ಮಂಗಳೂರು : ದಿ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವತಿಯಿಂದ ಶ್ರೀ ನಾರಾಯಣಿ ಸಂಗೀತ ಕಲಾ ಕೇಂದ್ರ ಇವರ ಸಹಯೋಗದಲ್ಲಿ ‘ವಸಂತ ಸಂಗೀತೋತ್ಸವ’ ಕಾರ್ಯಕ್ರಮವನ್ನು ದಿನಾಂಕ 15 ಮಾರ್ಚ್ 2026ರಂದು ಮಂಗಳೂರಿನ ಸುಜೀರ್ ಸಿ.ವಿ. ನಾಯಕ್ ಸಭಾಂಗಣದಲ್ಲಿ ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ವಿದುಷಿ ನಂದಿತಾ ಪೈ, ವಿಭಾ ನಾಯಕ್, ಶಾಂತೇರಿ ಕಾಮತ್ ಮತ್ತು ವಿದುಷಿ ಮೇಘಾ ಪೈ ಸೇರಿದಂತೆ ಪ್ರತಿಭಾನ್ವಿತ ಯುವ ಕಲಾವಿದರು ಸುಮಾರು ನಾಲ್ಕು ಗಂಟೆಗಳ ಕಾಲ ಸುಮಧುರ ಹಿಂದೂಸ್ತಾನಿ ಗಾಯನ ಸಂಗೀತ ಪ್ರದರ್ಶನ ನೀಡಿದರು. ಸಾಂಪ್ರದಾಯಿಕ ಶಾಸ್ತ್ರೀಯ ರಾಗಗಳಿಗೆ ಹೊಂದಿಸಲಾದ ವಿಶೇಷ ಕೊಂಕಣಿ ಸಂಯೋಜನೆಗಳ ಪ್ರಸ್ತುತಿ ಮಾಡಿದರು. ಯುವ ಬಾನ್ಸುರಿ ವಾದಕ ಪಿ. ಕಾರ್ತಿಕ್ ಭಟ್ ಇವರಿಂದ ಬಾನ್ಸುರಿ ವಾದನ ಜರಗಿತು. ಶ್ರೀವತ್ಸ ಭಟ್, ರಾಜೇಶ್ ಭಾಗವತ್ ತಬಲಾದಲ್ಲಿ ಮೇಧಾ ಭಟ್, ಹೇಮಂತ್ ಭಾಗವತ್ ಹಾರ್ಮೋನಿಯಂನಲ್ಲಿ ಸಾಥ್ ನೀಡಿದರು. ಜಿ.ಎಸ್.ಬಿ. ಸೇವಾ ಸಂಘದ ಅಧ್ಯಕ್ಷ ಡಾ. ಕಸ್ತೂರಿ ಮೋಹನ್ ಪೈಯವರು ಅತಿಥಿ ಕಲಾವಿದರಾಗಿ ಪ್ರದರ್ಶನ ನೀಡಿದರು.

ಸೇವಾ ಸಂಘದ ಅಧ್ಯಕ್ಷ ಡಾ. ಕಸ್ತೂರಿ ಮೋಹನ್ ಪೈ, ಕಾರ್ಯದರ್ಶಿ ಡಾ. ರಮೇಶ್ ಪೈ ಎ., ಖಜಾಂಚಿ ಕುಂಬಳೆ ನರಸಿಂಹ ಪ್ರಭು, ಶ್ರೀ ನಾರಾಯಣಿ ಸಂಗೀತ ಕಲಾ ಕೇಂದ್ರದ ಸಂಸ್ಥಾಪಕಿ ವಿದುಷಿ ನಂದಿತಾ ಪೈ, ಯಜ್ಞವಂತ ಪೈ, ಐಡಿಯಲ್ ಐಸ್‌ಕ್ರೀಂನ ಜಯಾ ಕಾಮತ್, ಎನ್.ಕೆ.ಜಿ.ಎಸ್.ಬಿ. ಕೋ-ಆಪರೇಟಿವ್ ಬ್ಯಾಂಕ್‌ನ ಕಿರಣ್ ಕುಮಾರನಾಯಕ, ಯೂನಿಯನ್ ಬ್ಯಾಂಕ್‌ನ ಪೂರ್ಣಚಂದ್ರ ನಾಯ್ಡ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಚಿತ್ರಾ ಎಸ್. ಶೆಣೈ, ಮಂಗಳಾ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಡಾ. ರಮೇಶ ಪೈ ವಂದಿಸಿದರು. ಎಂ.ಆರ್. ಕಾಮತ್, ಗೋವಿಂದರಾಯ ಪ್ರಭು ಅವರು ಕಲಾವಿದರ ಪರಿಚಯ ನೀಡಿದರು. ಡಾ. ಕಸ್ತೂರಿ ಮೋಹನ ಪೈ, ಬಿ.ಆರ್. ಶೆಣೈ, ಜಿ. ಮಾಧವರಾಯ ಪ್ರಭು, ಅರವಿಂದ ಆಚಾರ್ಯ, ವಿಜಯಚಂದ್ರ ಕಾಮತ್, ಮೋಹನದಾಸ ಪೈ, ಪ್ರತಿಮಾ ಪ್ರಭು ಕಲಾವಿದರನ್ನು ಸನ್ಮಾನಿಸಿದರು.
