Subscribe to Updates

    Get the latest creative news from FooBar about art, design and business.

    What's Hot

    ‘ಯಕ್ಷ ಸಿರಿ’ ಯಕ್ಷಗಾನ ತರಬೇತಿ ಕೇಂದ್ರದ ಚತುರ್ಥ ವಾರ್ಷಿಕೋತ್ಸವ ಸಮಾರಂಭ | ಅಕ್ಟೋಬರ್ 17

    October 16, 2026

    ಯಕ್ಷ ಕಲಾವಿದ ಶ್ರೀಪಾದ ಭಟ್ ಥಂಡಿಮನೆ ನಿಧನ

    October 16, 2026

    ಅಜೆಕಾರು ಕಲಾಭಿಮಾನಿ ಬಳಗ ‘ರಜತ ಪರ್ವ’ಕ್ಕೆ ಕಳಶವಿಟ್ಟ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’

    October 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಕೇಶವ ಪ್ರಶಸ್ತಿ’ಗೆ ಹಿರಿಯ ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಆಯ್ಕೆ
    Awards

    ‘ಕೇಶವ ಪ್ರಶಸ್ತಿ’ಗೆ ಹಿರಿಯ ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಆಯ್ಕೆ

    October 16, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಹಿರಿಯ ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಇವರನ್ನು 2026ನೇ ಸಾಲಿನ ‘ಕೇಶವ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು ಇಪ್ಪತ್ತೈದು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಕಾರ್ಯಕ್ರಮವು ನವೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಕೂಡೂರು ಎಂಬಲ್ಲಿ ಜನಿಸಿದ ಕೆ. ಚಿನ್ನಪ್ಪ ಗೌಡರು ಮದರಾಸು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡಾ. ಬಿ.ಎ. ವಿವೇಕ ರೈ ಇವರ ಮಾರ್ಗದರ್ಶನದಲ್ಲಿ ‘ಭೂತಾರಾಧನೆ ಜಾನಪದೀಯ ಅಧ್ಯಯನ’ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಉಜಿರೆಯ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ವೃತ್ತಿ ಜೀವನ ಆರಂಭಿಸಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಲಸಚಿವರಾಗಿ, ಕಲಾನಿಕಾಯದ ಡೀನ್ ಆಗಿ, ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ ಇವರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಹಾವೇರಿಯಲ್ಲಿ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

    ಕನ್ನಡ ಸಾಹಿತ್ಯ ತುಳುವ ಮೌಖಿಕ ಕಥನ ಮತ್ತು ಸಂಸ್ಕೃತಿ ಹಾಗೂ ಜಾನಪದ ಅಧ್ಯಯನದ ಕುರಿತು ವಿಶೇಷ ಪರಿಣತಿ ಹೊಂದಿದ್ದಾರೆ. ಇವರು ಪಿಎಚ್.ಡಿ ಹಾಗೂ ಎಂ.ಫಿಲ್ ವಿದ್ಯಾರ್ಥಿಗಳ ಮಾರ್ಗದರ್ಶಕರೂ ಆಗಿ ಸೇವೆ ಸಲ್ಲಿಸಿದ್ದಾರೆ. ಇವರು ಫಿನ್ಲೆಂಡಿನ ಪೋಸ್ಟ್ ಡಾಕ್ಟ್ರಲ್ ಫೆಲೋಶಿಪ್, ಜಪಾನಿನ–ಜಪಾನ್ ಫೌಂಡೇಶನ್ ಫೆಲೊಶಿಪ್ ಪಡೆದವರಾಗಿದ್ದಾರೆ. ತುರ್ಕಿ ವಿ.ವಿ. ಫಿನ್ಲೆಂಡ್ ತ್ಯುಂಬಿಗನ್ ವಿ.ವಿ. ಜರ್ಮನಿಯ ವೂರ್ಝ್ ಬರ್ಗ್ ಮ್ಯಾಕ್ಸ್ ಮಿಲ್ಲನ್ಸ್ ವಿಶ್ವವಿದ್ಯಾನಿಲಯ ಮುಂತಾದ ಕಡೆ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

