ಸುರತ್ಕಲ್ : ಮಣಿಕೃಷ್ಣ ಸ್ವಾಮಿ ಅಕಾಡೆಮಿ ಸುರತ್ಕಲ್ ಮತ್ತು ನಾಗರಿಕ ಸಲಹಾ ಸಮಿತಿಗಳ ಸಹಯೋಗದಲ್ಲಿ ಸುರತ್ಕಲ್ ಇನ್ನರ್‌ವೀಲ್ ಕ್ಲಬ್ ಸುರತ್ಕಲ್ ಸಹಭಾಗಿತ್ವದಲ್ಲಿ ಸುರತ್ಕಲ್ ಮೇಲ್ಸೇತುವೆಯ ತಳ ಭಾಗದಲ್ಲಿ ‘ಉದಯರಾಗ-51’ನೇ ಶಾಸ್ತ್ರೀಯ ಸಂಗೀತ ಸರಣಿ ಕಾರ್ಯಕ್ರಮವು ದಿನಾಂಕ 24-03-2024ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುರತ್ಕಲ್ ಇನ್ನರ್ ವೀಲ್‌ಕ್ಲಬ್ ಅಧ್ಯಕ್ಷೆ ಸಾವಿತ್ರಿ ರಮೇಶ್ ಭಟ್ “ಶಾಸ್ತ್ರೀಯ ಸಂಗೀತ ಸಹೃದಯರ ಮನಸ್ಸನ್ನು ಅರಳಿಸುವ ಶ್ರೇಷ್ಠ ಕಲಾ ಪ್ರಕಾರವಾಗಿದ್ದು, ಕಲಾ ವಾತಾವರಣವನ್ನು ಕಲ್ಪಿಸಿ ಕೊಡಬೇಕು” ಎಂದು ನುಡಿದರು.

ರೋಶ್ನಿ ಉಪಾಧ್ಯಾಯ ಸಾರಡ್ಕ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ತನ್ಮಯಿ ಉಪ್ಪಂಗಳ ಪುತ್ತೂರು ಅವರು ವಯಲಿನ್ ನಲ್ಲಿ ಹಾಗೂ ಮೃದಂಗದಲ್ಲಿ ಅವಿನಾಶ್ ಬಿ. ಮಂಗಳೂರು ಸಹಕರಿಸಿದರು.
ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ್ ರಾವ್, ಸಂಯೋಜಕ ಸತೀಶ್ ಸದಾನಂದ್, ಪ್ರೊ. ರಮೇಶ್ ಭಟ್ ಎಸ್.ಜಿ., ಸಾಹಿತಿ ರಘುರಾಮ ರಾವ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿದರು.