ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರದಲ್ಲಿ ದಿನಾಂಕ 11 ಜುಲೈ 2026ರಂದು ಶನಿವಾರ ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ ಎಂಬ ಶೀರ್ಷಿಕೆಯಡಿ ಸಂಘಟನೆಯ ಸವಾಲುಗಳು ಸಂಘಟಕ -ಕಲಾವಿದ- ಪ್ರೇಕ್ಷಕ- ಪೋಷಕ ಸಮಭಾಗಿಗಳು !? (ಕರ್ತಾ- ಕಾರಯಿತಾ- ಪ್ರೇರಕಃ- ಅನುಮೋದಕಃ ಸಮಭಾಗಿನಃ) ಎಂಬ ವಿಶೇಷ ಚಿಂತನ ಮಂಥನ ಕಾರ್ಯಕ್ರಮವು ಯಶಸ್ಸಿಯಾಯಿತು.
ಈ ಸಭೆಯ ಅಧ್ಯಕ್ಷತೆಯನ್ನು ಹಿರಿಯ ಸಂಘಟಕರಾದ ಶ್ರೀ ಭುಜಬಲಿ ಧರ್ಮಸ್ಥಳ ವಹಿಸಿ “ಸಂಘಟಕರು ಪಾರದರ್ಶಕತೆ – ಕರ್ತವ್ಯ ಪ್ರಜ್ಞೆ- ಕಲಾನಿಷ್ಠೆ ಇದ್ದಲ್ಲಿ ಯಾವುದೇ ಕಾರ್ಯಕ್ರಮ ಯಶಸ್ವಿ ಯಾಗುತ್ತದೆ” ಅಂದರು. ಯಕ್ಷಗಾನದ ವಿದ್ವಾಂಸರು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರು ಆಗಿರುವಂತಹ ಶ್ರೀ ಎಂ.ಎಲ್. ಸಾಮಗ ಉಡುಪಿಯವರು ಉದ್ಘಾಟಿಸಿ “ಪ್ರತಿಯೊಂದು ಮುಖ್ಯ ವಿಚಾರಗಳನ್ನು ಸೂಕ್ಷ್ಮವಾಗಿ ವಿವರಿಸಿದರು” ಉಜಿರೆ ಅಶೋಕ ಭಟ್ ಸಂಚಾಲಕರು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆಯವರು “ಸಂಘಟಕರು ತಮ್ಮ ಸಂಘಟನೆಯು ಯಶಸ್ವಿ ಯಾಗಿಸುವಲ್ಲಿ ಪ್ರಾಯೋಜಕರ ವಿಶ್ವಾಸ ಗಳಿಸಬೇಕು. ಪ್ರದರ್ಶನ ನಡೆಯುವ ಪ್ರದೇಶದ ಸ್ಥಳೀಯರನ್ನೂ, ಯುವ ಕಲಾವಿದರನ್ನು, ಮಹಿಳೆಯರನ್ನೂ ಜತೆ ಕರಿಸಿ ಹೊಸ ತಲೆಮಾರಿನ ಕಲಾವಿದರನ್ನು ಯಕ್ಷಗಾನಕ್ಕೆ ಸೆಳೆಯುವ ಪ್ರಯತ್ನ ಮಾಡಬೇಕೆಂದರು. ಕರ್ನಾಟಕ ಸರಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ. ಟಿ. ಶ್ಯಾಮ ಭಟ್ ರವರು, ಶ್ರೀ ಯಂ ಶಾಂತಾರಾಮ ಕುಡ್ವ ಮೂಡುಬಿದರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
“ಯಕ್ಷಗಾನದ ಭವಿಷ್ಯವನ್ನು ನಿರ್ಧರಿಸುವುದು ಉತ್ತಮ ಕಲಾವಿದರಷ್ಟೇ ಅಲ್ಲ, ಸಮರ್ಥ ಸಂಘಟಕರ ನಿರ್ಮಾಣವೂ ಆಗಿದೆ. ಭವಿಷ್ಯದ ಸಂಘಟನೆ ವರ್ಷಕ್ಕೊಮ್ಮೆ ಕಾರ್ಯಕ್ರಮ ನಡೆಸುವ ಸಂಸ್ಥೆಯಾಗಿರದೆ, ವರ್ಷಪೂರ್ತಿ ತರಬೇತಿ, ಸಂವಾದ, ಸಂಶೋಧನೆ ಮತ್ತು ಯುವಜನರ ತೊಡಗಿಸಿಕೊಳ್ಳುವಿಕೆಗೆ ಆದ್ಯತೆ ನೀಡಬೇಕು. ಡಿಜಿಟಲ್ ತಂತ್ರಜ್ಞಾನ, ದತ್ತಾಂಶ ಆಧಾರಿತ ಯೋಜನೆ ಮತ್ತು ಪಾರದರ್ಶಕ ಆಡಳಿತವನ್ನು ಅಳವಡಿಸಿಕೊಂಡು ಸಮಾಜದ ವಿಶ್ವಾಸವನ್ನು ಗಳಿಸಬೇಕು. ಪ್ರೇಕ್ಷಕರನ್ನು ಪಾಲುದಾರರನ್ನಾಗಿ ರೂಪಿಸಿ, ಹೊಸ ಕಲಾವಿದರು ಮತ್ತು ಸಂಘಟಕರನ್ನು ಬೆಳೆಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಸಹಕಾರ, ಉತ್ತರಾಧಿಕಾರ ನಿರ್ಮಾಣ ಮತ್ತು ದೂರದೃಷ್ಟಿಯ ನಾಯಕತ್ವವೇ ಯಕ್ಷಗಾನದ ಮುಂದಿನ ಸುವರ್ಣಯುಗಕ್ಕೆ ಅಡಿಪಾಯವಾಗಲಿದೆ ಎಂದು ಗೋಷ್ಠಿಯ ಸಮನ್ವಯ ಮಾಡಿದ ಕಲೆಯ ಬೆಳವಣಿಗೆ ಬಗ್ಗೆ ದೂರದೃಷ್ಟಿಯುಳ್ಳ, ಸಂಘಟಾನುಭವಿರುವ ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅಭಿಪ್ರಾಯಪಟ್ಟರು”.

