Subscribe to Updates

    Get the latest creative news from FooBar about art, design and business.

    What's Hot

    ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕದಿಂದ ‘ಭಾರತ್ ಕಲಾ ವೈಭವ’ ಸಾಂಸ್ಕೃತಿಕ ಉತ್ಸವ

    May 14, 2025

    ಬೆಂಗಳೂರಿನ ರಂಗಶಂಕರದಲ್ಲಿ ‘ರೊಶೊಮನ್’ ನಾಟಕ ಪ್ರದರ್ಶನ | ಮೇ 17

    May 13, 2025

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನಲ್ಲಿ ಯಕ್ಷ ಅಭಿಮಾನಿ ಬಳಗದಿಂದ “ಕುಂಭ ಸಂಭವ, ಉಭಯ ಕುಲ ಬಿಲ್ಲೋಜ” ಬಯಲಾಟ | ಸೆಪ್ಟೆಂಬರ್ 23ರಂದು
    Yakshagana

    ಮಂಗಳೂರಿನಲ್ಲಿ ಯಕ್ಷ ಅಭಿಮಾನಿ ಬಳಗದಿಂದ “ಕುಂಭ ಸಂಭವ, ಉಭಯ ಕುಲ ಬಿಲ್ಲೋಜ” ಬಯಲಾಟ | ಸೆಪ್ಟೆಂಬರ್ 23ರಂದು

