಂಬಾಣಿ, ಕರಗ – ತಮಿಳ್ನಾಡು, ಕಂಗಿಲೋ – ತುಳು ನಾಡು ನೃತ್ಯ, ಪುರುಳಿಯೋ ಚ್ಟಾವು – ವೆಸ್ಟ್ ಬೆಂಗಾಲ್ ಲಯನ್ ಡಾನ್ಸ್ ಮುಂತಾದ ಜಾನಪದ ನೃತ್ಯಗಳು, ಶಾಸ್ತ್ರೀಯ ನೃತ್ಯಗಳು ಮತ್ತು ನೃತ್ಯ ನಾಟಕಗಳು ಪ್ರಸ್ತುತಗೊಳ್ಳಲಿದೆ.