ಚಂದ್ರಶೇಖರ್ ಭಟ್ ಕೊಂಕಣಾಜೆ ಸಂಘಟಕರು, ಜನಾರ್ದನ ಅಮ್ಮುಂಜೆ ಸಂಘಟಕರು, ಗಣೇಶ್ ಪಾಲೆಚಾರ್, ಯಕ್ಷಗಾನ ನಾಟ್ಯ ಶಿಕ್ಷಕರು ಸಂಘಟಕರು, ವಿನಯ ಆಚಾರ್ ಹೊಸಬೆಟ್ಟು ಸಂಘಟಕರು, ಸುಬ್ರಹ್ಮಣ್ಯ ಬೈಪಡಿತ್ತಾಯ ನಂದಳಿಕೆ, ಸಂಘಟಕರು, ದಿವಾಕರ ಆಚಾರ್ಯ ಗೇರು ಕಟ್ಟೆ ಸಂಘಟಕರು, ಸದಾಶಿವ ನೆಲ್ಲಿಮಾರು ಸಂಘಟಕರು ಮೂಡುಬಿದರೆ, ವಸಂತ ಮಾಸ್ಟರ್ ಬಾಯಾರು, ಸಂಘಟಕರು, ಜಯರಾಮ ದೇವಸ್ಯ, ಸಂಘಟಕರು, ಕುಮಾರ ಶಂಕರ ಭಟ್ ತಲೆಂಗಳ, ಸಂಘಟಕರು, ತಲ್ಪಣಾಜೆ ವೆಂಕಟ್ರಮಣ ಭಟ್, ಜಯಲಕ್ಷ್ಮಿ ಆರ್ ಹೊಳ್ಳ, ಗಣೇಶ ನಾವಡ ಮೀಯಪದವು. ಸಂಘಟಕರು, ನಾರಾಯಣ ತುಂಗ ಮಧೂರು ಸಂಘಟಕರು. ಪೆರುವಡಿ ಸುಬ್ರಹ್ಮಣ್ಯ ಭಟ್ ಸಂಘಟಕರು, ಜಯಲಕ್ಷ್ಮಿ ಕಾರಂತ, ರಾಜಾರಾಮ ಹೊಳ್ಳ ಕೈರಂಗಳ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ರಮೇಶ್ ಕೆ.ವಿ., ಪ್ರೊ. ಶ್ರೀನಾಥ್ ಕಾಸರಗೋಡು, ಜಗದೀಶ ಕೂಡ್ಲು, ಅನುಪಮಾ ರಾಘವೇಂದ್ರ ಭಟ್ ಉಡುಪು ಮೂಲೆ ಮುಂತಾದವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶ್ರೀ ರಾಜಾರಾಮ ರಾವ್ ಮೀಯಪದವು ನಿರೂಪಣೆ ಮಾಡಿದರೆ, ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ, ಸುಮಿತ್ರಾ ಮಯ್ಯ ಸಿರಿಬಾಗಿಲು ಅಥಿತಿಗಳನ್ನು ಸ್ವಾಗತಿಸಿ ಧನ್ಯವಾದಗಳು. ಇಡೀ ಕಾರ್ಯಕ್ರಮವು ಯಸ್.ವಿ. ವಿಷನ್ ಚಾನಲ್ ನಲ್ಲಿ ಮುಂದಿನ ದಿನಗಳಲ್ಲಿ ಪ್ರಸಾರವಾಗಲಿದೆ.

