ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ‘ಸನಾತನ ನೃತ್ಯೋತ್ಸವ’ ಸನಾತನ ನಾಟ್ಯಾಲಯದ ನೃತ್ಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ಭರತನಾಟ್ಯ ವೈವಿದ್ಯ ಕಾರ್ಯಕ್ರಮವನ್ನು ದಿನಾಂಕ 16 ಆಗಸ್ಟ್ 2026ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ‘ಸನಾತನವೇ ಭಾರತದ ಸರ್ವಸ್ವ’ ಎಂಬ ವಿಷಯದ ಬಗ್ಗೆ ಎನ್.ಆರ್. ದಾಮೋದರ ಶರ್ಮಾ ಇವರು ಉಪನ್ಯಾಸ ನೀಡಲಿದ್ದಾರೆ.