    ಭೂತಾರಾಧನೆ – ಮಾಯದ ನಡೆ ಜೋಗದ ನುಡಿ, The Mask And The Message, ಕಿತ್ತಳೆ ಹಣ್ಣಲ್ಲ (ಕನ್ನಡ ಕವನ ಸಂಕಲನ), ಕೆಲೆಪು ಪೆರಡೆ ಕೆಲೆಪು (ತುಳು ಕವನ ಸಂಕಲನ), ‘ಬೇಲಿಯೊಳಗಿನ ಬೆಳೆ’ (ಪ್ರಬಂಧ ಸಂಕಲನ). ಆಧುನಿಕ ತುಳು ಕಾವ್ಯ, ಆಧುನಿಕ ತುಳು ಕತೆಗಳು, ತುಳುವಿನ ಜನಪದ/ಅಜ್ಜಿ ಕತೆಗಳು, ಸತಿಕಮಲೆ ಕಾದಂಬರಿ, ಮಿತ್ಯನಾರಾಯಣ ಕತೆ, ಮಿತ್ತಬೈಲ್ ಯಮುನಕ್ಕ, ಕುಣಿತ ಮತ್ತು ಕೆಲಸದ ಹಾಡುಗಳು ಹೀಗೆ ತುಳುವಿನಿಂದ ಇಂಗ್ಲೀಷಿಗೆ ಅನುವಾದಿಸಿ ಏಳು ಅನುವಾದ ಸಂಪುಟಗಳ ಪ್ರಕಟನೆ (ಬಿ. ಸುರೇಂದ್ರ ರಾವ್ ಜೊತೆ). ಸಿರಿ ಸಂಧಿ : ಕನ್ನಡ ಪ್ರಸ್ತಾವನೆ ತುಳು ಪಠ್ಯ ಇವರ ಮುಖ್ಯ ಕೃತಿಗಳು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿ ಮತ್ತು ಜಾನಪದ ಅಕಾಡೆಮಿ ಕೃತಿ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸಂದೇಶ, ಕಾರಂತ, ಕುಶಿ, ಬನ್ನಂಜೆ, ಜೀಶಂಪ, ಪೊಳಲಿ ಶೀನಪ್ಪ ಹೆಗಡೆ ಪ್ರಶಸ್ತಿ, ಏರ್ಯ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.

    ಡಾ. ಕೆ. ಚಿನ್ನಪ್ಪ ಗೌಡ : ಮಂಗಳೂರು ವಿವಿ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ, ಅದೇ ವಿ.ವಿ.ಯ ಕುಲಸಚಿವರಾಗಿ, ಹಲವು ಪೀಠಗಳು ಮತ್ತು ಅಧ್ಯಯನ ಕೇಂದ್ರಗಳ ನಿರ್ದೇಶಕರಾಗಿ, ಕರ್ನಾಟಕ ಜಾನಪದ ವಿ.ವಿ.ಯ ಕುಲಪತಿಗಳಾಗಿ ಕರ್ತವ್ಯ ನಿರ್ವಹಣೆ. ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಇಪ್ಪತ್ತು ಪುಸ್ತಕಗಳ ಪ್ರಕಟನೆ. ಸಂಪಾದಿತ ಕೃತಿಗಳು ಐವತ್ತು. ಪ್ರಕಟಿತ ಸಂಶೋಧನಾ ಲೇಖನಗಳು ಅರುವತ್ತೈದು. ಭಾಗವಹಿಸಿದ ರಾಷ್ಟ್ರೀಯ/ ಅಂತರರಾಷ್ಟ್ರೀಯ ವಿಚಾರಗೋಷ್ಠಿಗಳು ಎಪ್ಪತ್ತೈದು. ಫಿನ್ಲೆಂಡ್‌ನ ತುರ್ಕು ವಿಶ್ವವಿದ್ಯಾಲಯ, ಜಪಾನಿನ ವಸೆದಾ ವಿಶ್ವವಿದ್ಯಾಲಯ, ಜರ್ಮನಿಯ ಟ್ಯೂಬಿಂಗೆನ್ ವಿ.ವಿ. ಮತ್ತು ವೂತ್ಸ್ ಬರ್ಗ್ ನ ಜ್ಯೂಲಿಯಸ್ ಮ್ಯಾಕ್ಸ್ ಮಿಲಿಯನ್ ವಿ.ವಿ.ಯ ಪ್ರಾಚ್ಯ ಭಾರತೀಯ ಅಧ್ಯಯನ ವಿಭಾಗದಲ್ಲಿ ಹಿರಿಯ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ. ಇಂಡೋ ಜರ್ಮನ್ ವಿನಿಮಯ ಯೋಜನೆ, ಜಪಾನ್ ಫೌಂಡೇಶನ್ ಫೆಲೋಶಿಪ್, ಜರ್ಮನಿಯ ವೂತ್ಸ್ ಬರ್ಗ್ ವಿ.ವಿ. ಸಂದರ್ಶಕ ಪ್ರಾಧ್ಯಾಪಕ ಐ.ಸಿ.ಸಿ.ಆರ್. ಫೆಲೋಶಿಪ್ ಪಡೆದು, ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಫಿನ್ಲೆಂಡ್ ಪಡೆದು ವಿದೇಶೀ ವಿವಿಗಳಲ್ಲಿ ಅಧ್ಯಯನ, ಸಂಶೋಧನೆ, ಬೋಧನೆಯ ಕೆಲಸ.

