Subscribe to Updates

    Get the latest creative news from FooBar about art, design and business.

    What's Hot

    ವಿನಮ್ರ ಇಡ್ಕಿದು ಹಾಡಿದ ದೃಶ್ಯ ಗೀತೆಗಳು ಬಿಡುಗಡೆ ಕಾರ್ಯಕ್ರಮ

    May 21, 2025

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿದ ‘ಶ್ರೀ ಕೃಷ್ಣ ಸಂಧಾನ’ ನಾಟಕ

    May 20, 2025

    ಸಹೋದಯ ಸಭಾಂಗಣದಲ್ಲಿ ಹಂಝ ಮಲಾರ್‌ರ ಬ್ಯಾರಿ ಪುಸ್ತಕಗಳು ಲೋಕಾರ್ಪಣೆ

    May 20, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕೋಟ ಸುರೇಶ್ ಅವರಿಗೆ ‘ಶ್ರೀನಿವಾಸ ಉಡುಪ’ ಪ್ರಶಸ್ತಿ
    Awards

    ಕೋಟ ಸುರೇಶ್ ಅವರಿಗೆ ‘ಶ್ರೀನಿವಾಸ ಉಡುಪ’ ಪ್ರಶಸ್ತಿ

    January 10, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೋಟ : ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕರಲ್ಲೋರ್ವರಾದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಂಗತ ಕಾರ್ಕಡ ಶ್ರೀನಿವಾಸ ಉಡುಪರ ನೆನಪಿನಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ಟ್ರಸ್ಟ್ ಕೊಡಮಾಡುವ 2023-24ರ ಸಾಲಿನ ಉಡುಪ ಪ್ರಶಸ್ತಿಗೆ ಕೋಟ ಅಮೃತೇಶ್ವರಿ ಮೇಳದ ಯಕ್ಷಗಾನ ಕಲಾವಿದ, ಮಟ್ಪಾಡಿ ತಿಟ್ಟಿನ ಕೋಟ ಸುರೇಶ್ ಬಂಗೇರ ಭಾಜನರಾಗಿದ್ದಾರೆ.

    ಯಕ್ಷಗಾನದ ದಂತಕಥೆ ಶಿರಿಯಾರ ಮಂಜು ನಾಯ್ಕರ ಮಾತುಗಾರಿಕೆ, ಗುರು ವೀರಭದ್ರ ನಾಯ್ಕರ ಹೆಜ್ಜೆಗಾರಿಕೆ, ಮೊಳಹಳ್ಳಿ ಹಿರಿಯ ನಾಯ್ಕ್ ಇವರ ರಂಗತಂತ್ರಗಳನ್ನು ಮೈಗೂಡಿಸಿಕೊಂಡು ಪ್ರಸಿದ್ದ ಪುರುಷ ವೇಷಧಾರಿಯಾಗಿ ಗುರುತಿಸಿಕೊಂಡು ಇದೀಗ ಯಕ್ಷರಂಗದಲ್ಲಿ ಎರಡನೆ ವೇಷದಲ್ಲಿ ಮಿಂಚುತ್ತಿರುವ ಸುರೇಶ್‌ ಇವರು ಸುಧನ್ವ, ಪುಷ್ಕಳ, ಶುಭ್ರಾಂಗ, ಮಾರ್ತಾಂಡತೇಜ, ಅರ್ಜುನ, ಕೃಷ್ಣ, ತಾಮ್ರಧ್ವಜ, ಪರಶುರಾಮ ಮೊದಲಾದ ಪಾತ್ರಗಳಲ್ಲದೆ ಹೊಸ ಪ್ರಸಂಗಗಳಲ್ಲೂ ಸೈ ಎನಿಸಿ, ಸೌಕೂರು, ಸಾಲಿಗ್ರಾಮ, ಪೆರ್ಡೂರು, ಕಮಲಶಿಲೆ, ಅಮೃತೇಶ್ವರಿ ಮೊದಲಾದ ಮೇಳಗಳಲ್ಲಿ ಸುಮಾರು 36 ವರ್ಷಗಳ ಕಾಲ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

    ದಿನಾಂಕ 11-02-2024ರ ಆದಿತ್ಯವಾರ ಕೋಟದ ಪಟೇಲರ ಮನೆಯ ಆವರಣದಲ್ಲಿ ಗಣ್ಯರ ಸಮಕ್ಷಮದಲ್ಲಿ ಹತ್ತು ಸಹಸ್ರ ಮೊಬಲಗಿನೊಂದಿಗೆ ಸುರೇಶ್ ಅವರನ್ನು ಗೌರವಿಸಲಾಗುವುದೆಂದು ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಟ್ರಸ್ಟಿನ ಕಾರ್ಯಾಧ್ಯಕ್ಷ ಮಹೇಶ್ ಉಡುಪ ಎಂ., ಅಧ್ಯಕ್ಷ ಬಲರಾಮ ಕಲ್ಕೂರ, ಉಪಾಧ್ಯಕ್ಷ ಜನಾರ್ದನ ಹಂದೆಯವರನ್ನೊಳಗೊಂಡ ಪ್ರಶಸ್ತಿ ಸಮಿತಿ ನಿರ್ಣಯಿಸಿದೆ ಎಂದು ಕಾರ್ಯದರ್ಶಿ ಎಚ್. ಸುಜಯೀಂದ್ರ ಹಂದೆ ತಿಳಿಸಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಜಾನಪದ ಅಧ್ಯಯನ ವೀರ ಬನ್ನಂಜೆ ಬಾಬು ಅಮೀನ್ ಇವರಿಗೆ ‘ಸಿರಿತುಪ್ಪ’ ಅಭಿನಂದನಾ ಕಾರ್ಯಕ್ರಮ
    Next Article ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಸಂತಾಪ ಸಭೆ
    roovari

    Add Comment Cancel Reply


    Related Posts

    ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಮತ್ತು ದತ್ತಿ ಪುರಸ್ಕಾರ ಪ್ರದಾನ | ಮೇ 21

    May 20, 2025

    ಮಂಗಳೂರು ಉರ್ವಸ್ಟೋರಿನಲ್ಲಿ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಉದ್ಘಾಟನೆ | ಮೇ 25

    May 20, 2025

    ಉಡುಪಿಯ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ‘ಕಲಾಯತನ’ ಸಾಹಿತ್ಯ ಯಕ್ಷ ಸಂಭ್ರಮ

    May 20, 2025

    ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ತಾಳಮದ್ದಳೆ ಕಾರ್ಯಕ್ರಮ

    May 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.