ಮಂಗಳೂರು : ಕರ್ನಾಟಕ ಪ್ರಾಂತೀಯ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ (ರಿ.) ಇದರ ವತಿಯಿಂದ ‘ಸಂದೇಶ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 10 ಫೆಬ್ರವರಿ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ನಂತೂರಿನಲ್ಲಿರುವ ಸಂದೇಶ ಪ್ರತಿಷ್ಠಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಬಳ್ಳಾರಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ವಂದನೀಯ ಹೆನ್ರಿ ಡಿ’ಸೋಜರವರು ವಹಿಸಲಿದ್ದು, ಮಾನ್ಯ ಸಚಿವರಾದ ದಿನೇಶ್ ಗುಂಡೂರಾವ್, ಧರ್ಮಸ್ಥಳ ಕ್ಷೇತ್ರದ ಧರ್ಮಾಧ್ಯಕ್ಷರಾದ ವಂದನೀಯ ಫ್ರಾನ್ಸಿಸ್ ಸೆರಾವೋ ಎಸ್.ಜೆ., ಬೆಳ್ತಂಗಡಿ ಕ್ಷೇತ್ರದ ಧರ್ಮಾಧ್ಯಕ್ಷರಾದ ವಂದನೀಯ ಲಾರೆನ್ಸ್ ಮುಕ್ಕುಯಿ, ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ಡಾ. ಸುದೀಪ್ ಪೌಲ್, ಸಂದೇಶ ಪ್ರತಿಷ್ಠಾನದ ವಿಶ್ವಸ್ಥರಾದ ರಾಯ್ ಕ್ಯಾಸ್ತಲಿನೊ ಮತ್ತು ಐವನ್ ಪಿಂಟೊ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಡಾ. ನಾ. ದಾಮೋದರ ಶೆಟ್ಟಿ ಇವರುಗಳು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
‘ಸಂದೇಶ ಸಾಹಿತ್ಯ ಪ್ರಶಸ್ತಿ – ಕನ್ನಡ’ ಶ್ರೀ ಬಿ.ಆರ್. ಲಕ್ಷ್ಮಣ್ ರಾವ್, ‘ಸಂದೇಶ ಸಾಹಿತ್ಯ ಪ್ರಶಸ್ತಿ – ಕೊಂಕಣಿ’ ಶ್ರೀಮತಿ ಐರಿನ್ ಪಿಂಟೊ, ಸಂದೇಶ ಸಾಹಿತ್ಯ ಪ್ರಶಸ್ತಿ – ತುಳು’ ಡಾ. ಗಣೇಶ್ ಅಮೀನ್ ಸಂಕಮಾರ್, ‘ಸಂದೇಶ ಮಾಧ್ಯಮ ಪ್ರಶಸ್ತಿ’ ಶ್ರೀ ಡಿ.ವಿ. ರಾಜಶೇಖರ್, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ’ ಶ್ರೀ ರೋಷನ್ ಡಿ’ಸೋಜ, ‘ಸಂದೇಶ ಕಲಾ ಪ್ರಶಸ್ತಿ’ ಶ್ರೀ ಗಿರೀಶ್ ಕಾಸರವಳ್ಳಿ, ‘ಸಂದೇಶ ಶಿಕ್ಷಣ ಪ್ರಶಸ್ತಿ’ ಡಾ. ಯೇನೆಪೊಯ ಅಬ್ದುಲ್ಲ ಕುಂಞಿ, ‘ಸಂದೇಶ ವಿಶೇಷ ಪ್ರಶಸ್ತಿ’ ಡಾ. ಕೆ.ವಿ. ರಾವ್, ‘ಸಂದೇಶ ಗೌರವ ಪ್ರಶಸ್ತಿ’ ಶ್ರೀ ಮೈಕಲ್ ಡಿಸೋಜ ಮತ್ತು ‘ಸಂದೇಶ ಪ್ರತಿಭಾ ಪ್ರಶಸ್ತಿ’ ಕುಮಾರಿ ರೆಮೋನ ಇವೆಟ್ ಪಿರೇರಾ ಇವರುಗಳಿಗೆ ಪ್ರದಾನ ಮಾಡಲಾಗುವುದು.