ಪುತ್ತೂರು : ಸಂಪ್ಯ ಉದಯಗಿರಿಯಲ್ಲಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಸ್ಯಮಂತಕ ಮಣಿ’ ಎಂಬ ತಾಳಮದ್ದಳೆ ದಿನಾಂಕ 31 ಡಿಸೆಂಬರ್ 2025ರಂದು ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಸವಣೂರು ಹಾಗೂ ಚೆಂಡೆ, ಮದ್ದಲೆಗಳಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಜಯಂತಿ ಹೆಬ್ಬಾರ್ (ಶ್ರೀಕೃಷ್ಣ), ಪ್ರೇಮಲತಾ ರಾವ್ (ನಾರದ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವ), ಹರಿಣಾಕ್ಷಿ ಜೆ. ಶೆಟ್ಟಿ (ಬಲರಾಮ) ಸಹಕರಿಸಿದರು. ರಾಧಾಕೃಷ್ಣ ಬೋರ್ಕರ್ ಸ್ವಾಗತಿಸಿ, ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ವಂದಿಸಿ, ರಂಗನಾಥ್ ರಾವ್ ಸಹಕರಿಸಿದರು. ಕಲಾವಿದರಿಗೆ ದೇವಾಲಯದ ಅರ್ಚಕ ಪ್ರೀತಂ ಪುತ್ತೂರಾಯ ಶ್ರೀ ದೇವರ ಪ್ರಸಾದವನ್ನಿತ್ತು ಗೌರವಿಸಿದರು. ನಂತರ ಧಾರ್ಮಿಕ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಅವರನ್ನು ಅರೆಮಾದನ ಹಳ್ಳಿ ಜಗದ್ಗುರು ಪೀಠದ ಶ್ರೀ ಶ್ರೀ ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಗಳವರು ಸನ್ಮಾನಿಸಿದರು.