ಮೈಸೂರು : ಪರಿವರ್ತನ ರಂಗ ಸಮಾಜ ಹಾಗೂ ಸಮುದಾಯ ಮೈಸೂರು ಸಂಸ್ಥೆಗಳ ಸಂಯಕ್ತಾಶ್ರಯದಲ್ಲಿ ನಮನ ಕಲಾವೇದಿಕೆ ಕೃಷ್ಣಮೂರ್ತಿಪುರಂ ಮೈಸೂರು ಇವರ ಸಹಕಾರದೊಂದಿಗೆ ಸಫ್ದರ್ ಹಶ್ಮಿ ನೆನಪಿನಲ್ಲಿ ಆಯೋಜಿಸುವ ‘ಸಾಮಾಜಿಕ ಪರಿವರ್ತನೆಯ ಸಾಧನವಾಗಿ ಬೀದಿ ನಾಟಕಗಳು’ ವಿಷಯದ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮವು ದಿನಾಂಕ 12 ಏಪ್ರಿಲ್ 2025ರಂದು ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾಮಂಟಪದಲ್ಲಿ ನಡೆಯಲಿದೆ.
ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಡಾ. ಮಹದೇವ್, ಜನಾರ್ಧನ (ಜೆನ್ನಿ), ಶಶಿಧರ್ ಭಾರಿಘಾಟ್, ಪ್ರೊ. ಕೆ. ಪಿ. ವಾಸುದೇವನ್ ಹಾಗೂ ಪ್ರೊ. ಎಸ್. ಆರ್. ರಮೇಶ್ ಭಾಗವಹಿಸಲಿದ್ದಾರೆ.

 
									 
					