ಮಂಗಳೂರು : ಮಂಗಳೂರಿನ ಕದ್ರಿ ದೇವಸ್ಥಾನ ರಸ್ತೆಯಲ್ಲಿರುವ ನೃತ್ಯ ಭಾರತಿ (ರಿ.) ಪ್ರಸ್ತುತ ಪಡಿಸುವ ‘ಷಡೈಕ್ಯ ಉತ್ಕರ್ಷ’ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ದಿನಾಂಕ 13 ಜೂನ್ 2026ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ವಿದುಷಿ ಗೀತಾ ಸರಳಾಯ ಮತ್ತು ವಿದುಷಿ ರಶ್ಮಿ ಸರಳಾಯ ಇವರು ಶಿಷ್ಯೆಯರಾದ ದೀಪ್ತಿಶ್ರೀ ಎಸ್. ಜೋಗಿ, ದೇವಿಕಾ ಎಂ. ಕೋಟ್ಯಾನ್, ಅದಿತಿ ಕೊಟ್ಟಾರಿ, ಮೇಘನಾ, ರುಶಾಲಿ ಮತ್ತು ಭವಾನಿ ಎಂ. ಇವರುಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ರಂಗಪ್ರವೇಶ ಕಾರ್ಯಕ್ರಮವು ಕರ್ನಾಟಕ ಕಲಾಶ್ರೀ ವಿದುಷಿ ಗೀತಾ ಸರಳಾಯ ಇವರ ನಿರ್ದೇಶನದಲ್ಲಿ ನಡೆಯಲಿದ್ದು, ವಿದುಷಿ ರಶ್ಮಿ ಸರಳಾಯ ಇವರ ನೃತ್ಯ ಸಂಯೋಜನೆ ಮತ್ತು ನಟುವಾಂಗ, ಕೇರಳದ ವಿದ್ವಾನ್ ವಿನೀತ್ ಪುರುವಂಕರ ಇವರ ಹಾಡುಗಾರಿಕೆ, ವಿದ್ವಾನ್ ಸುರೇಶ್ ಬಾಬು ಮೃದಂಗಂನಲ್ಲಿ ಹಾಗೂ ವಿದ್ವಾನ್ ಗಣೇಶ್ ಕೆ. ಎಸ್. ಇವರು ಕೊಳಲಿನಲ್ಲಿ ಸಹಕರಿಸಲಿದ್ದಾರೆ.






