Subscribe to Updates

    Get the latest creative news from FooBar about art, design and business.

    What's Hot

    ಬಳ್ಳಾರಿಯ ಕನ್ನಡ ಭವನದಲ್ಲಿ ಪುಸ್ತಕ ಲೋಕಾರ್ಪಣೆ | ಫೆಬ್ರುವರಿ 08

    February 4, 2026

    ಡಾ. ಸುಂದರ ಕೇನಾಜೆಯವರ ‘ಮಾತಿಲ್ಲದ ಮಾತು’ ಕೃತಿ ಬಿಡುಗಡೆ ಮತ್ತು ಪುಸ್ತಕ ಪ್ರದರ್ಶನ

    February 4, 2026

    ಮಂಗಳೂರಿನ ಡಾನ್‌ಬಾಸ್ಕೊ ಹಾಲ್‌ನಲ್ಲಿ ‘ಸಮರ್ಪಣ್’ ನೃತ್ಯೋತ್ಸವ | ಫೆಬ್ರುವರಿ 7 ಮತ್ತು 8

    February 4, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಂಗಭೂಮಿಯ ಹಿರಿಯ ಕಲಾವಿದ ವಿ. ಜಿ. ಪಾಲ್ ಇನ್ನಿಲ್ಲ
    Drama

