ಮಂಗಳೂರು : ಸ್ಪೀಕ್ ಮಕೇ ಎನ್.ಐ.ಟಿ.ಕೆ. ಇವರು ಪ್ರಸ್ತುತ ಪಡಿಸುವ ‘ವಿರಾಸತ್’ ಸಂಗೀತ, ನೃತ್ಯ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ದಿನಾಂಕ 4ರಿಂದ 8 ಫೆಬ್ರುವರಿ 2026ರಂದು ಸುರತ್ಕಲ್ಲಿನ ಎನ್.ಐ.ಟಿ.ಕೆ.ಯ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ದಿನಾಂಕ 4 ಫೆಬ್ರುವರಿ 2026ರಂದು ಸಂಜೆ 5-00 ಗಂಟೆಗೆ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಪದ್ಮಶ್ರೀ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ಇವರ ಹಿಂದೂಸ್ತಾನಿ ಗಾಯನಕ್ಕೆ ನರೇಂದ್ರ ನಾಯಕ್ ಹಾರ್ಮೋನಿಯಂ ಮತ್ತು ಪಂಡಿತ್ ಕೇಶವ್ ಜೋಶಿ ತಬಲಾ ಸಾಥ್ ನೀಡಲಿದ್ದಾರೆ.
ದಿನಾಂಕ 5 ಫೆಬ್ರುವರಿ 2026ರಂದು ಸಂಜೆ 6-00 ಗಂಟೆಗೆ ವಿದ್ವಾನ್ ಆರ್.ಕೆ. ಶ್ರೀರಾಮಕುಮಾರ್ ಇವರ ಕರ್ಣಾಟಿಕ್ ವಯೋಲಿನ್ ವಾದನಕ್ಕೆ ವಿದ್ವಾನ್ ಮನೋಜ್ ಸಿವ ಮೃದಂಗದಲ್ಲಿ ಮತ್ತು ವಿದ್ವಾನ್ ಅನಿರುದ್ಧ ಆತ್ರೇಯ ಇವರು ಕಾಂಜೀರದಲ್ಲಿ ಸಹಕರಿಸಲಿದ್ದಾರೆ.
ದಿನಾಂಕ 6 ಫೆಬ್ರುವರಿ 2026ರಂದು ಬೆಳಗ್ಗೆ 9-30 ಗಂಟೆಗೆ ವಿದುಷಿ ವೈಜಯಂತಿ ಕಾಶಿ ಇವರಿಂದ ಕೂಚಿಪುರಿ ಮತ್ತು ವಿದ್ವಾನ್ ಪ್ರವೀಣ್ ಕುಮಾರ್ ಇವರಿಂದ ಭರತನಾಟ್ಯ ಹಾಗೂ 1-30 ಗಂಟೆಗೆ ಶ್ರೀಮತಿ ಡಿ. ಪದ್ಮ ಇವರಿಂದ ‘ಸ್ವಡಸ್ಟ್ ಮಾಸ್ಕ್ ಮೇಕಿಂಗ್’, ಶ್ರೀ ಡಿ. ನಾಗೇಶ್ವರ್ ರಾವ್ ಇವರಿಂದ ‘ಚೆರಿಯಾಲ್ ಪೆಯಿಂಟಿಂಗ್’ ಮತ್ತು ವಿದುಷಿ ಮಾನಸಿ ಪ್ರಸಾದ್ ಇವರಿಂದ ಕರ್ನಾಟಿಕ್ ಶಾಸ್ತ್ರೀಯ ಸಂಗೀತದ ಕಾರ್ಯಾಗಾರ ನಡೆಯಲಿದೆ. ಸಂಜೆ ವಿದ್ವಾನ್ ಪ್ರವೀಣ್ ಕುಮಾರ್ ಮತ್ತು ತಂಡದವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ದಿನಾಂಕ 7 ಫೆಬ್ರುವರಿ 2026ರಂದು ಬೆಳಗ್ಗೆ 9-30 ಗಂಟೆಗೆ ವಿದುಷಿ ವೈಜಯಂತಿ ಕಾಶಿ ಇವರಿಂದ ಕೂಚಿಪುರಿ ಮತ್ತು ವಿದ್ವಾನ್ ಪ್ರವೀಣ್ ಕುಮಾರ್ ಇವರಿಂದ ಭರತನಾಟ್ಯ ಹಾಗೂ 1-30 ಗಂಟೆಗೆ ಶ್ರೀಮತಿ ಡಿ. ಪದ್ಮ ಇವರಿಂದ ‘ಸ್ವಡಸ್ಟ್ ಮಾಸ್ಕ್ ಮೇಕಿಂಗ್’, ಶ್ರೀ ಡಿ. ನಾಗೇಶ್ವರ್ ರಾವ್ ಇವರಿಂದ ‘ಚೆರಿಯಾಲ್ ಪೆಯಿಂಟಿಂಗ್’ ಮತ್ತು ವಿದುಷಿ ಮಾನಸಿ ಪ್ರಸಾದ್ ಇವರಿಂದ ಕರ್ನಾಟಿಕ್ ಶಾಸ್ತ್ರೀಯ ಸಂಗೀತದ ಕಾರ್ಯಾಗಾರ ನಡೆಯಲಿದೆ. ಸಂಜೆ 6-00 ಗಂಟೆಗೆ ವಿದುಷಿ ಎಸ್. ಸೌಮ್ಯ ಇವರ ಹಾಡುಗಾರಿಕೆ ನಡೆಯಲಿದೆ.
ದಿನಾಂಕ 8 ಫೆಬ್ರುವರಿ 2026ರಂದು ಬೆಳಗ್ಗೆ 9-30 ಗಂಟೆಗೆ ವಿದುಷಿ ವೈಜಯಂತಿ ಕಾಶಿ ಇವರಿಂದ ಕೂಚಿಪುರಿ ಮತ್ತು ವಿದ್ವಾನ್ ಪ್ರವೀಣ್ ಕುಮಾರ್ ಇವರಿಂದ ಭರತನಾಟ್ಯ ಹಾಗೂ 1-30 ಗಂಟೆಗೆ ಶ್ರೀಮತಿ ಡಿ. ಪದ್ಮ ಇವರಿಂದ ‘ಸ್ವಡಸ್ಟ್ ಮಾಸ್ಕ್ ಮೇಕಿಂಗ್’, ಶ್ರೀ ಡಿ. ನಾಗೇಶ್ವರ್ ರಾವ್ ಇವರಿಂದ ‘ಚೆರಿಯಾಲ್ ಪೆಯಿಂಟಿಂಗ್’ ಮತ್ತು ವಿದುಷಿ ಮಾನಸಿ ಪ್ರಸಾದ್ ಇವರಿಂದ ಕರ್ನಾಟಿಕ್ ಶಾಸ್ತ್ರೀಯ ಸಂಗೀತದ ಕಾರ್ಯಾಗಾರ ನಡೆಯಲಿದೆ. ಸಂಜೆ 6-00 ಗಂಟೆಗೆ ವಿದುಷಿ ವೈಜಯಂತಿ ಕಾಶಿ ಮತ್ತು ತಂಡದವರಿಂದ ಕೂಚಿಪುಡಿ ಪ್ರದರ್ಶನ ನಡೆಯಲಿದೆ.


