Subscribe to Updates

    Get the latest creative news from FooBar about art, design and business.

    What's Hot

    ಉದ್ಯಾವರದ ಸರಕಾರಿ ಕಾಲೇಜಿನಲ್ಲಿ ಬಹುಭಾಷಾ ನಿರಂತರ್ ನಾಟಕೋತ್ಸವ | ಫೆಬ್ರವರಿ 05ರಿಂದ 08

    February 4, 2026

    ಕನ್ನಡ ಸಾಹಿತ್ಯ ಪರಂಪರೆ ಮತ್ತು ಸಮಕಾಲೀನತೆ ಉಪನ್ಯಾಸ ಮಾಲಿಕೆ | ಫೆಬ್ರವರಿ 05

    February 4, 2026

    ನೃತ್ಯ ವಿಮರ್ಶೆ | ಸಭಾದಲ್ಲಿ ಸಭೆಯ ಮನಗೆದ್ದ ನೃತ್ಯ ಮಾರ್ಗಂ

    February 4, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶ್ರೀ ದುರ್ಗಾ ಮಕ್ಕಳ ಮೇಳದ 16ನೇ ವಾರ್ಷಿಕ ಕಲಾಪರ್ವದ ಸಮಾರೋಪ ಸಮಾರಂಭ
    Felicitation

    ಶ್ರೀ ದುರ್ಗಾ ಮಕ್ಕಳ ಮೇಳದ 16ನೇ ವಾರ್ಷಿಕ ಕಲಾಪರ್ವದ ಸಮಾರೋಪ ಸಮಾರಂಭ

    January 5, 2025Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಟೀಲು : ಶ್ರೀ ದುರ್ಗಾ ಮಕ್ಕಳ ಮೇಳದ 16ನೇ ವಾರ್ಷಿಕ ಕಲಾಪರ್ವದ ಸಮಾರೋಪ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 29 ಡಿಸೆಂಬರ್ 2024ರಂದು ಸರಸ್ವತೀ ಸದನದಲ್ಲಿ ನಡೆಯಿತು.

    ಈ ಸಮಾರಂಭದಲ್ಲಿ ಭಾಗವಹಿಸಿ ಶುಭಾಶಂಸನೆ ಗೈದ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ “ಯಕ್ಷಗಾನ ನಮ್ಮಲ್ಲಿ ಸತ್ ಚಿಂತನೆಯನ್ನು ಬೆಳೆಸುವುದರಿಂದ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಕಟೀಲು ಮಕ್ಕಳ ಮೇಳದ ಕಾರ್ಯ ಅಭಿನಂದನೀಯ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಯಕ್ಷಗಾನ ವಿದ್ವಾಂಸ ಕೆ.ಎಲ್. ಕುಂಡಂತಾಯ ಇವರಿಗೆ ‘ಕಟೀಲು ಸದಾನಂದ ಆಸ್ರಣ್ಣ ಪ್ರಶಸ್ತಿ’ ಹಾಗೂ ಖ್ಯಾತ ಹಿಮ್ಮೇಳ ವಾದಕ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಯವರಿಗೆ ‘ಕಟೀಲು ಕೃಷ್ಣ ಆಸ್ರಣ್ಣ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

    ಈ ಸಮಾರಂಭದಲ್ಲಿ ಭಾಗವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಇವರು ಮಾತನಾಡಿ “ಯಕ್ಷಗಾನ ಕಲಿಕೆಯತ್ತ ಮಕ್ಕಳ ಸೆಳೆತ ಸ್ತುತ್ಯರ್ಹ ಬೆಳವಣಿಗೆಯಾಗಿದ್ದು, ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರವನ್ನು ಯಕ್ಷಗಾನದ ಮೂಲಕ ಕಲಿಸುವ ಅವಕಾಶ ಇದೆ. ಇಲ್ಲದಿದ್ದರೆ ಹಿರಿಯರನ್ನು ಗೌರವಿಸುವ ಮನಸ್ಥಿತಿಯಿಂದ ದೂರವಾಗುವ ಮಕ್ಕಳನ್ನು ಕಾಣುವ ದಿನಗಳು ಬರಬಹುದು” ಎಂದರು.

