ಮಂಗಳೂರು : ನೃತ್ಯ ಭಾರತಿ (ರಿ.) ಕದ್ರಿ ಮಂಗಳೂರು ಮತ್ತು ಶ್ರೀಮತಿ ರಾಧಾ ಕೆ. ಹಾಗೂ ಶಿವಪ್ರಸಾದ್ ಎಂ. ಭಟ್ ಇವರ ವತಿಯಿಂದ ವಿದುಷಿ ಶ್ರಾವ್ಯ ಎಂ. ಭಟ್ ಇವರ ಭರತನಾಟ್ಯ ರಂಗಪ್ರವೇಶಂ ಕಾರ್ಯಕ್ರಮವನ್ನು ದಿನಾಂಕ 24 ಜನವರಿ 2026ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಾಂತಲಾ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ್ ಮೋಹನ್ ಕುಮಾರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ಕಲಾಶ್ರೀ ರಾಜಶ್ರೀ ಉಳ್ಳಾಲ್, ವಿದ್ವಾನ್ ಸುಜಯ್ ಶ್ಯಾನ್ ಬೋಗ್ ಮತ್ತು ವಿದುಷಿ ಶ್ರೀವಿದ್ಯಾ ರಾವ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿದುಷಿ ಗೀತಾ ಸರಳಾಯ ಇವರ ನಿರ್ದೇಶನ, ವಿದುಷಿ ರಶ್ಮಿ ಸರಳಾಯ ಇವರ ನಟುವಾಂಗ, ವಿದ್ವಾನ್ ವಿನೀತ್ ಪುರವಂಕರ ಇವರ ಹಾಡುಗಾರಿಕೆ, ವಿದ್ವಾನ್ ಪೇಯನ್ನೂರ್ ರಾಜನ್ ಇವರ ಮೃದಂಗ ಮತ್ತು ಉಡುಪಿಯ ವಿದ್ವಾನ್ ಮುರಳೀಧರ ಇವರು ಕೊಳಲು ವಾದನದಲ್ಲಿ ಸಹಕರಿಸಲಿದ್ದಾರೆ.

