Subscribe to Updates

    Get the latest creative news from FooBar about art, design and business.

    What's Hot

    ಮುಂಬಯಿ ಯಕ್ಷಗಾನ ಸಮ್ಮೇಳನ 2026 ಇವರ ಸಮ್ಮೇಳನಾಧ್ಯಕ್ಷರಾಗಿ ಡಾ. ಟಿ. ಶ್ಯಾಮ ಭಟ್ ಆಯ್ಕೆ

    May 11, 2026

    ‘ಕಾವ್ಯಾಂ ವ್ಹಾಳೊ- 14’ ಕೊಂಕಣಿ ಕವಿಗೋಷ್ಠಿ

    May 11, 2026

    ವೈಶಾಖ ನಟನಂ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಆಂಧ್ರದ ಕಲಾತಂಡಗಳ ನೃತ್ಯ ಸೇವೆ

    May 11, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ರಂಗಸ್ಪಂದನದ ಸಾಂಸ್ಕೃತಿಕ ರಂಗದಿಬ್ಬಣದಲ್ಲಿ ಯಕ್ಷವೈಭವ ಕಾರ್ಯಕ್ರಮ
    Yakshagana

    ರಂಗಸ್ಪಂದನದ ಸಾಂಸ್ಕೃತಿಕ ರಂಗದಿಬ್ಬಣದಲ್ಲಿ ಯಕ್ಷವೈಭವ ಕಾರ್ಯಕ್ರಮ

    June 24, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ರಂಗಸ್ಪಂದನ ಸಂಸ್ಥೆ ಆಯೋಜಿಸಿರುವ ‘ಸಾಂಸ್ಕೃತಿಕ ರಂಗದಿಬ್ಬಣ’ದ ಸರಣಿ ಕಾರ್ಯಕ್ರಮದ ಅಂಗವಾಗಿ ದಿನಾಂಕ : 17-06-2023ರಂದು ಕಾವೂರು ಪದವಿನ ಶ್ರೀ ಗುರುವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಯಕ್ಷವೈಭವ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

    ಶ್ರೀ ಗುರುವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಶ್ರೀ ಕುಸುಮಾಕರ್‌ ಯಕ್ಷಜ್ಯೋತಿ ಪ್ರಜ್ವಲನೆ ಮಾಡಿ ಶುಭ ಹಾರೈಸುತ್ತಾ “ನಮ್ಮ ನಾಡಿನ ಕಲೆ ಸಂಸ್ಕೃತಿಯನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯ. ಮಕ್ಕಳಲ್ಲಿ ಕಲಾ ಪ್ರತಿಭೆ ಅರಳಿದಾಗಲೇ ಸಂಸ್ಕಾರದ ಅರಿವು ಮೂಡುತ್ತದೆ. ಹಾಗಾಗಿ ರಂಗಸ್ಪಂದನದ ಈ ಕಾರ್ಯ ಶ್ಲಾಘನೀಯ ಎಂದರು.

    ವೇದಿಕೆಯಲ್ಲಿ ಜಾನಪದ ವಿದ್ವಾಂಸ ಕೆ.ಕೆ. ಪೇಜಾವರ, ದೈವಸ್ಥಾನ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣ ಸಾಲಿಯಾನ್, ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಶ್ರೀ ಎಂ.ಸಿ. ಕುಮಾರ್ ಹಾಗೂ ತುಳಸಿ ಮಹಾಬಲ ಉಪಸ್ಥಿತರಿದ್ದರು.

    ರಂಗಸ್ಪಂದನದ ಸಂಚಾಲಕ ವಿ.ಜಿ. ಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ದಿನಕರ ಎಸ್. ಪಚ್ಚನಾಡಿ ಸ್ವಾಗತಿಸಿ, ಡಾ. ನಿವೇದಿತಾ ಹರೀಶ್ ನಿರೂಪಿಸಿದರು. ಹರೀಶ್ ಕಾವೂರು ವಂದಿಸಿದ ಬಳಿಕ ಕಾವೂರಿನ ಶ್ರೀ ಕಚ್ಚೂರಮಾಲ್ದಿ ಯಕ್ಷಗಾನ ಮಂಡಳಿಯ ಸದಸ್ಯರಿಂದ ಯಕ್ಷ ಗುರು ಡಾ. ದಿನಕರ ಎಸ್. ಪಚ್ಚನಾಡಿ ನಿರ್ದೇಶನದಲ್ಲಿ ‘ಜಾಂಬವತಿ ಕಲ್ಯಾಣ’ ಮತ್ತು ‘ಶ್ರೀದೇವಿ ಮಹಿಷ ಮರ್ದಿನಿ’ ಕಥಾ ಪ್ರಸಂಗದ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ಗಮನ ಸೆಳೆದ ಜಿಲ್ಲಾ ಮಟ್ಟದ ಜಾನಪದ ಸ್ಪರ್ಧೆಗಳ ವೈಭವ
    Next Article ಪರಿಚಯ ಲೇಖನ | “ಯಕ್ಷೋಪಾಸನಾ” – ಉಪಾಸನ ಪಂಜರಿಕೆ
    roovari

    Add Comment Cancel Reply


    Related Posts

    ಮುಂಬಯಿ ಯಕ್ಷಗಾನ ಸಮ್ಮೇಳನ 2026 ಇವರ ಸಮ್ಮೇಳನಾಧ್ಯಕ್ಷರಾಗಿ ಡಾ. ಟಿ. ಶ್ಯಾಮ ಭಟ್ ಆಯ್ಕೆ

    May 11, 2026

    ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಪಾಕ್ಷಿಕ ತಾಳಮದ್ದಳೆ

    May 11, 2026

    ಬೆಂಗಳೂರಿನಲ್ಲಿ ಸಪ್ತ ದಿನಗಳ ‘ತಿತ್ತಿತೈ ಯಕ್ಷಗಾನ ಶಿಬಿರ’ | ಮೇ 13ರಿಂದ

    May 8, 2026

    ಮಂಗಳೂರು ಆಕಾಶವಾಣಿಯಲ್ಲಿ ಯಕ್ಷಗಾನ ತಾಳಮದ್ದಲೆ | ಮೇ 8 ಮತ್ತು 15

    May 8, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.