    ಕಟೀಲು ಅರ್ಚಕ ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ. ಕಮಲಾದೇವೀಪ್ರಸಾದ ಆಸ್ರಣ್ಣ, ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜ ಸಂಘಟನೆಯ ಸುಬ್ರಹ್ಮಣ್ಯ ಪ್ರಸಾದ್, ಖ್ಯಾತ ವಕೀಲ ಪಿ.ಎಸ್. ರಾಜಗೋಪಾಲ್, ಉದ್ಯಮಿ ಪ್ರದ್ಯುಮ್ನ ರಾವ್, ಲೋಕಯ್ಯ ಸಾಲ್ಯಾನ್, ಗುರುರಾಜ ಮಲ್ಲಿಗೆಯಂಗಡಿ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ. ಸಿ.ಎ. ಚಂದ್ರಶೇಖರ ಶೆಟ್ಟಿ, ರಾಧಾಕೃಷ್ಣ ನಾಯಕ್, ನಿತಿನ್ ಹೆಗ್ಡೆ ಎಕ್ಕಾರು, ಸೀತಾರಾಮ ಶೆಟ್ಟಿ, ಕೊಡೆತ್ತೂರು ದಿವಾಕರ ಶೆಟ್ಟಿ, ಕುಕ್ಕುಂದೂರು ಚಂದ್ರಶೇಖರ ಶೆಟ್ಟಿ, ಶ್ರೀಧರ ಶೆಟ್ಟಿ ಪುಳಿಂಚ, ಅಲಂಗಾರು ದೇಗುಲದ ಸುಬ್ರಹ್ಮಣ್ಯ ಭಟ್, ಕಟೀಲು ಕಾಲೇಜಿನ ಕುಸುಮಾವತಿ, ಮುಖ್ಯ ಶಿಕ್ಷಕಿ ಸರೋಜಿನಿ ಮತ್ತಿತರರು ಉಪಸ್ಥಿತರಿದ್ದರು. ದುರ್ಗಾ ಮಕ್ಕಳ ಮೇಳದ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿ, ವಾಸುದೇವ ಶೆಣೈ ನಿರೂಪಿಸಿ, ಪಶುಪತಿ ಶಾಸ್ತ್ರಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಮೇಳದ ಕಲಾವಿದರಿಂದ ಯಕ್ಷಗಾನದ ಪೂರ್ವರಂಗ, ಒಡ್ಡೋಲಗಗಳು, ತಾಳಮದ್ದಲೆ, ಗಾನವೈಭವ ಯಕ್ಷಗಾನ ಪ್ರಸಂಗಗಳು ಪ್ರದರ್ಶಿತವಾದವು.

    yakshagana
    Share. Facebook Twitter Pinterest LinkedIn Tumblr WhatsApp Email
    Previous Article2024ನೇ ಸಾಲಿನ ‘ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಫೆಬ್ರುವರಿ 20
    Next Article ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಐ.ಟಿ.ಸಿ. ಮಿನಿ ಸಂಗೀತ ಸಮ್ಮೇಳನ’ | ಜನವರಿ 12
    roovari

    Add Comment Cancel Reply


    Related Posts

    ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಾಟಕ ಮಹೋತ್ಸವ ಮತ್ತು ಪ್ರಶಸ್ತಿ ಪ್ರದಾನ

    February 4, 2026

    ಆನೆಗುಡ್ಡೆ ದೇಗುಲದಲ್ಲಿ ಪ್ರಸಿದ್ಧ ಅರ್ಥದಾರಿಗಳಿಂದ ‘ಅರ್ಥಾಂಕುರ’ | ಫೆಬ್ರವರಿ 05

    February 4, 2026

    ಉರ್ವಸ್ಟೋರ್ ಸಾಹಿತ್ಯ ಸದನದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ ಸಮಾರಂಭ | ಫೆಬ್ರುವರಿ 07

    February 3, 2026

    ಉಡುಪಿಯಲ್ಲಿ ಶ್ರೀ ಪುರಂದರದಾಸರು ಹಾಗೂ ಸಂಗೀತ ತ್ರಿಮೂರ್ತಿ ಉತ್ಸವ -2026 | ಫೆಬ್ರವರಿ 06ರಿಂದ 08

    February 2, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.