    ರಂಗಭೂಮಿಯ ಹಿರಿಯ ಕಲಾವಿದ ವಿ. ಜಿ. ಪಾಲ್ ಇನ್ನಿಲ್ಲ

    March 21, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ನಟ, ನಿರ್ದೇಶಕ, ಸಂಘಟಕ ವೇಣುಗೋಪಾಲ ಟಿ. ಕೋಟ್ಯಾನ್ (ವಿ.ಜಿ.ಪಾಲ್) ಅನಾರೋಗ್ಯದಿಂದ ದಿನಾಂಕ 20-03-2024ರ ಬುಧವಾರ ರಾತ್ರಿ ನಿಧನರಾದರು.
    ತುಳು ರಂಗಭೂಮಿಯಲ್ಲಿ ಐದು ದಶಕಗಳಿಗೂ ಹೆಚ್ಚು ಸೇವೆ ಸಲ್ಲಿಸಿದ್ದ ಅವರು ಹತ್ತಾರು ನಾಟಕಗಳಲ್ಲಿ ಹಾಗೂ ತುಳು ಮತ್ತು ಕನ್ನಡ ಭಾಷೆಯ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ‘ಕಲ್ಜಿಗದ ಕುರುಕ್ಷೇತ್ರ’ ತುಳು ನಾಟಕದ ಮೂಲಕ 1961ರಲ್ಲಿ ರಂಗಪ್ರವೇಶ ಮಾಡಿದ ವಿ.ಜಿ.ಪಾಲ್ ಹಾಸ್ಯ ಪಾತ್ರಕ್ಕೊಂದು ಮಾದರಿಯಾಗಿದ್ದರು. ಚಲನಚಿತ್ರಗಳು, ಕಿರುತೆರೆ, ಧ್ವನಿ ಸುರುಳಿಗಳಿಗೆ ಕಂಠದಾನ ಮಾಡಿದ್ದರು. ತುಳು ನಾಟಕಗಳನ್ನು ಪ್ರಥಮ ಬಾರಿಗೆ ಕೊಲ್ಲಿ ರಾಷ್ಟ್ರದಲ್ಲಿ ಪ್ರದರ್ಶನ ನೀಡಿದ ಖ್ಯಾತಿ ಇವರದ್ದು. ಕನ್ನಡದ ‘ಜೀವನ್ಮುಖಿ’, ‘ಮಹಾನದಿ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಬಯ್ಯಮಲ್ಲಿಗೆ’, ‘ಭಾಗ್ಯವಂತೆದಿ’, ‘ಸತ್ಯ ಓಲುಂಡು’, ‘ಬಂಗಾರ್ ಪಟ್ಲೇರ್’, ‘ಮಾರಿಬಲೆ’, ‘ತುಡರ್’ ಸೇರಿ ಸುಮಾರು 2,000 ಸಾಮಾಜಿಕ, ಐತಿಹಾಸಿಕ ಹಾಗೂ ಪೌರಾಣಿಕ ನಾಟಕ ಹಾಗೂ ಸಿನೆಮಾಗಳಲ್ಲಿ ಅಭಿನಯಿಸಿದ ಹಿರಿಮೆ ಇವರದ್ದು. ಐ. ಟಿ. ಐ. ವಿದ್ಯಾಭ್ಯಾಸ ಪಡೆದಿದ್ದ ಅವರು ಮೀನುಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಹಿರಿಯ ಸಹಾಯಕರಾಗಿ ನಿವೃತ್ತರಾಗಿದ್ದರು.
    ‘ಕರ್ನಾಟಕ ನಾಟಕ ಅಕಾಡೆಮಿ’ ಪ್ರಶಸ್ತಿ, ‘ತುಳು ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ. ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ‘ರಂಗ ಚಾವಡಿ’ಮೊಗವೀರ ಸಾಧನಾ ಪ್ರಶಸ್ತಿಗಳೂ ಸೇರಿದಂತೆ ಅವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರಿಗೆ 75 ವರ್ಷ ತುಂಬಿದಾಗ ‘ಪಾಲ್ ಕಡಲ್’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಗಿತ್ತು. ’ರಂಗ ಸ್ಪಂದನ’ ಸಂಸ್ಥೆಯನ್ನು ಸ್ಥಾಪಿಸಿ ಹಲವಾರು ರಂಗಭೂಮಿ ತಂಡಗಳಿಗೆ ಹಾಗೂ ಕಲಾವಿದರಿಗೆ ವೇದಿಕೆ ಒದಗಿಸಿ ಕೊಟ್ಟಿದ್ದರು.
    ತನಿಯಪ್ಪ ಕೋಟ್ಯಾನ್ ಹಾಗೂ ಸೀತಮ್ಮ ಪುತ್ರನ್ ದಂಪತಿಗಳ ಮಗನಾಗಿ ಜನಿಸಿದ ಇವರು ಸುಶೀಲಾರನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಅವರಿಗೆ ಇಬ್ಬರು ಪುತ್ರರು ಒಬ್ಬ ಪುತ್ರಿ ಇದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleದಿವ್ಯಾಂಗ ಚೇತನ ಮಕ್ಕಳ ಕವಿಗೋಷ್ಠಿಗೆ ಆಹ್ವಾನ | ಕೊನೆಯ ದಿನಾಂಕ ಏಪ್ರಿಲ್ 7
    Next Article ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ’ ಪ್ರಶಸ್ತಿ
    roovari

    Add Comment Cancel Reply


    Related Posts

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಭಾರತ ರಂಗ ಮಹೋತ್ಸವ ಹಾಗೂ ರಂಗ ಪರಿಷೆ’ | ಫೆಬ್ರವರಿ 01ರಿಂದ 06

    January 31, 2026

    ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಪ್ರಶಸ್ತಿ ಪದಾನ ಸಮಾರಂಭ | ಜನವರಿ 31 ಮತ್ತು ಫೆಬ್ರವರಿ 01

    January 30, 2026

    ಪ್ರಸಿದ್ಧ ಹಾಸ್ಯಗಾರ ಮಹೇಶ ಮಣಿಯಾಣಿಯವರು ‘ವನಜ-ಸುಜನಾ ರಂಗಮನೆ ಪ್ರಶಸ್ತಿ’ಗೆ ಆಯ್ಕೆ

    January 29, 2026

    ಭಾಸ್ಕರ ರೈ ಕುಕ್ಕುವಳ್ಳಿಯವರ ‘ಕಲ್ಲುರ್ಟಿ ಕಥನ’ ನಮ್ಮ ಕೊಂಬಾರು ಯೂಟ್ಯೂಬ್ ನಲ್ಲಿ ಬಿಡುಗಡೆ

    January 29, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.