ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘವು ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ 12ನೇ ಶತಮಾನದ ವಚನಕಾರ್ತಿಯರ ಕುರಿತಾದ ಒಂದು ದಿನದ ಕಮ್ಮಟವನ್ನು ದಿನಾಂಕ 28 ಫೆಬ್ರವರಿ 2026ರಂದು ಬೆಂಗಳೂರಿನ ಜೆ.ಎಸ್.ಎಸ್. ಸಭಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಈ ಕಮ್ಮಟಕ್ಕೆ 40 ಜನರನ್ನು ಮಾತ್ರ ಆಯ್ಕೆ ಮಾಡಲಾಗುವುದು ಮತ್ತು 40 ವಯಸ್ಸಿನ ಒಳಗಿರುವ ಯುವ ಬರಹಗಾರ್ತಿಯರಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಬೇಕಾದ ಇಮೇಲ್ ವಿಳಾಸ : [email protected] ನಿಮ್ಮ ಅರ್ಜಿಯಲ್ಲಿ ಒಳಗೊಂಡಿರಬೇಕಾದ ವಿವರಗಳು : ವಿಳಾಸ, ಸಂಪರ್ಕ ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ಐ.ಡಿ.ಗಳನ್ನು ತಪ್ಪದೇ ಕಳಿಸಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15 ಫೆಬ್ರವರಿ 2026. ಹೆಚ್ಚಿನ ಮಾಹಿತಿಗಾಗಿ ಕಮ್ಮಟದ ಸಂಚಾಲಕರು : ಇಂದಿರಾ ಶಿವಣ್ಣ 98455 35026 ಮತ್ತು ಡಾ. ಮುಕ್ತಾ ಬಿ. ಕಾಗಲಿ 9845689845 ಇವರನ್ನು ಸಂಪರ್ಕಿಸಿರಿ. ಪ್ರೊ. ಆರ್. ಸುನಂದಮ್ಮ ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ (ರಿ.) ಬೆಂಗಳೂರು.
