ಮಂಗಳೂರು : ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನದ ಆಶ್ರಯದಲ್ಲಿ ‘ಸ್ತ್ರೀ ಶಕ್ತಿ’ ಪರಿಕಲ್ಪನೆಯಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ದಿನಾಂಕ 24-03-2024ರ ಸಂಜೆ 5.30ರಿಂದ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ವಿ. ವಿ. ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಂಗಳೂರು ನಗರ ಪೊಲೀಸ್ ವಿಭಾಗದ ಎ. ಸಿ. ಪಿ. ಗೀತಾ ಡಿ. ಕುಲಕರ್ಣಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಉದ್ಯಮಿಗಳಾದ ಸುಬ್ರಮಣ್ಯ ಪ್ರಸಾದ್, ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷರಾದ ಉಸ್ತಾದ್ ರಫೀಖ್ ಖಾನ್, ಸಂಚಾಲಕರಾದ ಉಷಾಪ್ರಭಾ ನಾಯಕ್ ಹಾಗೂ ಖಜಾಂಜಿಯಾದ ಕರುಣಾಕರ ಬಳ್ಕೂರು ಉಪಸ್ಥಿತರಿದ್ದರು.
ಪೂರ್ವಾರ್ಧದಲ್ಲಿ ಬೆಂಗಳೂರಿನ ಶ್ರೀಲಕ್ಷ್ಮಿ ಬೆಳ್ಮಣ್ಣು ಅವರ ಶಾಸ್ತ್ರೀಯ ಗಾಯನ ಸಭಿಕರನ್ನು ರಂಜಿಸಿತು. ಇವರಿಗೆ ಹಾರ್ಮೋನಿಯಂನಲ್ಲಿ ಬೆಂಗಳೂರಿನ ನೀತಾ ಬೆಳೆಯೂರ್ ಮತ್ತು ತಬ್ಲಾದಲ್ಲಿ ಕುಂದಾಪುರದ ವಿಶ್ವೇಶ್ ಕಾಮತ್ ಸಾಥ್ ನೀಡಿದರು. ಉತ್ತಾರಾರ್ಧದಲ್ಲಿ ಉಜ್ಜಯನಿಯ ಸಹೋದರಿಯರಾದ ಸುಕೃತಿ ವಹಾನೆ ಮತ್ತು ಪ್ರಕೃತಿ ವಹಾನೆ ಇವರಿಂದ ‘ಸಿತಾರ್- ಸಂತೂರ್’ ಜುಗಲ್ ಬಂದಿ ಕಾರ್ಯಕ್ರಮ ನಡೆಯಿತು. ಇವರಿಗೆ ತಬ್ಲಾದಲ್ಲಿ ಹುಬ್ಬಳ್ಳಿಯ ಹೇಮಂತ್ ಜೋಶಿ ಸಾಥ್ ನೀಡಿದರು.