ಬೆಂಗಳೂರು : ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ಮತ್ತು ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್ (ರಿ.) ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ‘ರಂಗೋತ್ಸವ’ ಕಾರ್ಯಕ್ರಮವನ್ನು ದಿನಾಂಕ 26, 27 ಮತ್ತು 28 ಮಾರ್ಚ್ 2025ರಂದು ಮಧ್ಯಾಹ್ನ ಗಂಟೆ 1-15ಕ್ಕೆ ಬೆಂಗಳೂರಿನ ಕಬ್ಬನ್ ಪಾರ್ಕ್ ಕೆ.ಜಿ.ಎಸ್. ಕ್ಲಬ್ ಚನ್ನಬಸವಪ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 26 ಮಾರ್ಚ್ 2025ರಂದು ಮಾಲತೇಶ ಬಡಿಗೇರ ಇವರ ನಿರ್ದೇಶನದಲ್ಲಿ ನೇತಾಜಿ ಕನ್ನಡ ಯುವಕ ಸಂಘ (ರಿ.) ಅಭಿನಯಿಸುವ ‘ಧೀರ ಭಗತ್’, ದಿನಾಂಕ 27 ಮಾರ್ಚ್ 2025ರಂದು ಛಾಯಾಭಾರ್ಗವಿ ಇವರ ನಿರ್ದೇಶನದಲ್ಲಿ ಚಿಕ್ಕ ಬಳ್ಳಾಪುರದ ಐಶ್ವರ್ಯ ಕಲಾನಿಕೇತನ (ರಿ.) ಅಭಿನಯಿಸುವ ‘ಶೂದ್ರ ತಪಸ್ವಿ’ ಮತ್ತು ದಿನಾಂಕ 28 ಮಾರ್ಚ್ 2025ರಂದು ಮೈಕೊ ಶಿವಶಂಕರ್ ಇವರ ನಿರ್ದೇಶನದಲ್ಲಿ ಕರ್ನಾಟಕ ಸಚಿವಾಲಯ ಕ್ಲಬ್ ಅಭಿನಯಿಸುವ ‘ನಮ್ಮ ನಿಮ್ಮೊಳಗೊಬ್ಬ’ ನಾಟಕಗಳು ಪ್ರದರ್ಶನಗೊಳ್ಳಲಿದೆ.