ಮಂಗಳೂರು : ಮಂಗಳೂರು ಬಲ್ಯಾಯ ಯಾನೆ ಕಣಿಶನ್ ಮಹಾಜನ ಸಂಘ ಆಯೋಜಿಸಿದ 4 ದಿನಗಳ ಮಕ್ಕಳ ಬೇಸಿಗೆ ಶಿಬಿರ ‘ಸುನಾದ- 2024’ ಇದರ ಸಮಾರೋಪ ಸಮಾರಂಭವು ದಿನಾಂಕ 23-05-2024 ರಂದು ಮಂಗಳೂರಿನ ಗರೋಡಿಯ ಸರ್ವಮಂಗಳ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷೆ ಉಮಾಲಕ್ಷ್ಮೀ ಕುಡುಪು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಚಂದ್ರಶೇಖರ ಪಾತೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಖ್ಯಾತ ನಟ ಹಾಗೂ ಹಾಡುಗಾರರಾದ ಮೈಮ್ ರಾಮ್ ದಾಸ್ ಶಿಬಿರಕ್ಕೆ ಚಾಲನೆ ನೀಡಿದರು. ವಿದುಷಿ ವಿದ್ಯಾ ಮನೋಜ್, ಶಿಕ್ಷಕ ಪ್ರೇಮ್ ನಾಥ್ ಮರ್ಣೆ, ಗರೋಡಿ ಕ್ಷೇತ್ರದ ಪ್ರಬಂಧಕ ಕಿಶೋರ್ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಅರುಣ್ ಕುಮಾರ್ ಪಿ. ವಿ., ಮಹಿಳಾ ವೇದಿಕೆಯ ಮಮತಾ ಗಣೇಶ್, ಯುವ ವೇದಿಕೆಯ ಅರವಿಂದ್ ಪಂಡಿತ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಲ್ಲಿಕಾ ಭಾನುಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಜಯಪ್ರಕಾಶ್ ಪಂಡಿತ್ ಬಬ್ಬುಕಟ್ಟೆ ವಂದಿಸಿದರು.
ಕಲಾವಿದ ನವೀನ್ ಅಡ್ಕರ್ ನಿರ್ದೇಶನದಲ್ಲಿ ಗೋಪಾಡ್ಕರ್, ಸುಮಾಡ್ಕರ್, ಆದಿ ಸ್ವರೂಪ, ಉಮಾಲಕ್ಷ್ಮೀ ಕುಡುಪು, ದಿನೇಶ್ ಹೊಳ್ಳ, ಪ್ರೇಮ್ ನಾಥ್ ಮರ್ಣೆ, ಅಕ್ಷತಾ ಕುಡ್ಲ, ಚೇತನ್ ಕೊಪ್ಪ, ಅರವಿಂದ್ ಕುಡ್ಲ, ಝಬೇರ್ ಕುಡ್ಲ, ಚಂದ್ರಾಡ್ಕರ್, ಡಾ. ಶಿಲ್ಪಾ ಶಿತಿನ್, ತಾರನಾಥ ಕೈರಂಗಳ, ಜಯಪ್ರಕಾಶ್ ಪಂಡಿತ್, ಜಯಪ್ರಕಾಶ್ ಎಕ್ಕೂರು, ಮೇಘಾ ಮೆಂಡನ್, ಭವನ್ ಪಿ. ಜಿ. ಹಾಗೂ ಜಗನ್ ಪವಾರ್, ಮಕ್ಕಳಿಗೆ ಗೋಡೆ ಪತ್ರಿಕೆ, ಕ್ರಿಯಾತ್ಮಕ ಬರವಣಿಗೆ, ಹಾಡು, ಮಿಮಿಕ್ರಿ, ಮುಖವಾಡ ತಯಾರಿ, ನಾಟಕ, ಮೂಕಾಭಿನಯ, ಗೂಡುದೀಪ, ಕ್ರಿಯಾತ್ಮಕ ಚಿತ್ರಕಲೆ, ಕೊಲಾಜ್, ಜನಪದ ನೃತ್ಯ, ಆರೋಗ್ಯದಲ್ಲಿ ಆಯುರ್ವೇದ, ಮನೋರಂಜನಾ ಆಟ, ಯೋಗಾಸನ, ಪೇಪರ್ ಪೆನ್, ಪೇಪರ್ ಗೊಂಬೆ, ಹಾಗೂ ಬಾಟಲಿ ಚಿತ್ರಗಳನ್ನು ತಯಾರಿಸುವ ಬಗ್ಗೆ ತರಬೇತಿ ನೀಡಿದ್ದು, ಶಿಬಿರಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಶಿಬಿರಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.