    August 17, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮಂಗಳೂರು: ಯಕ್ಷಗಾನ ಕರಾವಳಿಯಲ್ಲಿ ಹುಟ್ಟಿ ಮಲೆನಾಡಿನವರೆಗೂ ಹಬ್ಬಿರುವ ಆಕರ್ಷಕ ಕಲೆ. ಕರಾವಳಿಯ ಈ ಗಂಡುಕಲೆ ಕನ್ನಡದ ಕಂಪನ್ನು ರಾಷ್ಟ್ರ , ಅಂತಾರಾಷ್ಟ್ರೀಯ ಮಟ್ಟಕ್ಕೆ ಬಿತ್ತರಿಸಿದೆ. ಕರಾವಳಿ ತೀರದ ಸಮುದ್ರದ ಅಲೆಗಳಂತೆ ಯಕ್ಷಗಾನಕ್ಕೂ ಸಮುದ್ರದ ಅಲೆಗಳ ನಾದವಿದೆ; ಭೋರ್ಗರೆತವಿದೆ. ಸಾಹಿತ್ಯ, ಸಂಗೀತ, ನೃತ್ಯ, ವಾದ್ಯ, ಅಭಿನಯ ಚಿತ್ರ ಮತ್ತಿತರ ಹಲವು ಬಗೆಯ ಉಪಾಂಗಗಳಿಂದ ಕೂಡಿದ ಯಕ್ಷಗಾನ ಒಂದು ಸಂಕೀರ್ಣ ಕಲೆ.
    ಯಕ್ಷಗಾನದ ಮೊದಲ ಉಲ್ಲೇಖ ಶಾರ್ಣದೇವನ “ಸಂಗೀತ ರತ್ನಾಕರ”ದಲ್ಲಿ (೧೨೧೦ ಕ್ರಿಶ) “ಜಕ್ಕ” ಎಂದು ಆಗಿದ್ದು ಮುಂದೆ “ಯಕ್ಕಲಗಾನ” ಎಂದು ಕರೆಯಲ್ಪಟ್ಟಿತು ಎಂಬುದು ಒಂದು ಅಭಿಪ್ರಾಯ. ಕ್ರಿಶ ೧೫೦೦ರ ವೇಳೆಗೆ ವ್ಯವಸ್ಥಿತವಾಗಿ ಯಕ್ಷಗಾನ ರೂಢಿಯಲ್ಲಿತ್ತು ಎಂಬುದು ಬಹಳ ವಿದ್ವಾಂಸರು ಒಪ್ಪುವ ವಿಚಾರ. ಜಾಗತಿಕ ರಂಗಭೂಮಿಯನ್ನು ಅವಲೋಕಿಸಿದರೆ ಇಷ್ಟು ಸುದೀರ್ಘ ಕಾಲದಲತ್ತ ಬಂದಿರುವ ಕಲೆಗಳಾದ ಕಥಕಳಿ, ಮೋಹನಿ ಅಷ್ಟಂ, ಸದೀರ್ ನೃತ್ಯ, ಷೇಕ್ಸ್ ಫಿಯರ್ ನಾಟಕಗಳಂತೆ ಯಕ್ಷಗಾನವೂ ಒಂದು. ಶುದ್ಧ ಕನ್ನಡದ ಉಳಿವಿಗೆ ಯಕ್ಷಗಾನದ ಕೊಡುಗೆ ಅಪಾರ. ಇದು ಸಮಾಜದಲ್ಲಿ‌ ಪೌರಾಣಿಕ ‌ಪ್ರಜ್ಞೆ ಮೂಡಿಸಿದ ಕಲೆ. ಯಕ್ಷಗಾನದ ಮೇಲೆ ದಾಸ ಪಂಥದ ಪ್ರಭಾವವೂ ಗಮನಾರ್ಹ. ಇದನ್ನು ಯಕ್ಷಗಾನದ ಪ್ರಸಂಗ ಸಾಹಿತ್ಯದಲ್ಲಿ ಕಾಣಬಹುದು.
    2014ರಂದು ಶ್ರೀಯುತ ಪ್ರಶಾಂತ್ ಉಡುಪ ಅವರ ಮೂಲಕ ಪ್ರಾರಂಭಗೊಂಡ ಯಕ್ಷ ಅಭಿಮಾನಿ ಬಳಗ whatsaap ಬಳಗ ನಂತರದ ದಿನಗಳಲ್ಲಿ ಸಮಾನ ಮನಸ್ಕ ಯಕ್ಷಗಾನ ಕಲೆಯ ಅಭಿಮಾನಿಗಳ ಒಗ್ಗೂಡುವಿಕೆಯಿಂದ ರೂಪುಗೊಂಡ ನಮ್ಮ ಈ ಬಳಗವು ಸಾಮಾಜಿಕ ಜಾಲತಾಣದ ಮೂಲಕವಾಗಿ ಕರಾವಳಿಯ ಶ್ರೀಮಂತ ಕಲೆಯ ಬೆಳವಣಿಗೆಯ ಮಹತ್ತರ ಆಶಯವನ್ನು ಹೊಂದಿಕೊಂಡು ಕಲಾಮಾತೆಯ ಕೃಪಾಕಟಾಕ್ಷ, ಕಲಾ ಪೋಷಕರ ಪ್ರೋತ್ಸಾಹ ಹಾಗೂ ಕಲಾಭಿಮಾನಿಗಳ, ಕಲಾವಿದರ ಸಹಕಾರದಿಂದ 2016ರಲ್ಲಿ ಐದು ಮಂದಿ ಹಿರಿಯ ಕಲಾವಿದರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿ, ವಿಶಿಷ್ಟ ಸಂಯೋಜನೆಯೊಂದಿಗೆ “ಶ್ರೀ ದೇವಿ ಮಹಾತ್ಮೆ” ಎಂಬ ಪುಣ್ಯ ಕಥಾಭಾಗವನ್ನು ಹಾಗೂ 2018ರಲ್ಲಿ ಮೂರು ಮಂದಿ ಹಿರಿಯ ಕಲಾವಿದರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿ “ಪಾರ್ಥ ಏವ ಧನುರ್ಧರ” ಎಂಬ ಯಕ್ಷಗಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ ಎಂದು ಹೇಳಲು ಹೆಮ್ಮೆ ಪಡುತ್ತೇವೆ.