    ಕೆಲವು ಮುಖ್ಯ ಕೃತಿಗಳು : ಜಾಲಾಟ, ಭೂತರಾಧನೆ : ಜಾನಪದೀಯ ಅಧ್ಯಯನ, ಸಂಸ್ಕೃತಿ ಸಿರಿ, ಕರಾವಳಿ ಕಥನಗಳು, ಸಿರಿ ಸಂಧಿ : ಕನ್ನಡ ಪ್ರಸ್ತಾವನೆ ತುಳು ಪಠ್ಯ, ಭೂತಾರಾಧನೆ – ಮಾಯದ ನಡೆ ಜೋಗದ ನುಡಿ, The Mask And The Message, ಕಿತ್ತಳೆ ಹಣ್ಣಲ್ಲ (ಕನ್ನಡ ಕವನ ಸಂಕಲನ), ಕೆಲೆಪು ಪೆರಡೆ ಕೆಲೆಪು (ತುಳು ಕವನ ಸಂಕಲನ), ಬೇಲಿಯೊಳಗಿನ ಬೆಳೆ (ಪ್ರಬಂಧ ಸಂಕಲನ). ಆಧುನಿಕ ತುಳು ಕಾವ್ಯ, ಆಧುನಿಕ ತುಳು ಕತೆಗಳು, ತುಳುವಿನ ಜನಪದ/ಅಜ್ಜಿ ಕತೆಗಳು, ಸತಿಕಮಲೆ ಕಾದಂಬರಿ, ಮಿತ್ಯನಾರಾಯಣ ಕತೆ, ಮಿತ್ತಬೈಲ್ ಯಮುನಕ್ಕ, ಕುಣಿತ ಮತ್ತು ಕೆಲಸದ ಹಾಡುಗಳು ಹೀಗೆ ತುಳುವಿನಿಂದ ಇಂಗ್ಲೀಷ್ ಗೆ ಅನುವಾದಿಸಿ ಏಳು ಅನುವಾದ ಸಂಪುಟಗಳ ಪ್ರಕಟನೆ (ಬಿ. ಸುರೇಂದ್ರ ರಾವ್ ಜೊತೆ).

    ತುಳು ಜನಪದ ಸಾಹಿತ್ಯದ ಪ್ರಮುಖ ಪ್ರಕಾರಗಳ ಸಾಂಸ್ಕೃತಿಕ ವಿಮರ್ಶೆಯ ಮೂಲಕ ತುಳುವಿಗೆ ಜಾಗತಿಕ ಮನ್ನಣೆ. ಒಟ್ಟಿನಲ್ಲಿ ತುಳುವಿನ ಘನತೆ ಹೆಚ್ಚಿಸುವ ಕಾರ್ಯ. ಪ್ರಶಸ್ತಿಗಳು : ಕರ್ನಾಟಕ ಸಾಹಿತ್ಯ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿ ಮತ್ತು ಜಾನಪದ ಅಕಾಡೆಮಿ ಕೃತಿ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸಂದೇಶ, ಕಾರಂತ, ಕುಶಿ, ಬನ್ನಂಜೆ, ಜೀಶಂಪ, ಏರ್ಯ ಪ್ರಶಸ್ತಿಗಳು ಬಂದಿವೆ.

    award baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಕೊಂಕಣಿ ಸಾಹಿತ್ಯ ಅಕಾಡೆಮಿಯ ‘ಗೌರವ ಪ್ರಶಸ್ತಿ’ಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಅಕ್ಟೋಬರ್ 31
    Next Article ಅಜೆಕಾರು ಕಲಾಭಿಮಾನಿ ಬಳಗ ‘ರಜತ ಪರ್ವ’ಕ್ಕೆ ಕಳಶವಿಟ್ಟ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’
    roovari

    Add Comment Cancel Reply


    Related Posts

    ‘ಯಕ್ಷ ಸಿರಿ’ ಯಕ್ಷಗಾನ ತರಬೇತಿ ಕೇಂದ್ರದ ಚತುರ್ಥ ವಾರ್ಷಿಕೋತ್ಸವ ಸಮಾರಂಭ | ಅಕ್ಟೋಬರ್ 17

    October 16, 2026

    ಯಕ್ಷ ಕಲಾವಿದ ಶ್ರೀಪಾದ ಭಟ್ ಥಂಡಿಮನೆ ನಿಧನ

    October 16, 2026

    ಅಜೆಕಾರು ಕಲಾಭಿಮಾನಿ ಬಳಗ ‘ರಜತ ಪರ್ವ’ಕ್ಕೆ ಕಳಶವಿಟ್ಟ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’

    October 16, 2026

    ಕೊಂಕಣಿ ಸಾಹಿತ್ಯ ಅಕಾಡೆಮಿಯ ‘ಗೌರವ ಪ್ರಶಸ್ತಿ’ಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಅಕ್ಟೋಬರ್ 31

    October 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.