ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ಪ್ರಸ್ತುತ ಪಡಿಸುವ ಗಾಯನ ಸಂಗೀತ ಕಾರ್ಯಾಗಾರವು ದಿನಾಂಕ 10, 11, 12 ಮತ್ತು 13 ಸೆಪ್ಟೆಂಬರ್ 2026ರಂದು ನಾಲ್ಕು ದಿನಗಳ ಸಂಜೆ 7-30 ಗಂಟೆಯಿಂದ 9-00ರವೆರೆಗೆ ಆನ್ ಲೈನ್ ನಲ್ಲಿ ನಡೆಯಲಿದೆ. ವಿದ್ವಾನ್ ಮಲ್ಲಾಡಿ ಸೂರಿಬಾಬು ಇವರು ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ತ್ಯಾಗರಾಜ, ಭದ್ರಾಚಲ ರಾಮದಾಸು ಮತ್ತು ಅನ್ನಮಾಚಾರ್ಯ ಇವರ ಪದಗಳನ್ನು ಕಲಿಸಲಾಗುವುದು. ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಾಗಿ 74119 16098 ಸಂಖ್ಯೆಯನ್ನು ಸಂಪರ್ಕಿಸಿರಿ.