    ಈ ಎರಡು ಸಂಘಟನೆಯ ಯಶಸ್ವಿಯ ನಾಲ್ಕು ವರ್ಷಗಳ ನಂತರ ಮತ್ತೆ ನಮ್ಮ ತೃತೀಯ ಕಾರ್ಯಕ್ರಮವಾಗಿ ಹಿರಿಯ ಕಲಾವಿದರಿಗೆ ಸನ್ಮಾನ ಹಾಗೂ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ) ನಿಡ್ಲೆ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ
    “ಕುಂಭ ಸಂಭವ, ಉಭಯ ಕುಲ ಬಿಲ್ಲೋಜ” ಎಂಬ ಪ್ರಸಂಗದ ಬಯಲಾಟವನ್ನು ಆಯೋಜಿಸಿದ್ದೇವೆ.
    “ಶಾಪಾದಪಿ ಶರಾದಪಿ” ಎಂದು ನೆಗಳ್ತೆಯನ್ನು ಪಡೆದ ಗುರು ದ್ರೋಣಾಚಾರ್ಯರ ಜೀವನ ಚರಿತ್ರೆಯ ಅಪರೂಪದ ಕಥಾಭಾಗಗಳನ್ನು ನೋಡಲು ಮರೆಯದಿರಿ.
    ಕಲಾಪೋಷಕರಾದ, ಕಲಾಭಿಮಾನಿಗಳಾದ ತಾವುಗಳು ಉದಾರ ಹೃದಯಿಗಳಾಗಿ ತನು ಮನ ಧನಗಳಿಂದ ಯಕ್ಷಗಾನ ಸಂಘಟಕರನ್ನು ಪ್ರೋತ್ಸಾಹಿಸಬೇಕು ಎಂದು   ವಿನಂತಿಸಿಕೊಳುತ್ತಿದ್ದೇವೆ.
    ಯಕ್ಷಗಾನ ಕಂಪನ್ನು ಪಸರಿಸಿ, ಕಲೆಗೆ ಪ್ರೋತ್ಸಾಹ ನೀಡಿ ಹಾಗೂ ಸಂಘಟಕರನ್ನು ಪ್ರೋತ್ಸಾಹಿಸಿ…..
    23.09.2023ರ ಸಂಜೆ 6 ಗಂಟೆಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ ಇಡ್ಯಾ, ಸುರತ್ಕಲ್ ಮಂಗಳೂರು.
    ಕಲಾಭಿಮಾನಿಗಳಾದ ನಾವೆಲ್ಲರೂ ಭೇಟಿಯಾಗೋಣ..
    ಸರ್ವರಿಗೂ ಆದರದ ಸ್ವಾಗತ. ಯಕ್ಷಗಾನಂ ವಿಶ್ವಗಾನಂ.
    • ಶ್ರವಣ್ ಕಾರಂತ್ ಕೆ.

    Share. Facebook Twitter Pinterest LinkedIn Tumblr WhatsApp Email
    Previous Articleವ್ಯಕ್ತಿ ಪರಿಚಯ | ‘ಜಾನಪದ ಜ್ಞಾನ ಭಂಡಾರ’ ರಮೇಶ್ ಕಲ್ಮಾಡಿ
    Next Article ಉಳ್ಳಾಲ ಕಸಾಪದಿಂದ ‘ಕನ್ನಡ ಕಲರವ’ ಉಪನ್ಯಾಸ ಕಾರ್ಯಕ್ರಮ
    roovari

    Add Comment Cancel Reply


    Related Posts

    ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕದಿಂದ ‘ಭಾರತ್ ಕಲಾ ವೈಭವ’ ಸಾಂಸ್ಕೃತಿಕ ಉತ್ಸವ

    May 14, 2025

    ಸಂಪೆಕಟ್ಟೆಯಲ್ಲಿ ಯಶಸ್ವಿ ಕಲಾವೃಂದದ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    May 13, 2025

    ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಪಾಕ್ಷಿಕ ತಾಳಮದ್ದಳೆ

    May 12, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.